Maruti 2024: 35 Km ಮೈಲೇಜ್ ಕೊಡುವ ಈ ಮಾರುತಿ ಕಾರಿನ ಬೆಲೆ ಕೇವಲ 5 ಲಕ್ಷ ರೂ ಮಾತ್ರ, ಬಡ ಜನರಿಗಾಗಿ

35 Km ಮೈಲೇಜ್ ಕೊಡುವ ಈ ಮಾರುತಿ ಕಾರಿಗೆ ದೇಶದಲ್ಲಿ ಹೆಚ್ಚಾಗಿದೆ ಬೇಡಿಕೆ

Maruti Celerio Price Mileage: ಮಾರುಕಟ್ಟೆಯಲ್ಲಿ Maruti ಕಂಪನಿಯು ವಿಭಿನ್ನ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತ ಗ್ರಾಹಕರಿಗೆ ಹೊಸ ಹೊಸ ಆಯ್ಕೆಯನ್ನು ನೀಡುತ್ತಿದೆ. ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರ್ ಗಳಿಗೆ ಬಾರಿ ಪ್ರಮಾಣದಲ್ಲಿ ಬೇಡಿಕೆ ಇದೆ ಎನ್ನಬಹುದು. ಮಾರುತಿ ಕಂಪನಿಯ ಕಾರ್ ಗಳು ಹೆಚ್ಚಿನ ಮೈಲೇಜ್ ಹಾಗೂ ಬಜೆಟ್ ಬೆಲೆಯಲ್ಲಿ ಪರಿಚಯವಾಗುವ ಕಾರಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಲು ಬಯಸುತ್ತಾರೆ.

ಐಷಾರಾಮಿ ವೈಶಿಷ್ಟ್ಯಗಳೊಂದಿಗೆ, ಪ್ರೀಮಿಯಂ ನೋಟವನ್ನು ಹೊಂದಿರುವ Maruti ಕಂಪನಿಯ ಕಾರ್ ಗಳು ಸಾಕಷ್ಟಿವೆ ಎನ್ನಬಹುದು. ಸದ್ಯ ಮಾರುಕಟ್ಟೆಯಲ್ಲಿ ಮಾರುತಿ ಕಂಪನಿಯ Celerio ಮಾದರಿ ಬಾರಿ ಕ್ರೇಜ್ ಹುಟ್ಟಿಸುತ್ತಿದೆ. ಈ Celerio ಮಾದರಿಯು ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿದೆ ಎನ್ನಬಹುದು.

maruti suzuki celerio new
Image Credit: Original Source

ಭರ್ಜರಿ 35km ಮೈಲೇಜ್ ನೀಡುವ ಮಾರುತಿ ಸುಜುಕಿ ಸೆಲೆರಿಯೊ ಲಾಂಚ್
ನೂತನ ಸೆಲೆರಿಯೊ ಮಾದರಿಯು ನವೀಕರಿಸಿದ ಹೆಡ್‌ ಲ್ಯಾಂಪ್‌ ಗಳು, ಟೈಲ್ ಲ್ಯಾಂಪ್‌ ಗಳು, ಮುಂಭಾಗ ಮತ್ತು ಹಿಂಭಾಗದ ಬಂಪರ್‌ ಗಳು ಮತ್ತು ಹೊಸ ಮಿಶ್ರಲೋಹದ ಚಕ್ರಗಳೊಂದಿಗೆ ಹೊಸ ಲುಕ್ ನಲ್ಲಿ ಬರಲಿದೆ. ಇದು ಆಧುನಿಕ ನೋಟವನ್ನು ನೀಡಲಿದ್ದು, ಹೊಸ ಡ್ಯಾಶ್‌ ಬೋರ್ಡ್, ಸ್ಟೀರಿಂಗ್ ವೀಲ್ ಮತ್ತು ಉತ್ತಮ ಗುಣಮಟ್ಟದ ವಸ್ತುಗಳಿಂದ ಮಾಡಿದ ಸೀಟುಗಳೊಂದಿಗೆ ಒಳಾಂಗಣವು ಆಕರ್ಶಣೀಯವಾಗಿ ತಯಾರಾಗಿದೆ.

ಸೆಲೆರಿಯೊವು 1.0-ಲೀಟರ್ ಕೆ-ಸಿರೀಸ್ ಎಂಜಿನ್ ಅನ್ನು ಹೊಂದಿದ್ದು ಅದು 67 ಪಿಎಸ್ ಪವರ್ ಮತ್ತು 89 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ 5-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್‌ ಮಿಷನ್‌ ನೊಂದಿಗೆ ಲಭ್ಯವಿದ್ದು, CNG ಮಾದರಿಯು 57 bhp ಮತ್ತು 82 Nm ಟಾರ್ಕ್ ಅನ್ನು ಉತ್ಪಾದಿಸಲಿದೆ. ಪ್ರೀಮಿಯಂ ವೈಶಿಷ್ಟ್ಯ ಹಾಗೂ ಬಲಿಷ್ಠ ಎಂಜಿನ್ ಹೊಂದಿರುವ Celerio CNG ಮಾದರಿಯು ಪ್ರತಿ ಕೆಜಿಗೆ ಬರೋಬ್ಬರಿ 35km ಮೈಲೇಜ್ ನೀಡಲಿದೆ.

maruti suzuki celerio price and mileage
Image Credit: Original Source

ಮಾರುತಿ ಸೆಲೆರಿಯೊ ಮಾದರಿಯ ಮಾರುಕಟ್ಟೆ ಬೆಲೆ ಎಷ್ಟಿದೆ…?
ಮಾರುತಿ ಸೆಲೆರಿಯೊ LED headlamps, touchscreen infotainment system, Cruise control, Sunroof, Dual airbags, EBD, ABS and Rear parking sensor ಗಳಂತಹ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಮಾರುತಿ ಸೆಲೆರಿಯೊದ ಬೆಲೆಯು ರೂ. 5.37 ಲಕ್ಷದಿಂದ ರೂ. 7.14 ಲಕ್ಷದವರೆಗೆ ಇರಲಿದೆ. ಇನ್ನು LXi, VXi, ZXi, ಮತ್ತು ZXi ನ ನಾಲ್ಕು ರೂಪಾಂತರಗಳು ಲಭ್ಯವಿದೆ. ನೀವು ಬಜೆಟ್ ಬೆಲೆಯಲ್ಲಿ ಹೊಸ ಕಾರು ಖರೀದಿಸುವ ಯೋಜನೆಯಲ್ಲಿದ್ದರೆ ಮಾರುತಿ Celerio ಮಾದರಿ ನಿಮಗೆ ಉತ್ತಮ ಆಯ್ಕೆಯಾಗಲಿದೆ ಎಂದರೆ ತಪ್ಪಾಗಲಾರದು.

Join Nadunudi News WhatsApp Group

Join Nadunudi News WhatsApp Group