Swift 2024 Feature: 2024 ರಲ್ಲಿ ಬಿಡುಗಡೆಯಾಗಲಿರುವ ಸ್ವಿಫ್ಟ್ ನಲ್ಲಿ ಏನೆಲ್ಲಾ ವೈಶಿಷ್ಟ್ಯಗಳಿರಲಿದೆ…? ಬೆಲೆ ಎಷ್ಟು ಗೋತ್ತಾ…?

ಭರ್ಜರಿ 35km ಮೈಲೇಜ್ ನೀಡುವ ಸ್ವಿಫ್ಟ್ ಮಾದರಿಯ ಬೆಲೆ ಎಷ್ಟು ಗೋತ್ತಾ...?

Maruti Suzuki Swift 2024 Sunroof Feature: ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಸಾಕಷ್ಟು ಮಾದರಿಯ ಕಾರ್ ಗಳು ವಿಭಿನ್ನ ಬೆಲೆಯಲ್ಲಿ, ವಿಭಿನ್ನ ವಿನ್ಯಾಸದೊಂದಿಗೆ ಲಾಂಚ್ ಆಗಿದೆ. ಈಗಲೂ ಕೂಡ ವಿವಿಧ ಕಾರ್ ತಯಾರಕ ಕಂಪನಿಗಳು ಹಲವು ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತ ಗ್ರಾಹಕರಿಗೆ ಹೊಸ ಹೊಸ ಆಯ್ಕೆಯನ್ನು ನೀಡುತ್ತಿದೆ. ಸದ್ಯ ದೇಶದ ಜನಪ್ರಿಯ ಕಾರ್ ತಯಾರಕ ಕಂಪನಿಯಾದ MARUTI ಇದೀಗ ತನ್ನ ಕಾರುಗಳಲ್ಲಿ ಹೊಸ ರೀತಿಯ ತಂತ್ರಜ್ಞಾನವನ್ನು ಬಳಸಲು ನಿರ್ಧರಿಸಿದೆ.

ಅತ್ಯಾಧುನಿಕ ತಂತ್ರಜ್ಞವನ್ನು ಬಳಸಿ ಮಾರುತಿ ತನ್ನ ನೂತನ ಮಾದರಿಯ Swift ಅನ್ನು ಲೇಟೆಸ್ಟ್ ಡಿಸೈನ್ ನಲ್ಲಿ ಮಾರುಕಟ್ಟೆಗೆ ತರಲಿದೆ. ಇನ್ನು 2024 ರಲ್ಲಿ ಬಿಡುಗಡೆಗೊಳ್ಳುವ ಕಾರ್ ಗಾಲ ಪಟ್ಟಿಯಲ್ಲಿ ಸ್ವಿಫ್ಟ್ ಮಾದರಿಗೆ ಹೆಚ್ಚಿನ ಬೇಡಿಕೆ ಇದೆ. ಬಿಡುಗಡೆಗೂ ಮುನ್ನ Swift ಮಾರುಕಟ್ಟೆಯಲ್ಲಿ ಬಾರಿ ಸಂಚಲನ ಮೂಡಿಸಿದೆ. ನಾವೀಗ 2024 ರಲ್ಲಿ ಬಿಡುಗಡೆಗೊಳ್ಳಲಿರುವ ಬಹುನಿರೀಕ್ಷಿತ ಸ್ವಿಫ್ಟ್ ಮಾದರಿಯ ಬಗ್ಗೆ ಮಾಹಿತಿ ಹೇಳಲಿದ್ದೇವೆ. 

Maruti Suzuki Swift 2024
Image Credit: Cardekho

2024 ರಲ್ಲಿ ಬಿಡುಗಡೆಯಾಗಲಿರುವ ಸ್ವಿಫ್ಟ್ ನಲ್ಲಿ ಏನೆಲ್ಲಾ ವೈಶಿಷ್ಟ್ಯಗಳಿರಲಿದೆ…?
ಬಹುನಿರೀಕ್ಷಿತ Maruti Suzuki Swift 2024 ಮಾರುಕಟ್ಟೆಯಲ್ಲಿ Sunroof ವೈಶಿಷ್ಟ್ಯಗಳೊಂದಿಗೆ ಮಾರುಕ್ತತೆಯನ್ನು ಪ್ರವೇಶಿಸಲಿದೆ. ಕಾರ್ ನಲ್ಲಿನ Sunroof ವೈಶಿಷ್ಟ್ಯವು ಕಾರ್ ಗೆ ಐಷಾರಾಮಿ ಲುಕ್ ನೀಡುತ್ತದೆ. ರಸ್ತೆ ಪರೀಕ್ಷೆಯಲ್ಲಿ ಸ್ವಿಫ್ಟ್ ಡಿಜೈರ್ ಇತ್ತೀಚೆಗೆ ಸನ್‌ ರೂಫ್‌ ನೊಂದಿಗೆ ಗುರುತಿಸಲ್ಪಟ್ಟಿದೆ. ಮಾರುತಿ ಡಿಜೈರ್ ಸನ್‌ ರೂಫ್‌ ನೊಂದಿಗೆ ಆಸಕ್ತಿದಾಯಕವಾಗಿ ಗುರುತಿಸಲ್ಪಟ್ಟಿದ್ದರೂ, ಕಂಪನಿಯು ಅದನ್ನು ಅಧಿಕೃತವಾಗಿ ಖಚಿತಪಡಿಸಿಲ್ಲ. ಮುಂಬರಲಿರುವ ಮಾರುತಿ ಸ್ವಿಫ್ಟ್ ಪ್ರತಿ ಲೀಟರ್ ಗೆ ಸುಮಾರು 35km ಮೈಲೇಜ್ ಅನ್ನು ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಭರ್ಜರಿ 35km ಮೈಲೇಜ್ ನೀಡುವ ಸ್ವಿಫ್ಟ್ ಮಾದರಿಯ ಬೆಲೆ ಎಷ್ಟು ಗೋತ್ತಾ…?
ಒಂದು ಲೀಟರ್ ಪೆಟ್ರೋಲ್ ಹಾಕಿದರೆ ನೀವು 35km ವರೆಗೆ ಚಲಿಸಲು ಸಾಧ್ಯವಾಗುತ್ತದೆ. ಸ್ವಿಫ್ಟ್ ನಲ್ಲಿ ಕಂಪನಿಯು ಹೈಬ್ರಿಡ್ ಎಂಜಿನ್ ಅನ್ನು ನೀಡಿದೆ. ಇನ್ನು 2024 ರ ಮಧ್ಯದಲ್ಲಿ ಅಥವಾ ಈ ವರ್ಷದ ಅಂತ್ಯದೊಳಗೆ ಸ್ವಿಫ್ಟ್ ಅನಾವರಣಗೊಳ್ಳಲಿದೆ. ಸ್ವಿಫ್ಟ್ ನಲ್ಲಿ 1.2-ಲೀಟರ್ 3-ಸಿಲಿಂಡರ್, ನೈಸರ್ಗಿಕವಾಗಿ-ಆಕಾಂಕ್ಷೆಯ Z12 ಪೆಟ್ರೋಲ್ ಎಂಜಿನ್ ಅನ್ನು ಸ್ವಿಫ್ಟ್ ಹ್ಯಾಚ್‌ ಬ್ಯಾಕ್‌ ನಲ್ಲಿ ಪರಿಚಯಿಸಲಾಗಿದೆ. ಇನ್ನು Instrument cluster with automatic climate control, analog dial, digital multi-information display ವೈಶಿಷ್ಟ್ಯಗಳನ್ನು ಹೊಂದಿರುವ ಸ್ವಿಫ್ಟ್ ಮಾದರಿ ಮಾರುಕಟ್ಟೆಯಲ್ಲಿ ಸರಿಸುಮಾರು 6 .56 ರಿಂದ 9 .38 ಲಕ್ಷ ಬೆಲೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

Maruti Suzuki Swift 2024 Sunroof Feature
Image Credit: Carwale

Join Nadunudi News WhatsApp Group

Join Nadunudi News WhatsApp Group