Fronx 2024: 28 Km ಮೈಲೇಜ್ ಕೊಡುವ ಈ ಮಾರುತಿ ಕಾರಿಗೆ ಸಕತ್ ಡಿಮ್ಯಾಂಡ್, ಕೆಲವೇ ತಿಂಗಳಲ್ಲಿ 1 ಲಕ್ಷ ಸೇಲ್

ಬರೋಬ್ಬರಿ 28 Km ಮೈಲೇಜ್ ನೀಡುವ ಈ ಮಾರುತಿ ಕಾರಿಗೆ ಜನರು ಫಿದಾ

Maruti Suzuki FRONX Booking : ಸದ್ಯ ಮಾರುಕಟ್ಟೆಯಲ್ಲಿ Maruti Suzuki ಕಂಪನಿಯ ಕಾರ್ ಗಳು ಸಾಕಷ್ಟು ವಿವಿಧ ರೂಪಾಂತರದ ಹೊಸ ವಿನ್ಯಾಸದ ನೂತನ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತ ತನ್ನ ಮಾರಾಟವನ್ನು ಇನ್ನಷ್ಟು ಬೆಳೆಸುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ Maruti Suzuki FRONX ಮಾದರಿ ಪರಿಚಯವಾಗಿರುವ ಬಗ್ಗೆ ಎಲ್ಲರಿಗು ಮಾಹಿತಿ ತಿಳಿದೇ ಇದೆ. ಸದ್ಯ ಮಾರುಕಟ್ಟೆಯಲ್ಲಿ ಮಾರುತಿ ಕಂಪನಿಯ ಈ ಮಾದರಿ ದಾಖಲೆಯ ಮಟ್ಟದಲ್ಲಿ ಮಾರಾಟ ಕಾಣುತ್ತಿದೆ.

Maruti Suzuki Fronx Car
Image Credit: Original Source

ಕೇವಲ 10 ತಿಂಗಳಿನಲ್ಲಿ 1 ಲಕ್ಷ ಕಾರುಗಳ ಮಾರಾಟ
ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿ ಕಾರ್ ಗಳು ಟಾಪ್ ಒನ್ ಸ್ಥಾನದಲ್ಲಿದೆ ಎಂದರೆ ತಪ್ಪಾಗಲಾರದು. ಮಾರುತಿ ಸುಜುಕಿ ಇದೀಗ ಭಾರತೀಯ ಆಟೋ ವಲಯದಲ್ಲಿ ಹೊಸ ಅಲೆ ಎಬ್ಬಿಸಲು FRONX ಮಾದರಿಯನ್ನು ಪರಿಚಯಿಸಿದೆ. ಮಾರುತಿ Fronx ಮಾದರಿ ಮಾರುಕಟ್ಟೆಯಲ್ಲಿ ಎರಡು ಎಂಜಿನ್ ಆಯ್ಕೆಯಲ್ಲಿ ಲಭ್ಯವಾಗಲಿದೆ. ಬಿಡುಗಡೆಗೊಂಡ ಕೆಲವೇ ತಿಂಗಳಲ್ಲಿ ದಾಖಲೆಯ ಮಾರಾಟ ಕಾಣುತ್ತಿದೆ. ಕೇವಲ 10 ತಿಂಗಳಿನಲ್ಲಿ 1 ಲಕ್ಷ ಕಾರುಗಳು ಸೆಲ್ ಆಗುವ ಮೂಲಕ ಮಾರಾಟದಲ್ಲಿ ದಾಖಲೆಯನ್ನೇ ಸೃಷ್ಟಿಸಿದೆ. ಹೊಸ ವಿನ್ಯಾಸದಲ್ಲಿ ಪರಿಚಯವಾದ FRONX ಎಲ್ಲರ ಗಮನ ಸೆಳೆಯುತ್ತಿದೆ.

ಬರೋಬ್ಬರಿ 28 Km ಮೈಲೇಜ್ ನೀಡುವ ಈ ಮಾರುತಿ ಕಾರಿಗೆ ಜನರು ಫಿದಾ
ಮಾರುತಿ ಫ್ರಾಂಕ್ಸ್ 2023 ರ ಎಂಜಿನ್ ಸಾಮರ್ಥ್ಯದ ಬಗ್ಗೆ ಮಾತನಾಡುವುದಾದರೆ ಈ ಕಾರ್ 1 .2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದಿದೆ. ಈ ಎಂಜಿನ್ 89.73PS ಗರಿಷ್ಠ ಶಕ್ತಿ ಮತ್ತು 113Nm ಗರಿಷ್ಠ ಟಾರ್ಕ್ ಅನ್ನು ಉತ್ಪದಿಸುತ್ತದೆ. ಫ್ರಾಂಕ್ಸ್ CNG ಮೋಡ್ ನಲ್ಲಿ 77.5PS ಹಾಗೂ 98.5Nm ಗೆ ಇಳಿಯುತ್ತದೆ. ಮಾರುತಿ ಫ್ರಾಂಕ್ಸ್ CNG ಕಾರ್ ಪ್ರತಿ ಕೆಜಿ ಗೆ 28.51 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಮಾರುತಿ ಫ್ರಾಂಕ್ಸ್ ಪೆಟ್ರೋಲ್ ರೂಪಾಂತರವು ಸುಮಾರು 21 ಕಿಲೋಮೀಟರ್ ಮೈಲೇಜ್‌ನೊಂದಿಗೆ ಬರುತ್ತದೆ. ಮಾರುತಿ ಫ್ರಾಂಕ್ಸ್ CNG ಅನ್ನು ಸಿಗ್ಮ ಮತ್ತು ಡೆಲ್ಟಾ ಎಂಬ ಎರಡು ರೂಪಾಂತರದಲ್ಲಿ ನೀಡಲಾಗುತ್ತದೆ.

Maruti Suzuki FRONX Booking
Image Credit: Zee News

Maruti Suzuki Fronx Feature
*Leather wrapped steering wheel,
*Premium fabric seat belts,
*Flat bottom steering,
*wireless charger,
*7.0-inch touchscreen infotainment,
*4-speaker sound system
*Wing mirrors and steering wheel-mounted control

Join Nadunudi News WhatsApp Group

Join Nadunudi News WhatsApp Group