Maruti Suzuki Swift: ಹೆಚ್ಚಿನ ಸುರಕ್ಷತೆ, ಕಡಿಮೆ ಬೆಲೆ ಮತ್ತು ಆಕರ್ಷಕ ಮೈಲೇಜ್, ಹೊಸ ಸ್ವಿಫ್ಟ್ ಕಾರಿಗೆ ಜನರು ಫಿದಾ

ಹೆಚ್ಚಿನ ಸುರಕ್ಷತೆ ಇರುವ ಹೊಸ ಸ್ವಿಫ್ಟ್ ಕಾರಿಗೆ ಜನರು ಫಿದಾ

Maruti Suzuki Swift 2024 Release Date: ಭಾರತೀಯ ಮಾರುಕಟ್ಟೆಯಲ್ಲಿ ಐಷಾರಾಮಿ ಕಾರ್ ಗಳಿಗೆ ಬಾರಿ ಬೇಡಿಕೆ ಇರುತ್ತದೆ ಎನ್ನಬಹುದು. ಸದ್ಯ ಐಷಾರಾಮಿ ಕಾರ್ ಗಳ ಪಟ್ಟಿಯಲ್ಲಿ Maruti Suzuki Swift ಮಾದರಿ ಕೂಡ ಸೇರಿಕೊಂಡಿದೆ. ಇದೀಗ ಕಂಪನಿಯು ತನ್ನ ಸ್ವಿಫ್ಟ್ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.

ಮೇ 9 2024 ರಂದು ಬಿಡುಗಡೆಯಾಗಲಿದೆ ಎಂದು ಕಂಪನಿಯು ಅಧಿಕೃತವಾಗಿ ಘೋಷಿಸಿದೆ. ಗ್ರಾಹಕರು ಕೇವಲ 11000 ರೂ. ಗಳ ಮುಂಗಡ ಪಾವತಿ ಮಾಡುವ ಮೂಲಕ ಸ್ವಿಫ್ಟ್ ಮಾದರಿಯನ್ನು ಖರೀದಿಸಬಹುದು.

Maruti Suzuki Swift 2024
Image Credit: Financialexpress

ಹೊಸ ಸ್ವಿಫ್ಟ್ ಕಾರಿಗೆ ಜನರು ಫಿದಾ
2024 ರ ಮಾರುತಿ ಸುಜುಕಿ ಸ್ವಿಫ್ಟ್ ಹೊಸ Z- ಸರಣಿಯ ಪೆಟ್ರೋಲ್ ಎಂಜಿನ್ ಮತ್ತು ಫ್ರಾಂಕ್ಸ್-ಪ್ರೇರಿತ ಒಳಾಂಗಣವನ್ನು ಗಮನಾರ್ಹವಾಗಿ ಸುಧಾರಿತ ವಿನ್ಯಾಸದೊಂದಿಗೆ ಹೊಂದಿರುತ್ತದೆ ಎಂದು ವರದಿಯಾಗಿದೆ. ಹೊಸ ಎಂಜಿನ್ 3-ಸಿಲಿಂಡರ್ ಘಟಕವಾಗಿದ್ದು, ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದ ಆಯ್ಕೆಯೊಂದಿಗೆ ಲಭ್ಯವಿರುತ್ತದೆ. ಇನ್ನು ಹೊಸ ಸ್ವಿಫ್ಟ್ 5,700rpm ನಲ್ಲಿ 81.6 PS ಮತ್ತು 4,300rpm ನಲ್ಲಿ 112Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ಇದು 8.2PS ಹೆಚ್ಚು ಪವರ್ ಮತ್ತು 1Nm ಹೆಚ್ಚು ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸುಜುಕಿಯ Z-ಸರಣಿಯ ಗ್ಯಾಸೋಲಿನ್ ಎಂಜಿನ್ 25.72 kmpl ಮೈಲೇಜ್ ನೀಡುವ ನಿರೀಕ್ಷೆಯಿದೆ. ಇದು ಹಿಂದಿನ ಆವೃತ್ತಿಗಿಂತ 3.34 kmpl (ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್) ಮತ್ತು 3.16 (ಆಟೋಮ್ಯಾಟಿಕ್ ಗೇರ್‌ಬಾಕ್ಸ್) ಸುಧಾರಣೆಯಾಗಿದೆ. ಕಾರಿನ ಮುಂಭಾಗವು ನವೀನ ಎಲ್ಇಡಿ ಹೆಡ್ಲೈಟ್ ಗಳು, ಎಲ್-ಆಕಾರದ ಎಲ್ಇಡಿ ಡಿಆರ್ಎಲ್ಗಳು ಮತ್ತು ಸೂಚಕಗಳಲ್ಲಿ ಹ್ಯಾಲೊಜೆನ್ ಬಲ್ಬ್ ಗಳನ್ನೂ ಒಳಗೊಂಡಿದೆ. ಗ್ರಿಲ್ ಮೇಲ್ಭಾಗದಲ್ಲಿ ‘ಸುಜುಕಿ’ ಲೋಗೋವನ್ನು ಪಡೆಯುತ್ತದೆ ಮತ್ತು LED ಟೈಲ್ ಲೈಟ್ ಗಳನ್ನು ಪಡೆಯುತ್ತದೆ. ಈ ಕಾರಿನ ಸೈಡ್ ಡಿಸೈನ್ ಅತ್ಯುತ್ತಮವಾಗಿದೆ.

Maruti Suzuki Swift 2024 Release Date
Image Credit: Cardekho

ಹೆಚ್ಚಿನ ಸುರಕ್ಷತೆ, ಕಡಿಮೆ ಬೆಲೆ ಮತ್ತು ಆಕರ್ಷಕ ಮೈಲೇಜ್
ಇದು 16-ಇಂಚಿನ 10-ಸ್ಪೋಕ್ ಡೈಮಂಡ್ ಕಟ್ ಅಲಾಯ್ ಚಕ್ರಗಳು, ಹಿಂದಿನ ಬಾಗಿಲುಗಳಲ್ಲಿ ಸಾಂಪ್ರದಾಯಿಕ ಶೈಲಿಯ ಹ್ಯಾಂಡಲ್‌ ಗಳನ್ನು ಪಡೆಯುತ್ತದೆ. ಹಿಂಭಾಗವು ಸಿ-ಆಕಾರದLED ಟೈಲ್ ದೀಪಗಳೊಂದಿಗೆ ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದೆ. ಒಳಭಾಗದಲ್ಲಿಯೂ ಸಹ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಪಡೆಯುತ್ತದೆ.

Join Nadunudi News WhatsApp Group

ಈ ಕಾರಿನಲ್ಲಿ 5 ಜನರು ಆರಾಮವಾಗಿ ಪ್ರಯಾಣಿಸಬಹುದು. ಇದು ಹಳೆಯ ಮಾದರಿಯಂತೆಯೇ ಬೂಟ್ ಸ್ಪೇಸ್ ಅನ್ನು ಹೊಂದಿದೆ ಮತ್ತು ಮುಂಭಾಗದಲ್ಲಿ ಡ್ಯಾಶ್‌ ಬೋರ್ಡ್ 9-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ ಇನ್ಫೋಟೈನ್‌ ಮೆಂಟ್ ಸ್ಕ್ರೀನ್ ಮತ್ತು ಜಬರ್ದಾಸ್ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿರುವುದನ್ನು ಕಾಣಬಹುದು. ಹೊಸ ಸ್ವಿಫ್ಟ್ ಆರು ಏರ್‌ ಬ್ಯಾಗ್‌ ಗಳನ್ನು ಪ್ರಮಾಣಿತವಾಗಿ ಹೊಂದಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಹತ್ತಾರು ಸೇಫ್ಟಿ ಫೀಚರ್ ಅನ್ನು ಕಂಪನಿಯು ನೀಡಿದೆ.

Maruti Suzuki Swift Price And Feature
Image Credit: Spinny

Join Nadunudi News WhatsApp Group