Mini Scorpio: ಮಿನಿ ಸ್ಕಾರ್ಪಿಯೊ ಪರಿಚಯಿಸಿದ ಮಾರುತಿ ಸುಜುಕಿ, 25 Km ಮೈಲೇಜ್ ಕೊಡುವ 8 ಲಕ್ಷದ ಈ ಕಾರಿಗೆ ಸಕತ್ ಡಿಮ್ಯಾಂಡ್

ಸ್ಕಾರ್ಪಿಯೊ ಹೋಲುವ ಕಾರ್ ಲಾಂಚ್ ಮಾಡಿದ ಮಾರುತಿ, ಮಿನಿ ಸ್ಕಾರ್ಪಿಯೊ ಅಂತಾನೆ ಫೇಮಸ್ ಆಗಿದೆ

Maruti Brezza 2024 Model: ಭಾರತೀಯ ಆಟೋ ವಲಯದಲ್ಲಿ Maruti ಕಂಪನಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಗ್ರಾಹಕರಿಗೆ ಮಾರುತಿ ಕಂಪನಿಯು ಹೊಸ ಹೊಸ ಕಾರ್ ಗಳನ್ನೂ ಖರೀದಿಗೆ ನೀಡುತ್ತಿದೆ. ಹೊಸ ಮಾದರಿ ಬಿಡುಗಡೆಗೊಳ್ಳುತ್ತಿದ್ದಂತೆ ಹೆಚ್ಚಿನ ಮಾರಾಟ ಕಾಣುವ ಕಾರ್ ಗಳ ಪೈಕಿ ಮಾರುತಿ ಕಾರ್ ಕೂಡ ಸೇರಿಕೊಂಡಿದೆ.

ಸದ್ಯ ಮಾರುಕಟ್ಟೆಯಲ್ಲಿ ವಿವಿಧ ವೈಶಿಷ್ಟ್ಯಗಳಿರುವ SUV ಬ್ರೆಜಾ ಕಾರ್ ಜನರಿಗೆ ಹೆಚ್ಚು ಇಷ್ಟವಾಗುತ್ತಿದೆ. ಮಾರುತಿ ಕಾರ್ ಗಳು ಅತಿ ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳಿಗೆ ಹೆಸರುವಾಸಿಯಾಗಿದ್ದು, ಇದೀಗ ಕಂಪನಿಯು ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ Brezza ಕಾರ್ ಅನ್ನು ಪರಿಚಯಿಸಿದೆ.

Maruti Suzuki Brezza S -CNG
Image Credit: team-bhp

ಮಾರುಕಟ್ಟೆಗೆ ಬಂತು ಮಾರುತಿ ಮಿನಿ ಸ್ಕಾರ್ಪಿಯೊ
ಮಾರುತಿ ಸುಜುಕಿಯು ಹೊಸ Maruti Brezza  ಬಿಡುಗಡೆಯೊಂದಿಗೆ ಭಾರತೀಯ SUV ವಿಭಾಗದಲ್ಲಿ ಸಂಚಲನ ಮೂಡಿಸಲಿದೆ. ಇನ್ನು ಈ ಮಿನಿ ಸ್ಕೊರ್ಪಿಯೋ  1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 103 BHP ಪವರ್ ಮತ್ತು 137 NM ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಸ್ವಯಂಚಾಲಿತ ಗೇರ್‌ ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಾಗಲಿದೆ. ಇನ್ನು ಸ್ವಯಂಚಾಲಿತ ರೂಪಾಂತರವು ಪ್ರತಿ ಲೀಟರ್ ಗೆ  19.8km ಮೈಲೇಜ್ ನೀಡುತ್ತದೆ, ಹಾಗೂ CNG ರೂಪಾಂತರವು ಪ್ರತಿ ಕೆಜಿಗೆ ಗೆ 25.51km ಮೈಲೇಜ್ ನೀಡುತ್ತದೆ. CNG ಮತ್ತು ಪೆಟ್ರೋಲ್ ಎರಡು ಆಯ್ಕೆಗಳಲ್ಲಿ ನೀವು ಈ ಮಾದರಿಯನ್ನು ಖರೀದಿಸಬಹುದು. ಇನ್ನು 8.29 ಲಕ್ಷದಿಂದ 13.98 ಲಕ್ಷ ಎಕ್ಸ್ ಶೋರೂಮ್ ಬೆಲೆಯಲ್ಲಿ Maruti Brezza  ಮಾದರಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

Maruti Brezza Mileage
Image Credit: Indiatoday

2024 ರಲ್ಲಿ ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಡಲಿದೆ
9-ಇಂಚಿನ ಟಚ್‌ ಸ್ಕ್ರೀನ್ ಇನ್ಫೋಟೈನ್‌ ಮೆಂಟ್ ಸಿಸ್ಟಮ್‌ ನೊಂದಿಗೆ ಸಜ್ಜುಗೊಂಡಿರುವ ಬ್ರೆಝಾ ವೈರ್‌ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಅನ್ನು ನೀಡುತ್ತದೆ. ಹಾಗೆಯೆ 4- ಸ್ಪೀಕರ್ ಧ್ವನಿ ವ್ಯವಸ್ಥೆಯೊಂದಿಗೆ ಸಂಗೀತವನ್ನುಆನಂದಿಸಬಹುದು. 360-ಡಿಗ್ರಿ ಕ್ಯಾಮೆರಾ ಮತ್ತು ಸಿಂಗಲ್- ಪೇನ್ ಸನ್‌ ರೂಫ್ ಮತ್ತು ವೈರ್‌ ಲೆಸ್ ಫೋನ್ ಚಾರ್ಜರ್ ಅನ್ನು ನೀವು ಈ ಕಾರ್ ನಲ್ಲಿ ನೋಡಬಹುದಾಗಿದೆ.

Join Nadunudi News WhatsApp Group

ಮಾರುಕಟ್ಟೆಯಲ್ಲಿ ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಮಹೀಂದ್ರ XUV300, ಟಾಟಾ ನೆಕ್ಸನ್, ರೆನಾಲ್ಟ್ ಕಿಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್‌ ಮಾದರಿಗಳಿಗೆ ಬಾರಿ ಪೈಪೋಟಿ ನೀಡಲಿದೆ.  ವಾಹನ ಸವಾರರ ಸುರಕ್ಷತೆಗಾಗಿ ಕಾರ್ ನಲ್ಲಿ 6 airbags , Electronic Stability Control (ESC), Hill-hold assis, Seat belt reminder ಸೇರಿದಂತೆ ಅನೇಕ ಸುರಕ್ಷಿತ ಫೀಚರ್ ಅನ್ನು ನೀವು ನೋಡಬಹುದಾಗಿದೆ. ಇನ್ನು ಬಹುನಿರೀಕ್ಷಿತ Maruti Brezza 2024 ರಲ್ಲಿ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ.

Join Nadunudi News WhatsApp Group