Maruti Brezza: ಹೊಸ ಮಾದರಿಯ ಬ್ರೆಜಾ ಖರೀದಿಸಲು ಮುಗಿಬಿದ್ದ ಜನರು, ಕಡಿಮೆ ಬೆಲೆ ಮತ್ತು ಭರ್ಜರಿ 25 Km ಮೈಲೇಜ್

ಮಾರಾಟದಲ್ಲಿ ದಾಖಲೆ ಬರೆದ ಬ್ರೆಜಾ, ಕಡಿಮೆ ಬೆಲೆ ಮತ್ತು 25 Km ಮೈಲೇಜ್

Maruti Suzuki Brezza Car: ಮಾರುತಿ ಸುಜುಕಿ (Maruti Suzuki) ಕಾರು ಕಂಪನಿ ಇದು ದೇಶದಲ್ಲಿ ಬಹಳ ಪ್ರಸಿದ್ದಿ ಪಡೆದ ಕಂಪನಿ ಆಗಿದೆ. ಉತ್ತಮ ಕಾರು ಪರಿಚಯಿಸುವಲ್ಲಿ ಮಾರುತಿ ಹೆಸರುವಾಸಿ ಆಗಿದೆ. ಈ ಕಂಪನಿಯ ಕಾರುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯದೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವುದರಿಂದ ಹೆಚ್ಚು ಬೇಡಿಕೆಯನ್ನು ಪಡೆದಿದೆ.

ಮಾರುತಿಯವರ ಬ್ರೆಝಾ (Brezza) ಎಸ್‌ಯುವಿ ಮಾರಾಟದಲ್ಲಿ ಐತಿಹಾಸಿಕ ದಾಖಲೆಯನ್ನು ನಿರ್ಮಾಣ ಮಾಡಿದ ಕಾರಾಗಿದೆ. ಬಿಡುಗಡೆಗೊಂಡ ದಿನದಿಂದಲೂ ಈ ಕಾರಿಗೆ ಹೆಚ್ಚಿನ ಬೇಡಿಕೆಯಿದ್ದು, ಈವರೆಗೆ 10 ಲಕ್ಷ ಯುನಿಟ್ ಕಾರನ್ನು ಮಾರಾಟಗೊಳಿಸಿದ ಮೈಲಿಗಲ್ಲನ್ನು ಸಾಧಿಸಿದೆ.

Maruti Suzuki Brezza Car
Image Credit: Carwale

ಮಾರುತಿ ಸುಜುಕಿ ಬ್ರೆಝಾ (Brezza) ಕಾರಿನ ಫೀಚರ್ಸ್

ಈ ಮಾರುತಿ ಸುಜುಕಿ ಬ್ರೆಝಾ 9-inch touchscreen infotainment system, wireless Android Auto, Apple CarPlay, 4-speaker sound system, single-pane sunroof, ambient lighting, wireless phone charging, heads-up display, 360-degree camera ಅನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಕಾರು ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್‌, ABS , EBD, ESC, Hill-hold assist, seat belt reminder, rare parking sensors ಅನ್ನು ಹೊಂದಿದೆ.

ಮಾರುತಿ ಸುಜುಕಿ ಬ್ರೆಝಾ (Brezza) ಕಾರಿನ ಎಂಜಿನ್ ಹಾಗು ಮೈಲೇಜ್

Join Nadunudi News WhatsApp Group

ಮಾರುತಿ ಸುಜುಕಿ ಬ್ರೆಝಾ 2 ಪವರ್ ಟ್ರೈನ್ ಆಯ್ಕೆಯನ್ನು ಹೊಂದಿದೆ. 1.5 – ಲೀಟರ್ ಪೆಟ್ರೋಲ್ ಎಂಜಿನ್ 103 PS ಗರಿಷ್ಠ ಪವರ್ ಹಾಗೂ 137 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. CNG ಪವರ್ ಟ್ರೈನ್ ಪಡೆದಿರುವ ಕಾರು, ಇದೇ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಆದರೆ, 88 PS ಪವರ್, 121.5 Nm ಪೀಕ್ ಟಾರ್ಕ್ ಉತ್ಪಾದಿಸಲು ಶಕ್ತವಾಗಿದೆ. ಬ್ರೆಝಾ ರೂಪಾಂತರಗಳಿಗೆ ಅನುಗುಣವಾಗಿ 5 – ಸ್ವೀಡ್ ಮ್ಯಾನುವಲ್, 6 – ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಪೆಟ್ರೋಲ್ ರೂಪಾಂತರಗಳು 17.38 kmpl – 19.8 kmpl, CNG ವೇರಿಯೆಂಟ್ಸ್ 25.51km/kg ಮೈಲೇಜ್ ನೀಡುತ್ತವೆ.

Maruti Suzuki Brezza Car Price
Image Credit: Cartrade

ಮಾರುತಿ ಸುಜುಕಿ ಬ್ರೆಝಾ (Brezza) ಕಾರಿನ ಬೆಲೆ

ಈ ವರ್ಷದ ಏಪ್ರಿಲ್ ತಿಂಗಳಿಂದ ನವೆಂಬರ್ ನಡುವಿನ ಅವಧಿಯಲ್ಲಿ ಮಾರುತಿ ಸುಜುಕಿ ಭರ್ತಿ 1,11,371 ಯುನಿಟ್ ಬ್ರೆಝಾ ಕಾರುಗಳನ್ನು ಮಾರಾಟಗೊಳಿಸಲು ಯಶಸ್ವಿಯಾಗಿದೆ. ಬ್ರೆಝಾ ರೂ.8.29 ಲಕ್ಷದಿಂದ ರೂ.14.14 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. 5 ಆಸನ ವ್ಯವಸ್ಥೆಯನ್ನು ಹೊಂದಿರುವ ಈ ಕಾರು, ಎಲ್‌ಎಕ್ಸ್‌ಐ, ವಿಎಕ್ಸ್‌ಐ ಸೇರಿದಂತೆ 4 ರೂಪಾಂತರ, ಸಿಜ್ಲಿಂಗ್ ರೆಡ್, ಬ್ರೇವ್ ಖಾಖಿ, ಎಕ್ಸುಬರಂಟ್ ಬ್ಲೂ, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್, ಪರ್ಲ್ ಆರ್ಕ್ಟಿಕ್ ವೈಟ್ ಒಳಗೊಂಡಂತೆ 6 – ಮೊನೊಟೊನ್, 3 – ಡುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ.

Join Nadunudi News WhatsApp Group