Maruti S-Presso: ಹೊಸ ಕಾರ್ ಖರೀದಿಸುವವರಿಗೆ ಸಂಕ್ರಾಂತಿ ಹಬ್ಬದ ಆಫರ್, 4 ಲಕ್ಷಕ್ಕೆ ಮನೆಗೆ ತನ್ನಿ ಈ ಮಾರುತಿ ಕಾರ್

ಮಾರುತಿಯವರ ಹೊಸ ಕಾರು ಮಾರುಕಟ್ಟೆಯಲ್ಲಿ ಉತ್ತಮ ರಿಯಾಯಿತಿಯಲ್ಲಿ ಲಭ್ಯ , ಇಂದೇ ಬುಕ್ ಮಾಡಿ

Maruti S-Presso Price In India: ದೇಶಿಯ ಕಾರು ತಯಾರಕ ಕಂಪನಿಯಲ್ಲಿ ಮಾರುತಿ ಸುಜುಕಿ ಬಹಳ ಜನಪ್ರಿಯತೆ ಹೊಂದಿದ ಕಂಪನಿ ಆಗಿದೆ. ದೇಶಾದ್ಯಂತ ಆಯ್ದ ಮಾರುತಿ ಸುಜುಕಿ (Maruti Suzuki) ಡೀಲರ್‌ಗಳು, ಅರೆನಾ ಹಾಗೂ ನೆಕ್ಸಾ ಶೋರೂಂ ಮೂಲಕ ಮಾರಾಟಗೊಳಿಸುವ ವಿವಿಧ ಕಾರುಗಳ ಮೇಲೆ ಈ ಜನವರಿ ತಿಂಗಳು ದೊಡ್ಡ ಡಿಸ್ಕೌಂಟ್ ಆಫರ್ ಘೋಷಣೆ ಮಾಡಿದೆ. ಜನಪ್ರಿಯ ಎಸ್-ಪ್ರೆಸ್ಸೊ (S-Presso) ಕಾರು ಸಹ ಭರ್ಜರಿ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಈ ಕಾರಿನ ರಿಯಾಯಿತಿ ಆಫರ್ ನ ಸಂಪೂರ್ಣ ಮಾಹಿತಿ ಹೀಗಿದೆ.

Maruti S-Presso Price In India
Image Credit: gqindia

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (S-Presso)ಕಾರಿನ ವೈಶಿಷ್ಟತೆಗಳು

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರು ಪ್ರಮುಖವಾಗಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಕೀಲೆಸ್ ಎಂಟ್ರಿಯನ್ನು ಒಳಗೊಂಡಿದೆ. ಜೊತೆಗೆ 240 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಈ ಕಾರಿನಲ್ಲಿ 4 ಜನರು ಆರಾಮದಾಯಕವಾಗಿ ಪ್ರಯಾಣಿಸಬಹುದು. ಈ ಕಾರಿನಲ್ಲಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌, EBD, ABS, ರೇರ್ ಪಾರ್ಕಿಂಗ್ ಸೇನಾರ್ಸ್, ಹಿಲ್ ಹೋಲ್ಡ್ ಅಸಿಸ್ಟ್, ESP ಅನ್ನು ಪಡೆದಿದೆ. ಸಾಲಿಡ್ ಸಿಜ್ಲೆ ಆರೆಂಜ್, ಸಾಲಿಡ್ ಫೈರ್ ರೆಡ್, ಮೆಟಾಲಿಕ್ ಗ್ರಾನೈಟ್ ಗ್ರೇ, ಮೆಟಾಲಿಕ್ ಸಿಲ್ಕಿ ಸಿಲ್ವರ್ ಒಳಗೊಂಡಂತೆ 7 ಬಣ್ಣಗಳೊಂದಿಗೆ ಲಭ್ಯವಿದೆ.

ಮಾರುತಿ ಸುಜುಕಿ ಕಾರಿನ ಎಸ್-ಪ್ರೆಸ್ಸೊ (S-Presso)ಎಂಜಿನ್ ಹಾಗು ಮೈಲೇಜ್

CNG ಕಾರು ಇದೇ ಎಂಜಿನ್ ಹೊಂದಿದೆ. ಆದರೆ, 57 PS ಪವರ್, 82 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 5 – ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಮಾತ್ರ ಹೊಂದಿದೆ. ಪೆಟ್ರೋಲ್ ರೂಪಾಂತರಗಳು 24.12 kmpl – 25.30 kmpl, ಸಿಎನ್‌ಜಿ ರೂಪಾಂತರ 32.73 km/kg ಇಂಧನ ದಕ್ಷತೆಯನ್ನು ಒಳಗೊಂಡಿವೆ. ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಯಲ್ಲಿ ಸಿಗಲಿದೆ. ಇದರ 1 – ಲೀಟರ್ ಪೆಟ್ರೋಲ್ ಎಂಜಿನ್ 67 PS ಗರಿಷ್ಠ ಪವರ್, 89 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 5 – ಸ್ವೀಡ್ ಮ್ಯಾನುವಲ್ ಅಥವಾ 5 – ಸ್ವೀಡ್ ಎಎಂಟಿ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ.

Join Nadunudi News WhatsApp Group

Maruti S-Presso Feature
Image Credit: Theauto

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (S-Presso)ಕಾರಿನ ಬೆಲೆ
ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ರೂ. 4.26 ಲಕ್ಷದಿಂದ ರೂ.6.12 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಒಟ್ಟು ರೂ. 50,000 ವರೆಗೆ ರಿಯಾಯಿತಿ ಪ್ರಯೋಜನವನ್ನು ಪಡೆದಿದೆ.

2023ರ ಮಾದರಿಗಳು ರೂ. 30,000 ನಗದು ರಿಯಾಯಿತಿ, ರೂ. 15,000 ವಿನಿಮಯ ಬೋನಸ್, ರೂ. 4,000 ಕಾರ್ಪೊರೇಟ್ ಡಿಸ್ಕೌಂಟ್ ಅನ್ನು ಹೊಂದಿವೆ. 2024ರ ಮಾದರಿಗಳು ರೂ.23,000 ಕ್ಯಾಶ್ ಡಿಸ್ಕೌಂಟ್, ರೂ.15,000 ವಿನಿಮಯ ಬೋನಸ್, ರೂ. 4,000 ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿವೆ. ಈ ರಿಯಾಯಿತಿ ಸೌಲಭ್ಯಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆ ಆಗಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂ ಭೇಟಿ ನೀಡಿ.

Join Nadunudi News WhatsApp Group