Maruti Swift: ಈ ಕಾರಣಕ್ಕೆ ಜನರು ಖರೀದಿಸುತ್ತಿಲ್ಲ 35 Km ಮೈಲೇಜ್ ಕೊಡುವ ಸ್ವಿಫ್ಟ್ ಕಾರ್, ಬೇಡಿಕೆ ಕಳೆದುಕೊಂಡ ಸ್ವಿಫ್ಟ್

ಸ್ವಿಫ್ಟ್ ಮಾದರಿಯ ಮಾರಾಟ ಕಡಿಮೆ ಆಗಲು ಕಾರಣ ಏನು...?

Maruti Suzuki Swift Sale: ದೇಶಿಯ ಮಾರುಕಟ್ಟೆಯಲ್ಲಿ Maruti swift ಮಾದರಿಗೆ ಹೆಚ್ಚು ಬೇಡಿಕೆ ಇದೆ ಎನ್ನಬಹುದು. ಹೆಚ್ಚಿನ ಫೀಚರ್ ಇರುವ ಸ್ವಿಫ್ಟ್ ಮಾದರಿಯನ್ನು ಜನರು ಖರೀದಿಸಲು ಮುಂದಾಗುತ್ತಿದ್ದಾರೆ. ಭಾರತೀಯ ಆಟೋ ವಲಯದಲ್ಲಿ ಸ್ವಿಫ್ಟ್ ಮಾದರಿಯನ್ನು 2018 ರಲ್ಲಿ ಪ್ರವೇಶಿಸಿದೆ.

2018 ರಿಂದ ಸ್ವಿಫ್ಟ್ ಅನ್ನು ಜನರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದಾರೆ. ಮೈಲೇಜ್ ವಿಚಾರವಾಗಿ ಸ್ವಿಫ್ಟ್ ಮಾದರಿ ಅಗ್ರ ಸ್ಥಾನದಲ್ಲಿದೆ ಎನ್ನಬಹುದು. ಆದರೆ ಹೆಚ್ಚು ಮೈಲೇಜ್ ನೀಡುವ ಈ ಸ್ವಿಫ್ಟ್ ಮಾದರಿಯ ಮಾರಾಟ ಇತ್ತೀಚಿಗೆ ಕಡಿಮೆಯಾಗುತ್ತಿರುವುದು ಕಂಡು ಬಂದಿದೆ. ಸ್ವಿಫ್ಟ್ ಮಾದರಿಯ ಮಾರಾಟ ಕಡಿಮೆ ಆಗಲು ಕಾರಣ ಏನು ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

Maruti Suzuki Swift Sale
Image Credit: Bestsellingcarsblog

ಈ ಕಾರಣಕ್ಕೆ ಜನರು ಖರೀದಿಸುತ್ತಿಲ್ಲ 35 Km ಮೈಲೇಜ್ ಕೊಡುವ ಸ್ವಿಫ್ಟ್ ಕಾರ್
ಮಾರುತಿ ಸುಜುಕಿ ಸ್ವಿಫ್ಟ್ ಮಾರ್ಚ್ 2024 ರಲ್ಲಿ 15,728 ಯುನಿಟ್‌ ಗಳನ್ನು ಮಾರಾಟ ಮಾಡಿದೆ. ಮಾರಾಟದ ಅಂಕಿಅಂಶಗಳ ಪ್ರಕಾರ ಮಾರುತಿ ಹ್ಯಾಚ್‌ ಬ್ಯಾಕ್ ಕಳೆದ ತಿಂಗಳು ಎರಡನೇ ಅತ್ಯುತ್ತಮ ಮಾರಾಟವಾಗಿದೆ. ಮಾರುತಿ ಸುಜುಕಿ ಸ್ವಿಫ್ಟ್ ಮಾರ್ಚ್ 2023 ರಲ್ಲಿ 17,559 ಯುನಿಟ್‌ ಗಳನ್ನು ಮಾರಾಟ ಮಾಡಿದೆ. ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಇದು ಶೇಕಡಾ 10 ರಷ್ಟು ಕುಸಿತ ಕಂಡಿದೆ. ಇದಕ್ಕೆ ಪ್ರಮುಖ ಕಾರಣ ಹೊಸ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆಯಾಗಿರುವುದು.

ಇದರಿಂದಾಗಿ ನ್ಯೂ ಜನರೇಷನ್ ಸ್ವಿಫ್ಟ್ ಕಾರನ್ನು ಖರೀದಿಸಲು ಜನರು ಕಾಯುತ್ತಿದ್ದಾರೆ. ಇದು ಈಗಿನ ಮಾದರಿಯನ್ನು ಖರೀದಿಸಲು ಹಿಂದೇಟು ಹಾಕಲು ಕಾರಣವಾಗಿದೆ. ಕೆಲವು ಮಾರುತಿ ಸುಜುಕಿ ಡೀಲರ್‌ ಶಿಪ್‌ ಗಳು ಮುಂಬರುವ ಸ್ವಿಫ್ಟ್ ಮಾದರಿಗಾಗಿ ಅನಧಿಕೃತವಾಗಿ ಪೂರ್ವ-ಬುಕಿಂಗ್‌ ಗಳನ್ನು ಸ್ವೀಕರಿಸಲು ಪ್ರಾರಂಭಿಸಿವೆ ಎಂದು ವರದಿಯಾಗಿದೆ. ಸುಜುಕಿ ಹೊಸ ತಲೆಮಾರಿನ ಸ್ವಿಫ್ಟ್ ಹ್ಯಾಚ್‌ ಬ್ಯಾಕ್ ಅನ್ನು ತಾಯಿನಾಡು ಜಪಾನ್‌ ನಲ್ಲಿ ಪರಿಚಯಿಸಿದೆ. ಹೊಸ ಸುಜುಕಿ ಸ್ವಿಫ್ಟ್ ಪರಿಷ್ಕೃತ ಸ್ಟೈಲಿಂಗ್ ಮತ್ತು ಹೊಸ ಎಂಜಿನ್ ಆಯ್ಕೆಗಳೊಂದಿಗೆ ನವೀಕರಿಸಿದ ಒಳಾಂಗಣಗಳೊಂದಿಗೆ ಬರುತ್ತದೆ.

Maruti Suzuki Swift Price And Feature
Image Credit: Indianautosblog

ಹೊಸ ಸ್ವಿಫ್ಟ್ ಮುಂದೆ ಬೇಡಿಕೆ ಕಳೆದುಕೊಂಡ ಸ್ವಿಫ್ಟ್
2024 ಮಾರುತಿ ಸ್ವಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ಗುಜರಾತ್‌ ನಲ್ಲಿರುವ ಮಾರುತಿ ಸುಜುಕಿಯ ಹಂಸಲ್‌ ಪುರ ಘಟಕದಲ್ಲಿ ತಯಾರಿಸಲಾಗುವುದು. ಹೊಸ ಸ್ವಿಫ್ಟ್ ಕಾರಿನ ಇಂಜಿನ್ ಕೂಡ 12V ನ ಸೌಮ್ಯ ಹೈಬ್ರಿಡ್ ಅನ್ನು ಹೊಂದಿರುತ್ತದೆ. ಆದ್ದರಿಂದ ಈ ಕಾರಿನ ಮೈಲೇಜ್ 35 ಕಿಮೀ ವರೆಗೆ ಇರುತ್ತದೆ ಎಂದು ಹೇಳಲಾಗುತ್ತದೆ. ಹೊಸ ಮಾದರಿಯ ಬಿಡುಗಡೆಯ ನಂತರ, ಮಾರಾಟದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಕಾಣುವ ಸಾಧ್ಯತೆಗಳಿವೆ. ಹೊಸ ಸ್ವಿಫ್ಟ್ ಮಾದರಿಯ ಮಾರಾಟ ಹೆಚ್ಚಾದರೆ ಸ್ವಿಫ್ಟ್ ಹಳೆಯ ಮಾದರಿಯ ಬೇಡಿಕೆ ಕಡಿಮೆ ಆಗುವುದು ಸಹಜ.

Join Nadunudi News WhatsApp Group

Maruti Suzuki Swift Price In India
Image Credit: Overdrive

Join Nadunudi News WhatsApp Group