Wagon R Flex Fuel: ಪೆಟ್ರೋಲ್ ಹಾಕಿಸುವ ಅಗತ್ಯಾನೇ ಇಲ್ಲ, ಮಾರುಕಟ್ಟೆಗೆ ಬಂತು ಹೊಸ ಮಾದರಿಯ ವಾಗನರ್ ಕಾರ್

ಫ್ಲೆಕ್ಸ್ ಫ್ಯುಯೆಲ್ ಇಂಧನ ಮೂಲಕ ಹಳಿಸುವ ವಾಗನರ್ ಕಾರ್ ಲಾಂಚ್ ಮಾಡಿದ ಮಾರುತಿ

Maruti Suzuki Wagon R Flex Fuel: ಭಾರತೀಯ ಆಟೋವಲಯದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ Maruti Suzuki ಈಗಾಗಲೇ ಸಾಕಷ್ಟು ಮಾದರಿಯ ಕಾರ್ ಗಳನ್ನೂ ಪರಿಚಯಿಸಿದೆ. ಇನ್ನು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯ Wagon R ಮಾದರಿಯು ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ಸದ್ಯ ಕಂಪನಿಯು ಇದೀಗ ತನ್ನ ವ್ಯಾಗನಾರ್ ಮಾದರಿಯನ್ನು ಹೊಸ ವೈಶಿಷ್ಟ್ಯದೊಂದಿಗೆ ಮಾರುಕಟ್ಟೆಯಲ್ಲಿ ಪರಿಚಯಿಸಿದೆ.

Maruti Suzuki Wagon R Flex Fuel
Image Credit: Carwale

ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಫ್ಲೆಕ್ಸ್ ಫ್ಯುಯೆಲ್ ಚಾಲಿತ ವ್ಯಾಗನಾರ್
Bharat Mobility Expo 2024 ರಲ್ಲಿ ಮಾರುತಿ ಸುಜುಕಿ ಕಂಪನಿಯು ತನ್ನ Maruti Suzuki Wagon R Flex Fuel ಚಾಲಿತ ಮಾದರಿಯನ್ನು ಪ್ರದರ್ಶಿಸಿದೆ. ಈ ನೂತನ Wagon R Flex Fuel ಚಾಲಿತ ಮಾದರಿ ಮುಂದಿನ ವರ್ಷದಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಪೆಟ್ರೋಲ್ ಗೆ ಹೋಲಿಸಿದರೆ ಎಥನಾಲ್ ಅತಿ ಅಗ್ಗಗ್ದ ಬೆಲೆಯಲ್ಲಿ ಲಭ್ಯವಾಯುತ್ತದೆ. ಇದರಿಂದಾಗಿ ನಿಮ್ಮ ಪೆಟ್ರೋಲ್ ಖರ್ಚನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬಹುದು.

ಇನ್ನುಮುಂದೆ ಪೆಟ್ರೋಲ್ ಹಣವನ್ನು ಉಳಿಸಬಹುದು
ಫ್ಲರ್ಕ್ಸ್ ಫ್ಯುಯೆಲ್ ವಾಹನಗಳು ಪೆಟ್ರೋಲ್ ಹಾಗೂ ಎಥನಾಲ್ ಇಂಧನದ ಮಿಶ್ರಣದೊಂದಿಗೆ ಚಲಿಸುತ್ತದೆ. ಪೆಟ್ರೋಲ್ ಜೊತೆಗೆ ಶೇ. 20 ರಷ್ಟು ಎಥನಾಲ್ ಅನ್ನು ಬಳಸುವಂತೆ ಎಂಜಿನ್ ಅನ್ನು ಅಭಿವೃದ್ದಿಪಡಿಸಲಾಗಿದೆ. ಎಥನಾಲ್ ಅನ್ನು ಭತ್ತ , ಹುಲ್ಲು ಸೇರಿದಂತೆ ಇತರ ಕೃಷಿ ತ್ಯಾಜ್ಯಗಳಿಂದ ಮಾಡಲಾಗುತ್ತದೆ. ಪೆಟ್ರೋಲ್ ನೊಂದಿಗೆ ಎಥೆನಾಲ್ ಬೆರೆಸುವುದರಿಂದ ಇಂಗಾಲದ ಹೊರಸೂಸುವಿಕೆಯ ಪ್ರಮಾಣ ಕಡಿಮೆಯಾಗುತ್ತದೆ. ಎಥನಾಲ್ ಬಳಕೆಯು ವಾಯುಮಾಲಿನ್ಯದ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಎನ್ನಬಹುದು.

Maruti Suzuki Wagon R Flex Fuel Price
Image Credit: Zigwheels

ವ್ಯಾಗನಾರ್ ಫ್ಲೆಕ್ಸ್ ಫ್ಯುಯೆಲ್ ಕಾರ್ ನ ಬೆಲೆ ಎಷ್ಟಿರಬಹುದು…?
ಮಾರುತಿ ಸುಜುಕಿ ವ್ಯಾಗನ್ಆರ್ ಫ್ಲೆಕ್ಸ್ ಫ್ಯುಯೆಲ್ ಕಾರು 1.2 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ 4 ಸಿಲಿಂಡರ್ ಎಂಜಿನ್ ಹೊಂದಿರುವ ಸಾಧ್ಯತೆಯಿದೆ. 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.

ಇನ್ನು Maruti Suzuki Wagon R ಬೆಲೆಗೆ ಹೋಲಿಸಿದರೆ Wagon R Flex Fuel ಚಾಲಿತ ಮಾದರಿಯಾ ಬೆಲೆ ಕೊಂಚ ಅಧಿಕವಾಗಿರಲಿದೆ. ಮೂಲಗಳಿಂದ ತಿಳಿದುಬಂದ ಮಾಹಿತಿಯ ಪ್ರಕಾರ Wagon R Flex Fuel ಚಾಲಿತ ಮಾದರಿಯು ಮಾರುಕಟ್ಟೆಯಲ್ಲಿ ರೂ. 8.50 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಪರಿಚಯವಾಗಬಹುದು. ಇನ್ನು Flex Fuel ಮಾದರಿಯು ಹೆಚ್ಚಿನ ಮೈಲೇಜ್ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ.

Join Nadunudi News WhatsApp Group

Join Nadunudi News WhatsApp Group