Alto K10 : Alto K10 ಖರೀದಿಗೆ ಭರ್ಜರಿ ಡಿಸ್ಕೌಂಟ್, ಕೇವಲ 4 ಲಕ್ಷಕ್ಕೆ ಖರೀದಿಸಿ ಹೊಸ ಕಾರ್

ಹೊಸ ವರ್ಷಕ್ಕೆ Alto K10 ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ.

Maruti Suzuki Alto K10 Offer: ಇನ್ನು ದೇಶಿಯ ಮಾರುಕಟ್ಟೆಯಲ್ಲಿ Maruti Suzuki ಕಂಪನಿ ಪೆಟ್ರೋಲ್, CNG ಮಾದರಿಯ ಕಾರ್ ಗಳನ್ನೂ ಗ್ರಾಹಕರಿಗಾಗಿ ಪರಿಚಯಿಸಿದೆ. ಸಾಮಾನ್ಯವಾಗಿ ಗ್ರಾಹಕರು ಹೆಚ್ಚಿನ ಮೈಲೇಜ್ (Mileage) ನೀಡುವ ವಾಹನವನ್ನೇ ಖರೀದಿಸುತ್ತಾರೆ. ಹೆಚ್ಚಿನ ಮೈಲೇಜ್ ನೀಡುವಲ್ಲಿ Maruti suzuki ಹೆಸರುವಾಸಿಯಾಗಿದೆ.

ಇದೀಗ ಗ್ರಾಹಕರಿಗಾಗಿ ಮಾರುತಿ ಬರ್ಜರಿ ಆಫರ್ ನೀಡಿದೆ. ಮಾರುತಿ ಈ ಕಾರ್ ಅನ್ನು ನೀವು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ನೀವು ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಕಾರ್ ಅನ್ನು ಪಡೆಯಲು ಬಯಸಿದರೆ ಮಾರುತಿ ಕಂಪನಿ ನಿಮಗೆ ಈ ಅವಕಾಶವನ್ನು ನೀಡುತ್ತಿದೆ. ಹೊಸ ವರ್ಷದ ಶುಭಾರಂಭಕ್ಕೆ ನೀವು ಅಗ್ಗದ ಬೆಲೆಯಲ್ಲಿ ಕಾರ್ ಅನ್ನು ಖರೀದಿಸಬಹುದಾಗಿದೆ.

Maruti Suzuki Alto K10 Offer
Image Credit: Autox

Maruti Suzuki Alto K10
ಮಾರುತಿ ಸುಜುಕಿ ಆಲ್ಟೊ K10 1-ಲೀಟರ್ ಡ್ಯುಯಲ್- ಜೆಟ್ ಪೆಟ್ರೋಲ್ ಎಂಜಿನ್‌ಅನ್ನು ಹೊಂದಿದ್ದು, ಈ ಎಂಜಿನ್ 67 PS ಗರಿಷ್ಠ ಶಕ್ತಿ ಮತ್ತು 89 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ ಬಾಕ್ಸ್‌ ನೊಂದಿಗೆ ಲಭ್ಯವಿದೆ. ಈ ಕಾರಿನ ಸಿಎನ್‌ ಜಿ ರೂಪಾಂತರವು ಇದೆ ರೀತಿಯ ಎಂಜಿನ್ ಆಯ್ಕೆಯನ್ನು ಹೊಂದಿದೆ. ಆದಾಗ್ಯೂ, ಇದು ಕಡಿಮೆ 57 PS ಪವರ್, 82 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯು ಗ್ರಾಹಕರಿಗೆ ಲಭ್ಯವಿದೆ.

ಹೆಚ್ಚಿನ ಮೈಲೇಜ್ ಜೊತೆಗೆ ಅಗ್ಗದ ಬೆಲೆಯ ಕಾರ್
ಮಾರುತಿ ಸುಜುಕಿ ಆಲ್ಟೊ K10 ನ ಪೆಟ್ರೋಲ್ ರೂಪಾಂತರ ಪ್ರತಿ ಲೀಟರ್ ಗೆ 24.39 km ಮೈಲೇಜ್ ನೀಡಿದರೆ CNG ರೂಪಾಂತರಗಳು ಪ್ರತಿ ಕೆಜಿಗೆ 33.85 km ಮೈಲೇಜ್ ನೀಡುತ್ತವೆ. ಮಾರುಕಟ್ಟೆಯಲ್ಲಿ Maruti Suzuki Alto K10 ಸರಿಸುಮಾರು 3 .99 ಲಕ್ಷದಿಂದ 4 .96 ಲಕ್ಷ ಬೆಳೆಯ ಲಭ್ಯವಾಗಲಿದೆ. ಅಗ್ಗದ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರ್ ಇದದಾಗಿದ್ದು ನಿಮಗೆ ಈ ಕಾರ್ ನ ಖಾರಿದಿಗೆ ಆಕರ್ಷಕ ರಿಯಾಯಿತಿ ಕೊಡ ಲಭ್ಯವಿದೆ.

Maruti Suzuki Alto K10 Price
Image Credit: Motorbeam

Alto K10 ಖರೀದಿಗೆ ಭರ್ಜರಿ ಡಿಸ್ಕೌಂಟ್
•ಮಾರುತಿ ಸುಜುಕಿಯ ಪ್ರವೇಶ ಮಟ್ಟದ ಆಲ್ಟೊ ಕೆ10 ಹ್ಯಾಚ್‌ ಬ್ಯಾಕ್ ಒಟ್ಟು ರೂ.54,000 ವರೆಗಿನ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಆಲ್ಟೊ ಕೆ10 ಪೆಟ್ರೋಲ್ ರೂಪಾಂತರಗಳು ರೂ. 35,000 ನಗದು ರಿಯಾಯಿತಿ, ರೂ.15,000 ವಿನಿಮಯ ಬೋನಸ್ ಮತ್ತು ರೂ. 4,000 ಕಾರ್ಪೊರೇಟ್ ರಿಯಾಯಿತಿಯನ್ನು ಪಡೆಯುತ್ತವೆ.

Join Nadunudi News WhatsApp Group

•ಮಾರುತಿ ಸುಜುಕಿ ಆಲ್ಟೊ K10 ನ CNG ರೂಪಾಂತರಗಳು ರೂ. 25,000 ನಗದು ರಿಯಾಯಿತಿ ಮತ್ತು ರೂ.15,000 ವಿನಿಮಯ ಬೋನಸ್ ಅನ್ನು ಒಳಗೊಂಡಿವೆ. ಆದಾಗ್ಯೂ, ಡೀಲರ್‌ ಶಿಪ್‌ ನಿಂದ ಅನ್ವಯವಾಗುವ ಈ ರಿಯಾಯಿತಿ ಸೌಲಭ್ಯಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ನೀವು Maruti Suzuki Alto K10 ನ ಪೆಟ್ರೋಲ್ ಹಾಗೂ CNG ಎರಡು ರೂಪಾಂತರದಲ್ಲಿಯೂ ರಿಯಾಯಿತಿಯನ್ನು ಪಡೆಯಬಹುದು.

Join Nadunudi News WhatsApp Group