Maruti Cars: ಹಬ್ಬಕ್ಕೆ ಕಾರ್ ಖರೀದಿ ಮಾಡುವ ಪ್ಲ್ಯಾನ್ ಇದ್ದವರಿಗೆ ಬಂಪರ್ ಗುಡ್ ನ್ಯೂಸ್, ಭರ್ಜರಿ ರಿಯಾಯಿತಿ ಘೋಷಣೆ.

ಇದೀಗ ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಮೈಲೇಜ್ ನೀಡುವ ಮಾರುತಿ ಕಂಪನಿ ಕಾರ್.

Maruti Suzuki Cars Discount: ಮಾರುಕಟ್ಟೆಯಲ್ಲಿ Maruti ಕಂಪನಿಯ Car ಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಏಕೆಂದರೆ Maruti ಭಾರತೀಯ ಆಟೋ ವಲಯದಲ್ಲಿ ನೂತನ ಮಾದರಿಯ ಸಾಕಷ್ಟು Car ಗಳನ್ನೂ ಪರಿಚಯಿಸಿದೆ. ಮಾರುತಿ ಕಂಪನಿಯ ಕಾರ್ ಗಳು ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳಿಗೆ ಹೆಸರುವಾಸಿಯಾಗಿದೆ.

ಕಂಪನಿಯು ಗ್ರಾಹಕರ ಬಜೆಟ್ ಹೊಂದುವ ರೀತಿಯಲ್ಲಿ ಕಾರ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ Maruti Brezza ಟಾಪ್ 5 ಅತ್ಯುತ್ತಮ ಮಾರಾಟವಾದ ಕಾರುಗಳ ಪಟ್ಟಿಯಲ್ಲಿದೆ. Brezza ಈಗ ಎಷ್ಟು ಜನಪ್ರಿಯವಾಗಿದೆ ಎಂದರೆ ಇದನ್ನು ಸಾಮಾನ್ಯರ ರೇಂಜ್ ರೋವರ್ ಎಂದು ಕರೆಯಲಾಗುತ್ತಿದೆ. ಇದೀಗ ನಾವು Maruti Brezza  ಕಾರ್ ವಿಶೇಷತೆ ತಿಳಿಯೋಣ.

Maruti Brezza Mileage
Image Credit: Indiatoday

Maruti Brezza Engine Capacity
Maruti Brezza 1 .5 ಲೀಟರ್ ಪೆಟ್ರೋಲ್ ಎಂಜಿನ್‌ ನಿಂದ ಕಾರ್ಯನಿರ್ವಹಿಸುತ್ತದೆ. ಹಾಗೆ 103 bhp ಪವರ್ ಮತ್ತು 137 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ ಬಾಕ್ಸ್ ಆಯ್ಕೆ ಹೊಂದಿದೆ. ಕಂಪನಿಯು ಮ್ಯಾನುವಲ್ ಟ್ರಾನ್ಸ್‌ಮಿಷನ್‌ನಲ್ಲಿ CNG ಯೊಂದಿಗೆ ಸಹ ನೀಡುತ್ತದೆ.

Maruti Brezza Mileage
ಮಾರುತಿ ಕಂಪನಿಯ ಕಾರ್ ಗಳು ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳಿಗೆ ಹೆಸರುವಾಸಿಯಾಗಿದೆ. Maruti Brezza ಸ್ವಯಂಚಾಲಿತ ರೂಪಾಂತರವು 19.8 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ ಮತ್ತು CNG ರೂಪಾಂತರವು 25.51 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

Maruti brezza Price
Image Credit: Cartrade

Maruti Brezza Feature
Maruti Brezza ಉತ್ತಮ ವೈಶಿಷ್ಟ್ಯಗಳನ್ನು ಪಡೆದಿದೆ. 9 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ Apple CarPlay, 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ವೈರ್‌ಲೆಸ್ ಫೋನ್ ಚಾರ್ಜರ್, ಸಿಂಗಲ್-ಪೇನ್ ಸನ್‌ರೂಫ್ ಆಂಬಿಯೆಂಟ್ ಲೈಟಿಂಗ್‌ನಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಈ ರೀತಿಯ ವೈಶಿಷ್ಟ್ಯಗಳನ್ನು ಹೊಂದಿರುವ ವಿಭಾಗದಲ್ಲಿ ಇದು ಮೊದಲ SUV ಆಗಿದೆ.

Join Nadunudi News WhatsApp Group

Maruti Brezza Price
Maruti Brezza 8 .29 ಲಕ್ಷದಿಂದ ಪ್ರಾರಂಭವಾಗುತ್ತದೆ. Maruti Brezza ಟಾಪ್ ಮಾದರಿಗೆ ಎಕ್ಸ್ ಶೋರೂಮ್ ಪ್ರಕಾರ 13.98 ಲಕ್ಷ ಇರುತ್ತದೆ. ಹಾಗೆ Maruti Brezza ಹ್ಯುಂಡೈ, ಕಿಯಾ ಸೋನೆಟ್, ಮಹೀಂದ್ರಾ XUV300, ಟಾಟಾ ನೆಕ್ಸಾನ್, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್ ನೊಂದಿಗೆ ಸ್ಪರ್ಧಿಸುತ್ತದೆ.

Join Nadunudi News WhatsApp Group