Swift 2024: ಅಬ್ಬಬ್ಬಾ 2024 ರ ಸ್ವಿಫ್ಟ್ ಕಾರಿಗೆ ಸಕತ್ ಡಿಮ್ಯಾಂಡ್, ಕಡಿಮೆ ಬೆಲೆ ಮತ್ತು ಆಕರ್ಷಕ ಮೈಲೇಜ್

ಸದ್ಯದಲ್ಲೇ ಡೀಲರ್ ಶಿಪ್ ಗಳಿಗೆ ಎಂಟ್ರಿ ಕೊಡಲಿದೆ ಸ್ವಿಫ್ಟ್ 2024

Maruti Suzuki Swift 2024: ಇನ್ನು ಮಾರುಕಟ್ಟೆಯಲ್ಲಿ Maruti Suzuki ಹೆಚ್ಚಿನ ಫೀಚರ್ ಇರುವ ಕಾರನ್ನು 2024 ರಲ್ಲಿ ಪರಿಚಯಿಸಲಿದೆ. ನೂತನ ಸ್ವಿಫ್ಟ್ ಮಾದರಿ ಹೊಸ ವರ್ಷದಲ್ಲಿ ಬಿಡುಗಡೆಗೊಳ್ಳುತ್ತಿರುವ ಎಲ್ಲ ಮಾದರಿಯ ಕಾರ್ ಗಳಿಗೆ ಬಾರಿ ಪೈಪೋಟಿ ನೀಡಲಿದೆ.

ಹೊಸ ವರ್ಷಕ್ಕೆ ಹೊಸ ಅವತಾರದಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಕಾರ್ ಬರಲಿದ್ದು ಸದ್ಯ ಕಾರಿನ ಬೆಲೆ ಮತ್ತು ಮೈಲೇಜ್ ಕಂಡು ಜನರು ಖರೀದಿಸಲು ತುದಿಗಾಲಿನಲ್ಲಿದ್ದಾರೆ. ಹೊಸ ವರ್ಷದಲ್ಲಿ ಹೊಸ ಕಾರ್ ಖರೀದಿಸುವವರಿಗೆ ಈ ಮಾದರಿ ಉತ್ತಮ ಆಯ್ಕೆ ಎನ್ನಬಹುದು. ಹೊಸ ಲುಕ್ ನಲ್ಲಿ ಪರಿಚಯಗೊಂಡಿರುವ ಸ್ವಿಫ್ಟ್ ಮಾದರಿಯ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

marurti suzuki swift 2024
Image Credit: Original Source

ಸದ್ಯದಲ್ಲೇ ಡೀಲರ್ ಶಿಪ್ ಗಳಿಗೆ ಎಂಟ್ರಿ ಕೊಡಲಿದೆ ಸ್ವಿಫ್ಟ್ 2024
Maruti Suzuki Swift 2024 ರ ಹೊಸ 1.2 ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೈಬ್ರಿಡ್ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದೆ. ಸದ್ಯ ಮಾರುತಿ ಸ್ವಿಫ್ಟ್ 1.2L, 4-ಸಿಲಿಂಡರ್ K12N ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ನೊಂದಿಗೆ ಲಭ್ಯವಿದ್ದು ಮೋಟಾರ್ 90 bhp ಮತ್ತು 113Nm ಟಾರ್ಕ್ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ. ಹಾಗೆಯೆ 5-ಸ್ಪೀಡ್ ಮ್ಯಾನುವಲ್ ಅಥವಾ AMT ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಬರಲಿದೆ.

ಇನ್ನು ನೂತನ Suzuki Swift ಮಾದರಿಯು ನಿಮಗೆ ಬರೋಬ್ಬರಿ 20 ರಿಂದ 24 ಕಿಲೋಮೀಟರ್ ಮೈಲೇಜ್ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಇನ್ನು ನೂತನ Swift ಮಾದರಿ ಐದು ಆಸನಗಳ ಕಾರಾಗಿದ್ದು ಭಾರತೀಯ ಮಾರುಕಟ್ಟೆಯಲ್ಲಿ ಸರಿಸುಮಾರು 6 ಲಕ್ಷ ಬೆಲೆಯಲ್ಲಿ ಲಾಭ್ಯವಾಗಲಿದೆ. ನವೀಕರಿಸಿದ ಹೆಡ್‌ ಲ್ಯಾಂಪ್‌ ಗಳು, ಎಲ್‌ ಇಡಿ ಡಿಆರ್‌ ಎಲ್‌ ಗಳು ಮತ್ತು ಲೋಹೀಯ ಅಂಶದೊಂದಿಗೆ ಮರುವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್ ಹೊಂದಿರುವ Swift 2024 ಸದ್ಯದಲ್ಲೇ ಡೀಲರ್ ಶಿಪ್ ಗಳಿಗೆ ಎಂಟ್ರಿ ಕೊಡಲಿದೆ.

swift 2024 model features
Image Credit: Original Source

Maruti Suzuki Swift 2024 Feature
•9-inch free-standing touchscreen infotainment screen
•Android Auto and Apple CarPlay
•Semi-digital instrument console
•multi-functional steering wheel
•climate control
•HUD or heads-up display
•Adaptive High Beam Assist
•Driver Monitoring System
•Collision Mitigation Braking

Join Nadunudi News WhatsApp Group

Join Nadunudi News WhatsApp Group