Maruti Wagon R: 35 ಕಿಲೋಮೀಟರ್ ಮೈಲೇಜ್ ಕೊಡುವ ಈ ಸುಜುಕಿ ಕಾರಿಗೆ ಸಕತ್ ಡಿಮ್ಯಾಂಡ್, ಬೆಲೆ ಕೇವಲ 5 ಲಕ್ಷ

35 ಕಿಲೋಮೀಟರ್ ಮೈಲೇಜ್ ಕೊಡುವ ಈ ಸುಜುಕಿ ಕಾರಿಗೆ ದಾಖಲೆ ಮಾರಾಟ ಕಾಣುತ್ತಿದೆ

Maruti Suzuki WagonR Price Down: ದೇಶಿಯ ಮಾರುಕಟ್ಟೆಯಲ್ಲಿ ಕಾರ್ ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಸಾಕಷ್ಟು ಪ್ರತಿಷ್ಠಿತ ಕಾರ್ ತಯಾರಕ ಕಂಪನಿಗಳು ವಿವಿಧ ಮಾದರಿಯ ಹೊಸ ಹೊಸ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಜನಪ್ರಿಯ ಕಾರ್ ತಯಾರಕ ಕಂಪೆನಿಗಳಲ್ಲಿ ಮಾರುತಿ ಸುಜುಕಿ ಹೆಚ್ಚು ಜನಮನ್ನಣೆ ಗಳಿಸಿದೆ ಎಂದರೆ ತಪ್ಪಾಗಲ್ಲ.

ಮಾರುತಿ ಸುಜುಕಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿರುತ್ತದೆ. ಸದ್ಯ ಮಾರುತಿ ಸುಜುಕಿಯ ಜನಪ್ರಿಯ ಹ್ಯಾಚ್ ಬ್ಯಾಕ್ ವ್ಯಾಗನ್ ಆರ್ ಆಯ್ದ ರೂಪಾಂತರ ಗಳ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಹಾಗಾದರೆ ನಾವೀಗ Maruti Suzuki WagonR ನ ಯಾವ ರೂಪಾಂತರಗಳ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ತಿಳಿದುಕೊಳ್ಳೋಣ.

Maruti Suzuki Wagon R Price In India
Image Credit: Original Source

Maruti Suzuki WagonR Price Down
Maruti Suzuki WagonR ನ VXI 1.0 AGS, ZXI 1.2 AGS, ZXI Plus 1.2 AGS, ZXI Plus 1.2 AGS Dual Tone ರೂಪಾಂತರಗಳ ಬೆಲೆಯಲ್ಲಿ 5000 ರೂಪಾಯಿಯನ್ನ ಕಡಿಮೆ ಮಾಡಿದೆ. ಉಳಿದ ರೂಪಾಂತರಗಳ ಬೆಲೆಯಲ್ಲಿ ಯಾವುದೇ ರೀತಿಯ ಇಳಿಕೆ ಕಂಡು ಬಂದಿಲ್ಲ.

Maruti Suzuki WagonR Feature
*7-inch touchscreen display
*4 Speaker music system
*Steering-mounted audio
*Dual Front Airbags,
*EBD And ABS
*Rear Parking Sensors

Maruti Suzuki WagonR Price Down
Image Credit: Cartrade

Maruti Suzuki WagonR Mileage
ಮಾರುತಿ ಸೂಝುಕಿ ವ್ಯಾಗನ್ ಆರ್ ನಲ್ಲಿ ಶಕ್ತಿಯುತ ಎಂಜಿನ್ ಅನ್ನು ಅಳವಡಿಸಲಾಗಿದೆ. ವ್ಯಾಗನ್ ಆರ್ ಪೆಟ್ರೋಲ್ ಮತ್ತು CNG ಪವರ್ ಟ್ರೈನ್ ಆಯ್ಕೆಯಲ್ಲಿ ಲಭ್ಯವಿದೆ. 1 ಲೀಟರ್ ಪೆಟ್ರೋಲ್ ಎಂಜಿನ್ ನಲ್ಲಿ 67 ps ಪವರ್ ಹಾಗೂ 89 Nm ಪಿಕ್ ಟಾರ್ಕ್ ಅನ್ನು ಹೊರಹಾಕುತ್ತದೆ. ಹಾಗೆ CNG ಪವರ್ ಟ್ರೈನ್ 1.2-ಲೀಟರ್ ಪೆಟ್ರೋಲ್ ಎಂಜಿನ್ ನಲ್ಲಿ 90 ps ಪವರ್ ಹಾಗೂ 113 Nm ಪಿಕ್ ಟಾರ್ಕ್ ಅನ್ನು ಉತ್ಪದಿಸುತ್ತದೆ. 5 ಸ್ಪೀಡ್ ಮ್ಯಾನುಯಲ್ / 5 ಸ್ವೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಪಡೆದುಕೊಂಡಿದೆ. Maruti WagonR ಪೆಟ್ರೋಲ್ ರೂಪಾಂತರದಲ್ಲಿ 23.56 ಕಿಲೋಮೀಟರು ಮೈಲೇಜ್ ಅನ್ನು ನೀಡುತ್ತದೆ. ಹಾಗೆಯೇ CNG ರೂಪಾಂತರ 34.05 ಕಿಲೋಮೀಟರು ಮೈಲೇಜ್ ನೀಡುತ್ತದೆ.

Join Nadunudi News WhatsApp Group

Maruti Suzuki WagonR Price
ಭಾರತೀಯ ಮಾರುಕಟ್ಟೆಯಲ್ಲಿ Maruti Suzuki WagonR 5.54 ಲಕ್ಷದಿಂದ 7.37 ಲಕ್ಷ ಎಕ್ಸ್ ಶೋರೂಮ್ ಬೆಲೆಯನ್ನು ಹೊಂದಿದೆ. ಇದು Gallant Red, Poolside Blue, Superior White, Silky Silver, Magma Grey, ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರ ಕೈ ಸೇರುತ್ತದೆ.

Join Nadunudi News WhatsApp Group