Suzuki Eeco EMI: ಬೆಲೆ 6 ಲಕ್ಷ ಮತ್ತು 21 Km ಮೈಲೇಜ್, ಹೊಸ ಇಕೋ ಕಾರಿನ EMI ಕಂಡು ಬುಕ್ ಮಾಡುತ್ತಿದ್ದಾರೆ ಜನರು

ಹೆಚ್ಚಿನ ಮೈಲೇಜ್ ನೀಡುವ ಇಕೋ ಮಾದರಿಯನ್ನು ಖರೀದಿಸಲು ಎಷ್ಟು EMI ಪಾವತಿಸಬೇಕಾಗುತ್ತದೆ...?

Maruti Suzuki Eeco EMI Details: ಮಧ್ಯಮ ವರ್ಗದ ಕುಟುಂಬಕ್ಕಾಗಿ Maruti suzuki ಕಾರ್ ಗಳು ಬೆಸ್ಟ್ ಆಗಿರುತ್ತದೆ. ಮಾರುತಿ ಕಾರ್ ಗಳು ಬಜೆಟ್ ಬೆಲೆಯಲ್ಲಿ ಲಭ್ಯವಾಗುವುದರ ಜೊತೆಗೆ ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ.ಕಂಪನಿಯು ಗ್ರಾಹಕರಿಗಾಗಿ ಬಜೆಟ್ ಬೆಲೆಯಲ್ಲಿ ಹಲವು ಮಾದರಿಯ ಫ್ಯಾಮಿಲಿ ಕಾರ್ ಅನ್ನು ಪರಿಚಯಿಸಿದೆ. ಇನ್ನು ಐದರಿಂದ ಏಳು ಆಸನಗಳಿರುವ ಕಾರ್ ಗಳ ವಿಭಾಗದಲ್ಲಿ Maruti Suzuki Eeco ಮಾದರಿಯು ಅಗ್ರಸ್ಥಾನದಲ್ಲಿದೆ.

ಇಕೋ ಮಾದರಿಯು ಕುಟುಂಬದ ಪ್ರಯಾಣಕ್ಕೆ ಬೆಸ್ಟ್ ಆಗಿದೆ. ಇನ್ನು ನೀವು ಈ ಬಜೆಟ್ ಬೆಲೆಯ ಕಾರ್ ಅನ್ನು ಖರೀದಿಸುವ ಯೋಜನೆಯಲ್ಲಿದ್ದರೆ ನಾವೀಗ ಈ ಲೇಖನದಲ್ಲಿ ಇಕೋ ಮಾದರಿಯ ಹಣಕಾಸು ಯೋಜನೆಯ ಬಗೆ ಮಾಹಿತಿ ನೀಡಲಿದ್ದೇವೆ. ನೀವು ಇಕೋ ಮಾದರಿಯನ್ನು ಖರೀದಿಸಲು ಎಷ್ಟು ಡೌನ್ ಪೇಮೆಂಟ್ ಮಾಡಬೇಕಾಗುತ್ತದೆ…? ಹಗೂ ಎಷ್ಟು ಮಾಸಿಕ EMI ಪಾವತಿಸಬೇಕುತ್ತದೆ..? ಎನ್ನುವ ಬಗ್ಗೆ ಫುಲ್ ಡಿಟೈಲ್ಸ್ ಇಲ್ಲಿದೆ.

Maruti Suzuki Eeco Price
Image Credit: Wikimedia

ಬೆಲೆ ಕೇವಲ 6 ಲಕ್ಷ, ಭರ್ಜರಿ 26KM ಮೈಲೇಜ್
ಮುಖ್ಯವಾಗಿ Maruti Suzuki Eeco ಮಾದರಿಯು ಪೆಟ್ರೋಲ್ ಮತ್ತು CNG ಆವೃತ್ತಿಗಳಲ್ಲಿ ಬರುತ್ತದೆ. ಇದರಿಂದಾಗಿ ಇದು 1.2 ಲೀಟರ್ ಸಾಮರ್ಥ್ಯದ K-Series ಡ್ಯುಯಲ್-ಜೆಟ್ VVT ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದು 80.76 PS ಮತ್ತು 104.4 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಪೆಟ್ರೋಲ್ ಮಾದರಿಯಲ್ಲಿ ಈ ಕಾರು ಪ್ರತಿ ಲೀಟರ್ ಗೆ 19.71 ಕಿ.ಮೀ ಮೈಲೇಜ್ ನೀಡುತ್ತದೆ. CNG ಆವೃತ್ತಿಯಲ್ಲಿ, ಈ ಕಾರು 26.78 km/kg ಮೈಲೇಜ್ ಪಡೆಯುತ್ತದೆ.ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬೆಲೆ 5.25 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದರಲ್ಲಿ ನೀವು ಒಟ್ಟು 13 ರೂಪಾಂತರಗಳನ್ನು ಪಡೆಯುತ್ತೀರಿ. ನೀವಿ ಈ ಹೆಚ್ಚಿನ ಮೈಲೇಜ್ ನೀಡುವ ಏಕೋ ಮಾದರಿಯನ್ನು ಖರೀದಿಸಲು ಎಷ್ಟು EMI ಪಾವತಿಸಬೇಕಾಗುತ್ತದೆ ಎನ್ನುವ ಬಗ್ಗೆ ಲೆಕ್ಕಾಚಾರ ಇಲ್ಲಿದೆ.

Maruti Suzuki Eeco EMI Details
Image Credit: Freerkset

ಹೆಚ್ಚಿನ ಮೈಲೇಜ್ ನೀಡುವ ಇಕೋ ಮಾದರಿಯನ್ನು ಖರೀದಿಸಲು ಎಷ್ಟು EMI ಪಾವತಿಸಬೇಕಾಗುತ್ತದೆ…?
ಮಾರುತಿ ಸುಜುಕಿ ಇಕೋ ಎಕ್ಸ್ ಶೋ ರೂಂ ಬೆಲೆ ಸುಮಾರು 5,32,000 ಲಕ್ಷ ರೂ. ಆಗಿದೆ. ಕರ್ನಾಟಕದಲ್ಲಿ RTO ತೆರಿಗೆಯನ್ನು ನೋಡಿದರೆ ಸುಮಾರು 82,674 ರೂಪಾಯಿಗಳು ಬರುತ್ತವೆ. ಈ ಕಾರಿನ ವಿಮೆ ಸುಮಾರು 36,162 ರೂ. ಆಗಿದೆ. ಇವೆಲ್ಲವೂ ಸೇರಿ ಬೆಂಗಳೂರಿನಲ್ಲಿ ಮಾರುತಿ ಸುಜುಕಿ ಇಕೋ ಸುಮಾರು 6,51,436 ರಿಂದ ರೂ. ನಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group

ಈ ಕಾರಿಗೆ ಡೌನ್ ಪೇಮೆಂಟ್ ಆಗಿ ಕನಿಷ್ಠ 1,00,000 ರೂ. ನೀಡಬೇಕಾಗುತ್ತದೆ. ಡೌನ್ ಪೇಮೆಂಟ್ ಪಾವತಿಸಿ ಬ್ಯಾಂಕ್ ನಲ್ಲಿ ಲೋನ್ ಪಡೆದುಕೊಂಡು ಸಾಲವನ್ನು ತೀರಿಸಬಹುದು. ಬ್ಯಾಂಕ್ ನಿಮಗೆ 9.8% ಬಡ್ಡಿದರದಲ್ಲಿ ಸುಮಾರು 7 ವರ್ಷಗಳ ಅವಧಿಗೆ ಸಾಲವನ್ನು ನೀಡುತ್ತದೆ. ನೀವು ಪ್ರತಿ ತಿಂಗಳು ಬ್ಯಾಂಕ್‌ ರೂ. 9,098 ರೂ. ಗಳನ್ನು ಪಾವತಿಸುತ್ತ ಸಾಲದ ಮರುಪಾವತಿ ಮಾಡಬಹುದು.

Maruti Suzuki Eeco Price And Feature
Image Credit: Original Source

Join Nadunudi News WhatsApp Group