Maruti Suzuki Eeco: ಕೇವಲ 5 ಲಕ್ಷಕ್ಕೆ ಮನೆಗೆ ತನ್ನಿ ಬಡವರ ಬಂಧು ಇಕೋ ಕಾರ್, 26 Km ಮೈಲೇಜ್

ಇಕೋ ಕಾರ್ ಖರೀದಿಸಲು ಇದು ಬೆಸ್ಟ್ ಟೈಮ್, 5 ಲಕ್ಷಕ್ಕೆ ಖರೀದಿಸಿ ಇಕೋ ಕಾರ್

Maruti Suzuki Eeco: ಕಾರು ಖರೀದಿ ಮಾಡಬೇಕು ಎನ್ನುವ ಆಸೆ ಹೆಚ್ಚಿನವರಲ್ಲಿ ಇದೆ. ಕೆಲವರು ದುಬಾರಿ ಕಾರು ಖರೀದಿ ಮಾಡಿದರೆ ಇನ್ನು ಕೆಲವರು ತಮ್ಮ ಹಣಕಾಸಿನ ಸ್ಥಿತಿಗೆ ಅನುಗುಣವಾಗಿ ಕಾರನ್ನು ಖರೀದಿ ಮಾಡುತ್ತಾರೆ. ಕಾರು ಖರೀದಿ ಮಾಡುವಾಗ ಕಾರಿನ ಲುಕ್ ಜೊತೆಗೆ ಮೈಲೇಜ್ ನ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ ಆಗಿದೆ. ನೀವು ಬಜೆಟ್ ಬೆಲೆಗೆ ಹೊಸ ಕಾರನ್ನು ಹುಡುಕುತ್ತಿದ್ದರೆ ಮಾರುತಿ ಸುಜುಕಿ ಇಕೋ ವ್ಯಾನ್ ಉತ್ತಮ ಆಯ್ಕೆಯಾಗಬಹುದು.

ಇದರಲ್ಲಿ 5 – 7 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿದ್ದು, ಈ ಕಾರನ್ನು ಕಂಪನಿಯ ಅರೆನಾ ಡೀಲರ್ ಶಿಪ್ ಮೂಲಕ ಖರೀದಿ ಮಾಡಬಹುದು.ಹಾಗೆಯೆ ಈಗ ಉತ್ತಮ ಮೈಲೇಜ್ ನೀಡುವ ಅತ್ಯಂತ ಕಡಿಮೆ ಬೆಲೆಗೆ ಸಿಗುವ ಮಾರುತಿ ಸುಜುಕಿ ಇಕೋ (Maruti Suzuki Eeco) ವ್ಯಾನ್ ಬಗ್ಗೆ ಮಾಹಿತಿ ಪಡೆಯಿರಿ.

Maruti Suzuki Eeco Price And Feature
Image Credit: Original Source

ಮಾರುತಿ ಸುಜುಕಿ ಇಕೋ (Maruti Suzuki Eeco) ವಿಶೇಷತೆಗಳು

ಮಾರುತಿ ಸುಜುಕಿ ಇಕೋ ವ್ಯಾನ್ ಉತ್ತಮ ಲುಕ್ ಅನ್ನು ಹೊಂದಿದ್ದು, ಬೆಲೆಗೆ ತಕ್ಕಂತೆ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಸೆಮಿ ಡಿಜಿಟಲ್ ಸ್ಪೀಡೋಮೀಟರ್ (Semi Digital Speedometer), ಎಸಿಗಾಗಿ ರೋಟರಿ ಡಯಲ್ಸ್, ಮ್ಯಾನುಯಲ್ ಎಸಿ, 12ವಿ ಚಾರ್ಜಿಂಗ್ ಸಾಕೆಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಸುರಕ್ಷತೆಯ ದೃಷ್ಟಿಯಿಂದ ಸಹ ಮಾರುತಿ ಸುಜುಕಿ ಇಕೋ ವ್ಯಾನ್ ಅತ್ಯುತ್ತಮವಾಗಿದ್ದು, ಡುಯಲ್ ಏರ್ ಬಾಗ್ಸ್, ABS, EBD, ಫ್ರಂಟ್ ಸೀಟ್‌ಬೆಲ್ಟ್ ರಿಮೆಂಡರ್, ಸ್ವೀಡ್ ಅಲರ್ಟ್, ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಹೊಂದಿದೆ.

ಮಾರುತಿ ಸುಜುಕಿ ಇಕೋ (Maruti Suzuki Eeco) ಎಂಜಿನ್ ಹಾಗು ಮೈಲೇಜ್ ಬಗ್ಗೆ ವಿವರ

Join Nadunudi News WhatsApp Group

ಮಾರುತಿ ಸುಜುಕಿ ಇಕೋ ವ್ಯಾನ್ ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ನೊಂದಿಗೆ ಸಿಗುತ್ತದೆ. 1.2 – ಲೀಟರ್ ಪೆಟ್ರೋಲ್ ಎಂಜಿನ್ 81 PS ಗರಿಷ್ಠ ಪವರ್, 104.4 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, 5 – ಸ್ವೀಡ್ ಮ್ಯೂನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ. ಸಿಎನ್‌ಜಿ ಪವರ್‌ಟ್ರೇನ್ ಪಡೆದಿರುವ ಕಾರು ಸಹ ಇದೇ ಎಂಜಿನ್ ಆಯ್ಕೆಯನ್ನು ಪಡೆದಿದೆ. ಆದರೆ 72 PS ಪವರ್, 95 Nm ಪೀಕ್ ಟಾರ್ಕ್ ಹೊರಹಾಕಲು ಮಾತ್ರ ಶಕ್ತವಾಗಿದೆ. 5 – ಸ್ವೀಡ್ ಮ್ಯೂನುವಲ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ. ಪೆಟ್ರೋಲ್ ರೂಪಾಂತರಗಳು 19.71 kmpl, ಸಿಎನ್‌ಜಿ ರೂಪಾಂತರ 26.78 km/kg ಇಂಧನ ದಕ್ಷತೆಯನ್ನು ಪಡೆದಿದೆ.

Maruti Suzuki Eeco Price In India
Image Credit: Original Source

Maruti Suzuki Eeco Price 

ಮಾರುತಿ ಸುಜುಕಿ ಇಕೋ (Maruti Suzuki Eeco) ವ್ಯಾನ್ ರೂ.5.27 ಲಕ್ಷದಿಂದ ರೂ.6.53 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಮಾರುತಿ ಸುಜುಕಿ ಇಕೋ ವ್ಯಾನ್, 5-ಸೀಟರ್ ಸ್ಟ್ಯಾಂಡರ್ಡ್ (ಒ), 5-ಸೀಟರ್ ಎಸಿ (ಒ), 5-ಸೀಟರ್ ಎಸಿ ಸಿಎನ್‌ಜಿ (ಒ) ಹಾಗೂ 7-ಸೀಟರ್ ಸ್ಟ್ಯಾಂಡರ್ಡ್ (ಒ) ರೂಪಾಂತರ (Variants) ಆಯ್ಕೆಯಲ್ಲಿ ದೊರೆಯುತ್ತದೆ. ಮೆಟಾಲಿಕ್ ಗ್ಲಿಸ್ಟೆನಿಂಗ್ ಗ್ರೇ, ಪರ್ಲ್ ಮಿಡ್ನೈಟ್ ಬ್ಲ್ಯಾಕ್, ಮೆಟಾಲಿಕ್ ಬ್ರಿಸ್ಕ್ ಬ್ಲೂ, ಮೆಟಾಲಿಕ್ ಸಿಲ್ಕಿ ಸಿಲ್ವರ್ ಸೇರಿದಂತೆ 5 ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

Join Nadunudi News WhatsApp Group