Swift Price Hike: ಸ್ವಿಫ್ಟ್ ಕಾರ್ ಖರೀದಿಸುವವರಿಗೆ ಬೇಸರದ ಸುದ್ದಿ, ಕಾರಿನ ಬೆಲೆಯಲ್ಲಿ ಇಷ್ಟು ಹೆಚ್ಚಳ.

ಸ್ವಿಫ್ಟ್ ಕಾರಿನ ಬೆಲೆಯಲ್ಲಿ ಇಷ್ಟು ಹೆಚ್ಚಳ

Maruti Suzuki Swift Price Hike: ಸದ್ಯ ಮಾರುಕಟ್ಟೆಯಲ್ಲಿ Maruti Suzuki swift ಮಾದರಿಯ ಕಾರ್ ಗಳ ಕ್ರೇಜ್ ಹೆಚ್ಚಿದೆ ಎನ್ನಬಹುದು. ಸದ್ಯ ಮಾರುತಿ ಕಂಪನಿಯು ಇದೀಗ ಸ್ವಿಫ್ಟ್ ಮಾದರಿ ಖರೀದಿಸುವವರಿಗೆ ಶಾಕಿಂಗ್ ಸುದ್ದಿ ನೀಡಿದೆ.

ಹೌದು, ಕಂಪನಿಯು ತನ್ನ ಸ್ವಿಫ್ಟ್ ಮಾದ್ರಿಯ ಬೆಲೆಯಲ್ಲಿ ಹೆಚ್ಚಿಸಲು ನಿರ್ಧರಿಸಿದೆ. ಜನವರಿಯ್ಲಲಿದೆ ಸ್ವಿಫ್ಟ್ ಮಾದರಿಯ ಕಾರ್ ಗಳ ಬೇಡಿಕೆ ಹೆಚ್ಚಾಗಿದೆ. ಹೊಸ ವರ್ಷದಲ್ಲಿ ಸ್ವಿಫ್ಟ್ ಮಾದರಿ ಖರೀದಿಸಲು ಗ್ರಾಹಕರು ಹೆಚ್ಚಿನ ಹಣವನ್ನು ನೀಡಬೇಕಾಗಿದೆ.

Maruti Suzuki Swift Price Hike
Image Credit: Gaadiwaadi

ಸ್ವಿಫ್ಟ್ ಕಾರ್ ಖರೀದಿಸುವವರಿಗೆ ಬೇಸರದ ಸುದ್ದಿ
ಮಾರುತಿ ಸ್ವಿಫ್ಟ್ ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮಿಡ್ನೈಟ್ ಬ್ಲೂ, ಪರ್ಲ್ ಆರ್ಕ್ಟಿಕ್ ವೈಟ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಸಾಲಿಡ್ ಫೈರ್ ರೆಡ್ ಸೇರಿದಂತೆ 3 – ಡ್ಯುಯಲ್ ಟೋನ್, 6 – ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇದು 5 ಆಸನಗಳ ಆಯ್ಕೆಯನ್ನು ಸಹ ಹೊಂದಿದೆ. ಈ ಕಾರು 1.2 – ಪೆಟ್ರೋಲ್ ಮತ್ತು CNG ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ.

ರೂಪಾಂತರಗಳನ್ನು ಅವಲಂಬಿಸಿ 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ ಸ್ವಯಂಚಾಲಿತ ಗೇರ್‌ ಬಾಕ್ಸ್‌ ನೊಂದಿಗೆ ಲಭ್ಯವಿದೆ. ಪೆಟ್ರೋಲ್ ರೂಪಾಂತರಗಳು ಪ್ರತಿ ಲೀಟರ್ ಗೆ 22.38 km ರಿಂದ 22.56 kmpl ಮೈಲೇಜ್ ನೀಡುತ್ತವೆ. ಹಾಗೆಯೆ CNG ರೂಪಾಂತರಗಳು ಪ್ರತಿ ಕೆಜಿಗೆ 30.90 km ಮೈಲೇಜ್ ನೀಡುತ್ತವೆ. ಇದು 268 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಸಹ ಹೊಂದಿದೆ. ಇಷ್ಟೆಲ್ಲ ಫೀಚರ್ ಇರುವ ಸ್ವಿಫ್ಟ್ ಮಾದರಿ ಇನ್ನುಮುಂದೆ ದುಬಾರಿಯಾಗಲಿದೆ.

Maruti Suzuki Swift Price In India
Image Credit: Autocarindia

ಸ್ವಿಫ್ಟ್ ಕಾರಿನ ಬೆಲೆಯಲ್ಲಿ ಇಷ್ಟು ಹೆಚ್ಚಳ
ಕಂಪನಿಯು ಸ್ವಿಫ್ಟ್ ಕಾರಿನ ಆಯ್ದ ರೂಪಾಂತರಗಳ ಬೆಲೆಯನ್ನು ರೂ. 5,000 ವರೆಗೆ ಹೆಚ್ಚಿಸಿದೆ. ಬೆಲೆ ಏರಿಕೆಯ ನಂತರ, ಮಾರುತಿ ಸ್ವಿಫ್ಟ್‌ ನ ಆರಂಭಿಕ ಬೆಲೆ ರೂ. 5.99 ಲಕ್ಷ ಆಗಲಿದೆ. ಈ ಮಾರುತಿ ಸುಜುಕಿ ಸ್ವಿಫ್ಟ್, LXI, VXI ಸೇರಿದಂತೆ 4 ರೂಪಾಂತರಗಳಲ್ಲಿ ಲಭ್ಯವಿದೆ. ಇನ್ನು ನೂತನ ಸ್ವಿಫ್ಟ್ ಮಾದರಿಯಲ್ಲಿ 7-inch touchscreen infotainment system, height-adjustable driver seat, cruise control and auto AC, dual front airbags, EBD, ABS, hill-hold control, ESC ಸೇರಿದಂತೆ ಇನ್ನು ಹತ್ತು ಹಲವು ಫೀಚರ್ ಅನ್ನು ನೋಡಬಹುದು.

Join Nadunudi News WhatsApp Group

Join Nadunudi News WhatsApp Group