Swift Hybrid: ಹೊಸ ಸ್ವಿಫ್ಟ್ ಕಾರಿನ ಬಣ್ಣ ಮತ್ತು ಮೈಲೇಜ್ ಕಂಡು ಯುವಕರು ಫಿದಾ, ಭರ್ಜರಿ 35 Km ಮೈಲೇಜ್

ಹೊಸ ಸ್ವಿಫ್ಟ್ ಕಾರಿನ ಕಲರ್ ಮತ್ತು ಮೈಲೇಜ್ ಕಂಡು ಜನರು ಫುಲ್ ಫಿದಾ

Maruti Swift Hybrid 2024: ವಿವಿಧ ಪ್ರತಿಷ್ಠಿತ ಆಟೋಮೊಬೈಲ್ ಕಂಪನಿಗಳು ವಿವಿಧ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಎಲ್ಲ ಕಂಪನಿಗಳು ಪೈಪೋಟಿ ನಡೆಸುತ್ತಿದೆ. ಇನ್ನು ಮಾರುಕಟ್ಟೆಯಲ್ಲಿ ಮಾರುತಿ ಕಂಪನಿಯು ಈಗಾಗಲೇ ಸಾಕಷ್ಟು ಮಾದರಿಯ ಕಾರ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸಿದೆ.

ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆ ಮಾರುತಿ (Maruti) ಕಂಪನಿಯ ಕಾರ್ ಗಳು ಹೆಚ್ಚಿನ ಸೆಲ್ ಕಾಣುತ್ತವೆ. ಕಂಪನಿಯು ತನ್ನ ಸ್ವಿಫ್ಟ್ ರೂಪಾಂತರದಲ್ಲಿ ಅನೇಕ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡಿದೆ. ಇದೀಗ ಮಾರುತಿ ತನ್ನ ಸ್ವಿಫ್ಟ್ ಅನ್ನು ಹೈಬ್ರಿಡ್ ನಲ್ಲಿ ತರಲು ಸಿದ್ಧತೆ ನಡೆಸುತ್ತಿದೆ.

Maruti Swift Hybrid 2024
Image Credit: Cartoq

Maruti Swift Hybrid Mileage
ಹೈಬ್ರಿಡ್ ಟಚ್‌ನೊಂದಿಗೆ ಬರಲಿರುವ ಈ ಕಾರಿನ ಎಂಜಿನ್‌ ಹೆಚ್ಚಿನ ಮೈಲೇಜ್‌ ನಿಡುದರಿಂದ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಲಿದೆ. ಈಗಿರುವ ಮಾರುತಿ ಸ್ವಿಫ್ಟ್ ಕಾರು ಸುಮಾರು 23 ರಿಂದ 24 ಕಿಮೀ ಮೈಲೇಜ್‌ ನೀಡುತ್ತಿದ್ದು ಗ್ರಾಹಕರಿಗೆ ತೃಪ್ತಿ ಇದೆ. Maruti Swift Hybrid 24 ರಿಂದ 35 ಕಿಲೋಮೀಟರ್ ಮೈಲೇಜ್ ನಿಡುದರಿಂದ ಗ್ರಾಹಕರಿಗೆ ಮತ್ತಷ್ಟು ಖುಷಿಯನ್ನು ನೀಡಲಿದೆ. ಈ ಮೂಲಕ ಮಧ್ಯಮ ವರ್ಗದ ಜನರ ಜೇಬಿಗೂ ಕತ್ತರಿ ಬೀಳದೆ ದೂರ ಪ್ರಯಾಣವನ್ನು ಮಾಡಬಹುದಾಗಿದೆ.

Maruti Swift Hybrid Feature
ನೂತನ ಸ್ವಿಫ್ಟ್ ನವೀನವಾದ ಕಪ್ಪು ಬಣ್ಣದ ಗ್ರಿಲ್, ಆಕರ್ಷಕ LED ಹೆಡ್ ಲ್ಯಾಂಪ್, ಡ್ಯುಯಲ್ – ಟೋನ್ ವೀಲ್ಸ್ ಅನ್ನು ಹೊಂದಿರಲಿದೆ. ಸುರಕ್ಷತೆಯ ಸಲುವಾಗಿ ADAS (ಅಡ್ವಾನ್ಸಡ್  ಡ್ರೈವರ್  ಅಸ್ಸಿಸ್ಟಂಸ್  ಸಿಸ್ಟಮ್ಸ್) ವೈಶಿಷ್ಟ್ಯದೊಂದಿಗೆ ಲಾಂಚ್ ಮಾಡಬಹುದು ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

Maruti Swift Hybrid Price
Image Credit: Carwale

Maruti Swift Hybrid Price
ಈ ಸ್ವಿಫ್ಟ್‌ ಕಾರಿನಲ್ಲಿ ಸಾಕಷ್ಟು ಸ್ಥಳಾವಕಾಶ ಇದ್ದು ನಾಲ್ಕು ಜನರಿಗೆ ಆರಾಮವಾಗಿ ಪ್ರಯಾಣ ಮಾಡಬಹುದಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ 5.99 ಲಕ್ಷದಿಂದ 9.03 ಲಕ್ಷ ಎಕ್ಸ್ ಶೋರೂಮ್ ಬೆಲೆಯಲ್ಲಿ ಲಭ್ಯವಿದೆ. ಪೆಟ್ರೋಲ್ ಹಾಗೂ CNG ಎಂಜಿನ್, ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಈ ರೂಪಾಂತರಗಳಿಗೆ ಅನುಗುಣವಾಗಿ 22.38 – 22.56 kmpl ಮೈಲೇಜ್ ಅನ್ನು ನೀಡುತ್ತದೆ.

Join Nadunudi News WhatsApp Group

ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಿರುವ ಈ Maruti Swift Hybrid 1.2 – ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹಾಗೂ ಇ – ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಗ್ರಾಹಕರಿಗೆ ಖರೀದಿಗೆ ಸಿಗುವ ಸಾಧ್ಯತೆ ಇದೆ. 30 – 35 kmpl ಮೈಲೇಜ್ ನೀಡಬಹುದು ಎನ್ನಲಾಗಿದೆ. ಹಾಗೆ ಮತ್ತೊಂದು ನಾನ್ ಹೈಬ್ರಿಡ್ 1.2 – ಲೀಟರ್ 3 – ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಆಯ್ಕೆಯೊಂದಿಗೂ ಖರೀದಿದಾರಿಗೆ ಲಭ್ಯವಾಗಬಹುದು.

Join Nadunudi News WhatsApp Group