Suzuki 2024: 40 ಕಿಲೋಮೀಟರ್ ಮೈಲೇಜ್ ಮತ್ತು ಕಡಿಮೆ ಬೆಲೆ, ಈ ಮಾರುತಿ ಕಾರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

40 ಮೈಲೇಜ್ ಕೊಡುವ ಇನ್ನೊಂದು ಹೈಬ್ರಿಡ್ ಕಾರನ್ನ ಮಾರುಕಟ್ಟೆಗೆ ಪರಿಚಯಿಸಿದ ಮಾರುತಿ

Maruti Suzuki FRONX Hybrid: ಸದ್ಯ ಮಾರುಕಟ್ಟೆಯಲ್ಲಿ Maruti Suzuki ಕಂಪನಿಯ ಕಾರ್ ಗಳು ಸಾಕಷ್ಟು ವಿವಿಧ ರೂಪಾಂತರದ ಹೊಸ ವಿನ್ಯಾಸದ ನೂತನ ಮಾದರಿಯ ಕಾರ್ ಗಳು ಲಭ್ಯವಾಗುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ Maruti Suzuki FRONX ಮಾದರಿ ಪರಿಚಯವಾಗಿರುವ ಬಗ್ಗೆ ಎಲ್ಲರಿಗೂ ಮಾಹಿತಿ ತಿಳಿದೇ ಇದೆ. ಸದ್ಯ ಮಾರುಕಟ್ಟೆಯಲ್ಲಿ ಮಾರುತಿ ಕಂಪನಿಯ ಈ ಮಾದರಿಯ ಕಾರ್ ಅನ್ನು ಹೊಸ ಅವತಾರದಲ್ಲಿ ಪರಿಚಯಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.

Maruti Suzuki FRONX Hybrid
Image Credit: Carandbike

ಮಾರುಕಟ್ಟೆಯಲ್ಲಿ ಹೊಸ ಅವತಾರದಲ್ಲಿ ಬರಲಿದೆ Fronx ಮಾದರಿ
ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿ ಕಾರ್ ಗಳು ಟಾಪ್ ಒನ್ ಸ್ಥಾನದಲ್ಲಿದೆ ಎಂದರೆ ತಪ್ಪಾಗಲಾರದು. ಮಾರುತಿ ಸುಜುಕಿ ಇದೀಗ ಭಾರತೀಯ ಆಟೋ ವಲಯದಲ್ಲಿ ಹೊಸ ಅಲೆ ಎಬ್ಬಿಸಲು FRONX ಮಾದರಿಯನ್ನು ಹೊಸ ಅವತಾರದಲ್ಲಿ ಪರಿಚಯಿಸಲಿದೆ. ಮಾರುತಿ Fronx ಹೊಸ ರೂಪಾಂತರವು Fonx ಮಾದರಿಗಿಂತ ಹೆಚ್ಚಿನನ ಫೀಚರ್ ಅನ್ನು ಹೊಂದಿರಲಿದೆ. FRONX ಮಾದರಿಯ ನ್ಯೂ ವರ್ಷನ್ ಮಾರುಕಟ್ಟೆಯಲ್ಲಿ ಬಾರಿ ಸಂಚಲನ ಮೂಡಿಸುವುದರಲ್ಲಿ ಎರಡು ಮಾತಿಲ್ಲ.

ಶೀಘ್ರದಲ್ಲೇ Fronx ಹೈಬ್ರಿಡ್ ಮಾಡೆಲ್ ಲಾಂಚ್
ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಬೇಡಿಕೆ ಪಡೆದಿರುವ ಮಾರುತಿ ಕಾರ್ ಗಳ ಪಟ್ಟಿಯಲ್ಲಿ ಫ್ರಾಂಕ್ಸ್ ಮಾದರಿಯು ಸೇರಿಕೊಂಡಿದೆ. ಈಗಾಗಲೇ ಈ ಮಾದರಿಯು ಬುಕಿಂಗ್ ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಸದ್ಯ ಮಾರುಕಟ್ಟೆಯಲ್ಲಿ ಕಂಪನಿಯು ಫ್ರಾಂಕ್ಸ್ ಮಾದರಿಯ ಹೈಬ್ರಿಡ್ ರೂಪಾಂತರವನ್ನು ಲಾಂಚ್ ಮಾಡಲು ಸಕಲ ಸಿದ್ಧತೆ ನಡೆಸುತ್ತಿದೆ. ಫ್ರಾಂಕ್ಸ್ ಹೈಬ್ರಿಡ್ ಕಾರಿಗೆ HEV ಎಂದು ಕೋಡ್ ನೇಮ್ ಮಾಡಲಾಗಿದೆ.

Maruti Suzuki FRONX Hybrid Mileage
Image Credit: Spinny

ಭರ್ಜರಿ 40km ಮೈಲೇಜ್ ನೀಡಲಿದೆ ಫ್ರಾಂಕ್ಸ್ ಹೈಬ್ರಿಡ್ ಕಾರ್
ನೂತನ ಫ್ರಾಂಕ್ಸ್ ಹೈಬ್ರಿಡ್ ಕಾರು 40 ಕಿ.ಮೀ ಮೈಲೇಜ್ ನೀಡಲಿದೆ ಎನ್ನುವ ಬಗ್ಗೆ ಮೂಲಗಳಿಂದ ಮಾಹಿತಿ ಲಭಿಸಿದೆ. Z12E ಮೂರು-ಸಿಲಿಂಡರ್ ಎಂಜಿನ್ ಮತ್ತು 1.5-2kWh ಬ್ಯಾಟರಿ ಪ್ಯಾಕ್‌ನೊಂದಿಗೆ ಹೊಸ ಫ್ರಾಂಕ್ಸ್ ಹೈಬ್ರಿಡ್ ದೇಶದ ಪ್ಯಾಸೆಂಜರ್ ವಾಹನ ವಿಭಾಗದಲ್ಲಿ ಗೇಮ್ ಚೇಂಜರ್ ಆಗಲಿದೆ. ಇನ್ನು ಫ್ರಾಂಕ್ಸ್ ಹೈಬ್ರಿಡ್ ಕಾರಿನ ಬೆಲೆಯ ಬಗ್ಗೆ ಹೇಳುವುದಾದರೆ, ಮಾರುಕಟ್ಟೆಯಲ್ಲಿ ಫ್ರಾಂಕ್ಸ್ ಕಾರಿನ ಪ್ರಸ್ತುತ ಬೆಲೆ ರೂ.7.51 ಲಕ್ಷ ಆಗಿದೆ. ಹೈಬ್ರಿಡ್ ಮಾದರಿಯಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ಅಳವಡಿಸುವುದರಿಂದ ನೂತನ ಮಾದರಿಯ ಬೆಲೆ ಸ್ವಲ್ಪ ಹೆಚ್ಚಿರಲಿದೆ.

Join Nadunudi News WhatsApp Group

Join Nadunudi News WhatsApp Group