Brezza EMI: 9 ಲಕ್ಷದ ಬ್ರೆಜಾ ಕಾರಿಗೆ 1 ಲಕ್ಷ ಡೌನ್ ಪೇಮೆಂಟ್ ಮಾಡಿದರೆ ತಿಂಗಳ EMI ಎಷ್ಟು…? 5 ವರ್ಷ ಅವಧಿ

ಮಾರುತಿ ಸುಜುಕಿ ಬ್ರೆಝ ಖರೀದಿಗೆ ಎಷ್ಟು EMI ಪಾವತಿಸಬೇಕು...? ಇಲ್ಲಿದೆ ಡಿಟೈಲ್ಸ್.

Maruti Suzuki Brezza EMI Details: ಆಕರ್ಷಕ ವಿನ್ಯಾಸ ಹಾಗೂ ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಭಾರತೀಯ ಆಟೋ ವಲಯದಲ್ಲಿ ಸಾಕಷ್ಟು ನೂತನ ಮಾದರಿಯ SUV ಗಳು ಲಾಂಚ್ ಆಗಿವೆ. ಸದ್ಯ ಜನಪ್ರಿಯ SUV ಗಳಲ್ಲಿ Maruti Suzuki Brezza ಕೂಡ ಸೇರಿಕೊಂಡಿವೆ. ಇತ್ತೀಚಿಗೆ ಬಿಡುಗಡೆಗೊಂಡ Brezza ಮಾದರಿ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. Brezza ಖರೀದಿಗಾಗಿ ಜನರು ಕಾಯುತ್ತಿದ್ದಾರೆ.

ನೀವು 2024 ರಲ್ಲಿ ಕಾರ್ ಖರೀದಿಸುವ ಯೋಜನೆಯಲ್ಲಿದ್ದರೆ ಈ Brezza ಮಾದರಿ ನಿಮಗೆ ಬೆಸ್ಟ್ ಆಯ್ಕೆಯಾಗಲಿದೆ. ನೀವು ಯಾವುದೇ ತೊಂದರೆ ಇಲ್ಲದೆ ಕಡಿಮೆ ಬೆಲೆಯಲ್ಲಿ ಈ ಮಾದರಿಯನ್ನು ಖರೀದಿಸಬಹುದು. ಕಾರಣ ಕಂಪನಿಯು ಗ್ರಾಹಕರಿಗೆ ಸಹಾಯವಾಗಲಿ ಎನ್ನುವ ಕಾರಣಕ್ಕೆ ಬ್ರೆಝ ಖರೀದಿಗೆ ಆಕರ್ಷಕ ಹಣಕಾಸು ಯೋಜನೆಯನ್ನು ಪರಿಚಯಿಸಿದೆ. ಇದೀಗ ನಾವು ಬ್ರೆಝ ಖರೀದಿಗೆ ಎಷ್ಟು ಡೌನ್ ಪೇಮೆಂಟ್ ಹಾಗೂ ಎಷ್ಟು EMI ಪಾವತಿಸಬೇಕುತ್ತದೆ..? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Maruti Suzuki Brezza Price And Feature
Image Credit: Navbharat Times

ಮಾರುತಿ ಸುಜುಕಿ ಬ್ರೆಝ ಖರೀದಿಗೆ ಎಷ್ಟು EMI ಪಾವತಿಸಬೇಕು…?
ಇನ್ನು Maruti Suzuki Brezza ಬೆಂಗಳೂರಿನಲ್ಲಿ ಮೂಲ ಮಾದರಿಯ LXI (ಪೆಟ್ರೋಲ್) ರೂಪಾಂತರಕ್ಕೆ ರೂ.9.95 ಲಕ್ಷ ಮತ್ತು LXI CNG ಮಾದರಿಗೆ ರೂ.11.07 ಲಕ್ಷದ ಆನ್-ರೋಡ್ ಬೆಲೆಯನ್ನು ಹೊಂದಿದೆ. ಹೆಚ್ಚು ಮಾರಾಟವಾಗುವ ZXI (CNG) ವೇರಿಯಂಟ್ ಬೆಲೆ 14.89 ಲಕ್ಷ ರೂ.ಗಳಾಗಿದ್ದು, ZXI ಪ್ಲಸ್ (ಪೆಟ್ರೋಲ್) ರೂಪಾಂತರದ ಬೆಲೆ 15.48 ಲಕ್ಷ ರೂ. ಆಗಿದೆ.

ನೀವು ಕೇವಲ ರೂ. 99,000 ಡೌನ್ ಪಾವತಿಯೊಂದಿಗೆ ಈ ಕಾರನ್ನು ನಿಮ್ಮದಾಗಿಸಿಕೊಳ್ಳಬಹುದು. ನೀವು 5 ವರ್ಷಗಳ ಅವಧಿಗೆ 9.8% ಬಡ್ಡಿದರದಲ್ಲಿ ಬ್ಯಾಂಕ್ ನಿಮಗೆ ಸಾಲವನ್ನು ನೀಡುತ್ತದೆ. ನೀವು ತಿಂಗಳಿಗೆ ರೂ. 18,945 ರ EMI ಪಾವತಿಸುವ ಮೂಲಕ ಸಾಲದ ಮರುಪಾವತಿ ಮಾಡಬಹುದು.

Maruti Suzuki Brezza Price
Image Credit: Navbharat Times

ಭರ್ಜರಿ 25km ಮೈಲೇಜ್ ನೀಡಲಿದೆ ಈ ಬ್ರೆಝ ಮಾದರಿ
ಬ್ರೆಝ ಮಾದರಿಯಲ್ಲಿ ನೀವು 5 ಆಸನಗಳನ್ನು ನೋಡುತ್ತಿರಿ. ಯಾವುದೇ ತೊಂದರೆ ಇಲ್ಲದೆ ಈ ಮಾದರಿಯಲ್ಲಿ 5 ಮಂದಿ ಪ್ರಯಾಣಿಸಬಹುದು. ಇದು ಸಿಜ್ಲಿಂಗ್ ರೆಡ್, ಬ್ರೇವ್ ಖಾಕಿ, ಪರ್ಲ್ ಮಿಡ್ನೈಟ್ ಬ್ಲಾಕ್, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್, ಪರ್ಲ್ ಆರ್ಕ್ಟಿಕ್ ವೈಟ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ ಮತ್ತು FWD (Front Wheel Drive) ತಂತ್ರಜ್ಞಾನವನ್ನು ಹೊಂದಿದೆ. ಈ ಕಾರು ಎರಡು ಪವರ್ ಟ್ರೈನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರ 1.5-ಲೀಟರ್ ಪೆಟ್ರೋಲ್ ಎಂಜಿನ್ 103 PS ಗರಿಷ್ಠ ಶಕ್ತಿ ಮತ್ತು 137 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ ಬಾಕ್ಸ್ ಖರೀದಿಗೆ ಲಭ್ಯವಿದೆ. ಸಿಎನ್‌ಜಿ ಚಾಲಿತ ಕಾರು ಸಹ ಅದೇ ಎಂಜಿನ್ ಆಯ್ಕೆಯನ್ನು ಪಡೆಯುತ್ತದೆ. ಆದಾಗ್ಯೂ, ಇದು ಕೇವಲ 88 PS ಪವರ್ ಮತ್ತು 121.5 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್‌ ಬಾಕ್ಸ್‌ ನೊಂದಿಗೆ ಬರುತ್ತದೆ. ಪೆಟ್ರೋಲ್ ರೂಪಾಂತರಗಳು 17.38 ರಿಂದ 19.89 kmpl ಮೈಲೇಜ್ ನೀಡುತ್ತವೆ, ಹಾಗೆಯೆ CNG ಮಾದರಿಗಳು 25.51 kmpl ಮೈಲೇಜ್ ನೀಡುತ್ತದೆ.

Maruti Suzuki Brezza EMI Details
Image Credit: Financial Express

Join Nadunudi News WhatsApp Group