Swift 2024 Model: 2024 ರ ಸ್ವಿಫ್ಟ್ ಕಾರಿನಲ್ಲಿ ADAS ಫೀಚರ್, 24 Km ಮೈಲೇಜ್ ಕೊಡುವ ಸ್ವಿಫ್ಟ್ ಕಾರಿಗೆ ಸಕತ್ ಡಿಮ್ಯಾಂಡ್

ಪ್ರತಿ ಲೀಟರ್ ಗೆ 24 ಕಿಲೋಮೀಟರ್ ಮೈಲೇಜ್ ನೀಡುವ Maruti Suzuki Swift 2024 ಮಾದರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

Maruti Suzuki Swift 2024: ಹೊಸ ವರ್ಷದ ಆರಂಭವಾಗಿದೆ. ಹೊಸ ವರ್ಷದಲ್ಲಿ ಟೆಕ್ ವಲಯದಲ್ಲಿ ಬಾರಿ ಸಂಚಲ ಸೃಷ್ಟಿಯಾಗಲಿದೆ. 2024 ರ ಹೊಸ ವರ್ಷದಲ್ಲಿ ದೇಶದ ಪ್ರತಿಷ್ಠಿತ ಕಂಪನಿಗಳ ಹೊಸ ಹೊಸ ಮಾದರಿಗಳು ಪರಿಚಯವಾಗಲಿದೆ. ಅದರಲ್ಲೂ ಬಹುನಿರೀಕ್ಷಿತ Maruti Suzuki Swift ಹೆಚ್ಚಿನ ಕ್ರೇಜ್ ಸೃಷ್ಟಿಸಿದೆ.

ಹೊಸ ಲುಕ್ ನಲ್ಲಿ ಆಧುನಿಕ ಫೀಚರ್ ನೊಂದಿಗೆ ಸುಜುಕಿ ಸ್ವಿಫ್ಟ್ ಜನರಿಗೆ ಲಭ್ಯವಾಗಲಿದೆ. ದ್ಯ Swift ಮಾದರಿ ಮಾರುಕಟ್ಟೆಯಲ್ಲಿ Advanced Driver Assistance Systems ವೈಶಿಷ್ಟ್ಯದೊಂದಿಗೆ ಗ್ರಾಹಕರನ್ನು ಬೆರಗುಗೊಳಿಸುತ್ತಿದೆ. ಅನೇಕ ಸುಧಾರಿತ ವೈಶಿಷ್ಟ್ಯಗಳಿಂದ ಸಜ್ಜುಗೊಳಿಸಲಾದ Swift ಮಾದರಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ.

Maruti Suzuki Swift 2024
Image Credit: Spinny

ಹೊಸ ಲುಕ್ ಮತ್ತು ಹೊಸ ಫೀಚರ್
Maruti Suzuki Swift 2024 ರಲ್ಲಿ ಹೆಚ್ಚಿನ ಸುರಕ್ಷಿತ ಫೀಚರ್ ಅನ್ನು ಅಳವಡಿಸುವ ಕಾರಣ Swift ಮಾದರಿಯಲ್ಲಿ ADAS ವೈಶಿಷ್ಟ್ಯವನ್ನು ಅಳವಡಿಸಲಾಗಿದೆ. ಇನ್ನು ಸ್ವಿಫ್ಟ್ ನಲ್ಲಿ ವಿಶೇಷವಾಗಿ Dual Sensor Brake Support ವೈಶಿಷ್ಟ್ಯ ಇರಲಿದ್ದು ವಾಹನ ಸವಾರರಿಗೆ ಹೆದ್ದಾರಿಯಲ್ಲಿ ಉತ್ತಮ ಅನುಭವವನ್ನು ನೀಡಲಿದೆ. ಕಾರ್ ನಲ್ಲಿ ಕ್ಯಾಮರಾ ಮತ್ತು ಲೇಸರ್ ಸೆನ್ಸಾರ್ ಇರುವ ಕಾರಣ ಹಿಂದೆ ಬರುವ ವಾಹನಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ.

24 Km ಮೈಲೇಜ್ ಕೊಡುವ ಸ್ವಿಫ್ಟ್ ಕಾರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್
Maruti Suzuki Swift 2024 ಕಾರ್ ನಲ್ಲಿ 1.2 ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೈಬ್ರಿಡ್ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದೆ. ಸದ್ಯ ಮಾರುತಿ ಸ್ವಿಫ್ಟ್ 1.2L, 4-ಸಿಲಿಂಡರ್ K12N ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ನೊಂದಿಗೆ ಲಭ್ಯವಿದ್ದು ಮೋಟಾರ್ 80bhp ಮತ್ತು 108Nm ಟಾರ್ಕ್ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ.

Maruti Suzuki Swift Car Price And Feature
Image Credit: Financialexpress

ಹಾಗೆಯೆ 5-ಸ್ಪೀಡ್ ಮ್ಯಾನುವಲ್ ಅಥವಾ AMT ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಬರಲಿದೆ. ಇನ್ನು ನೂತನ Suzuki Swift ಮಾದರಿಯು ನಿಮಗೆ ಬರೋಬ್ಬರಿ ಪ್ರತಿ ಲೀಟರ್ ಗೆ 24 ಕಿಲೋಮೀಟರ್ ಮೈಲೇಜ್ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಸ್ವಿಫ್ಟ್ ಕಾರ್ ನಲ್ಲಿ Infotainment system, wireless Apple Car Play, Android Auto, Connect Car Car Tech, steering-mounted controls, automatic climate control ಸೇರಿದಂತೆ ಇನ್ನು ಹತ್ತು ಹಲವು ವೈಶಿಷ್ಟ್ಯದೊಂದಿಗೆ ಗ್ರಾಹಕರಿಗೆ ಲಭ್ಯಯವಾಗಲಿದೆ.

Join Nadunudi News WhatsApp Group

Join Nadunudi News WhatsApp Group