Maruti Sedan: ಕೇವಲ 1.50 ಲಕ್ಷಕ್ಕೆ ಖರೀದಿಸಿ ಮಾರುತಿ ಸೆಡಾನ್, ಈ ಆಫರ್ ಕೆಲವು ದಿನಗಳು ಮಾತ್ರ ಲಭ್ಯ.

ಮಾರುತಿ ಸೆಡಾನ್ ಕಾರ್ ನ ಖರೀದಿಯ ಮೇಲೆ ಇರುವ ರಿಯಾಯಿತಿ ಬಗ್ಗೆ ಮಾಹಿತಿ ತಿಳಿಯಿರಿ.

Maruti Sedan Dzire: ಪ್ರತಿಷ್ಠಿತ ಕಾರು ತಯಾರಕ ಕಂಪನಿಯಾದ ಮಾರುತಿ (Maruti Company) ಇದೀಗ ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಮಾರುತಿ ಸುಜುಕಿ ಕಂಪನಿ ತನ್ನ ಕಂಪನಿಯ ಕಾರುಗಳ ಮೇಲೆ ರಿಯಾಯಿತಿಯನ್ನು ಕೂಡ ನೀಡುತ್ತಿದೆ. ಇನ್ನು ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡಿ ಮಾರುತಿ ಕಂಪನಿ ತನ್ನ ಮಾರಾಟವನ್ನು ಹೆಚ್ಚಿಸಿಕೊಂಡಿದೆ. 
ಮಾರುತಿ ಸೆಡಾನ್ ಕಾರ್ 
ಇನ್ನು ಮಾರುತಿ ಸೆಡಾನ್ ವಿಭಾಗದಲ್ಲಿ ಡಿಸೈರ್ ಹೆಚ್ಚು ಜನಪ್ರಿಯತೆ ಪಡೆದಿದೆ. ಕಂಪನಿಯು ಈ ಸೆಡಾನ್ ಅನ್ನು ಕ್ರಮವಾಗಿ LXi, VXi, ZXi ಮತ್ತು ZXi 4 ಟ್ರಿಮ್‌ಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಮಾರುತಿ ಕಂಪನಿಯ ಕಾರ್ ಗಳಲ್ಲಿ 9 ರೂಪಾಂತರಗಳನ್ನು ನೋಡಬಹುದಾಗಿದೆ ಹಾಗೂ ಅದರಲ್ಲಿ 2 CNG ರೂಪಾಂತರಗಳಾಗಿವೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಮಾರುತಿ ಸೆಡಾನ್ ನ ಬೆಲೆ 6 .51 ಲಕ್ಷ ರೂ. ಆಗಿದೆ.
Buy Maruti Sedan for just 1.50 lakhs
Image Credit: Cartrade
ಇನ್ನು ಮಾರುತಿ ಸೆಡಾನ್ ಕಾರ್ ಅನ್ನು ಕೇವಲ 2 ಲಕ್ಷ ಡೌನ್ ಪೇಮೆಂಟ್ ನ ಮೂಲಕ ಖರೀದಿಸಬಹುದಾಗಿದೆ. ಮಾರುತಿ ಕಂಪನಿಯು ತನ್ನ ಹೊಸ ಮಾದರಿಯ ಕಾರ್ ಗಳ ಖರೀದಿಯ ಮೇಲೆ ವಿಶೇಷ ಹಣಕಾಸು ಯೋಜನೆಯನ್ನು ಘೋಷಿಸಿದೆ. ನೀವು ಕಾರ್ ಖರೀದಿಸಲು ಯೋಜಿಸುತ್ತಿದ್ದರೆ ಈ ಮಾರುತಿ ಕಂಪನಿಯ ಈ ರಿಯಾಯಿತಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
ಕೇವಲ 1.50 ಲಕ್ಷಕ್ಕೆ ಖರೀದಿಸಿ ಮಾರುತಿ ಸೆಡಾನ್
ದೆಹಲಿ ಮಾರುಕಟ್ಟೆಯಲ್ಲಿ ಮಾರುತಿ ಸೆಡಾನ್ ನ ಬೆಲೆ 6 .51 ಲಕ್ಷ ಆಗಿದೆ. ಈ ಕಾರಿನ ಆನ್ ರೋಡ್ ಬೆಲೆ 7 .42 ಲಕ್ಷ ರೂ. ಆಗಿದೆ. ಈ ಕಾರ್ ಅನ್ನು ನಿಮಗೆ ಒಂದೇ ಪೇಮೆಂಟ್ ನಲ್ಲಿ ಖರೀದಿಸಲು ಕಷ್ಟವಾದರೆ ಕಂಪನಿ EMI ಸೌಲಭ್ಯವನ್ನು ಒದಗಿಸಿದೆ. ಬ್ಯಾಂಕ್ ನಲ್ಲೂ ಈ ಕಾರ್ ಅನ್ನು ಖರೀದಿಸಲು 5 ವರ್ಷಗಳ ಸಾಲವನ್ನು ಪಡೆಯಬಹುದು.
Buy Maruti Sedan for just 1.50 lakhs
Image Credit: Cartoq
 ವಾರ್ಷಿಕವಾಗಿ ಶೇ. 9 .8 ಬಡ್ಡಿದರದಲ್ಲಿ ಮಾಸಿಕ 13596 ರೂ. EMI ಪಾವತಿಸಬೇಕಾಗುತ್ತದೆ. ಮಾರುತಿ ಸೆಡಾನ್  1.2-ಲೀಟರ್ ಡ್ಯುಯಲ್ಜೆಟ್ ಪೆಟ್ರೋಲ್ ಎಂಜಿನ್‌ ಹೊಂದಿದ್ದು, ಗರಿಷ್ಠ 90 PS ಪವರ್ ಮತ್ತು 113Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸೆಡಾನ್‌ನ CNG ಆವೃತ್ತಿಯು 77PS ಗರಿಷ್ಠ ಶಕ್ತಿ ಮತ್ತು 98.5Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Join Nadunudi News WhatsApp Group