Maruti Jimny 2024: ಥಾರ್ ಕಾರಿಗೆ ನಡುಕ ಹುಟ್ಟಿಸಿದ ಮಾರುತಿ ಜಿಮ್ನಿ, ಬೆಲೆಯಲ್ಲಿ ದಖಕೆಯ ಡಿಸ್ಕೌಂಟ್ ಘೋಷಣೆ

ಹೆಚ್ಚಿನ ಬೇಡಿಕೆಯಿರುವ ಜಿಮ್ನಿ ಮಾದರಿಯ ಬೆಲೆ ಕಡಿತ.

Maruti Jimny Price Down: Maruti Suzuki ಕಂಪನಿಯು ಈಗಾಗಲೇ ಮಾರುಕಟ್ಟೆಯಲ್ಲಿ ಬಾರಿ ಜನಪ್ರಿಯತೆ ಪಡೆದುಕೊಂಡಿದೆ. ವಿವಿಧ ಮಾದರಿಯ ಕಾರ್ ಗಳನ್ನು ಪರಿಚಯಿಸುತ್ತ ಮಾರುತಿ ಜನರ ಗಮನ ಸೆಳೆಯುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಆಫ್ ರೋಡ್ ವಿಭಾಗದಲ್ಲಿ ಕಿಂಗ್ ಆಗಿರುವ Maruti jimny ಕಾರ್ ಅಂತಾರಾಷ್ಟ್ರೀಯ ಹಾಗೂ ದೇಶಿಯ ಮಾರುಕಟ್ಟೆಯಲ್ಲಿ ಕೂಡ ಬಾರಿ ಬೇಡಿಕೆಯನ್ನು ಪಡೆದುಕೊಂಡಿದೆ.

Maruti Jimny Price Down
Image Credit: Carwale

ಹೆಚ್ಚಿನ ಬೇಡಿಕೆಯಿರುವ ಜಿಮ್ನಿ ಮಾದರಿಯ ಬೆಲೆ ಕಡಿತ
ಸದ್ಯ ಮಾರುತಿ ಕಂಪನಿಯು ಈ ವರ್ಷದಲ್ಲಿ ತನ್ನ ಉತ್ಪನ್ನಗಳ ಬೆಲೆಯನ್ನು ಪರಿಷ್ಕರಿಸಿದೆ. ಅದರಲ್ಲಿ ಜನಪ್ರಿಯ ಮಾರುತಿ ಜಿಮ್ನಿ ಬೆಲೆ ಕೂಡ ಸೇರಿಕೊಂಡಿದೆ. ಮಾರುಕಟ್ಟೆಯಲ್ಲಿ ಕಂಪನಿಯು ತಮ್ಮ ಜನಪ್ರಿಯ ಜಿಮ್ನಿ ಬೆಲೆಯನ್ನು ಕಡಿತ ಮಾಡುವ ಮೂಲಕ ಗ್ರಾಹಕರಿಗೆ ಮತ್ತೊಂದು ಅವಕಾಶವನ್ನು ನೀಡಿದೆ.

ಈ ಮಾರುತಿ ಜಿಮ್ನಿ ಎಸ್‌ಯುವಿಯ ಆರಂಭಿಕ ಬೆಲೆ ರೂ.12.74 ಲಕ್ಷ ನಿಗದಿಪಡಿಸಲಾಗಿದೆ. ಮಾರುತಿ ಸುಜುಕಿ ಜಿಮ್ನಿ Zeta AT, Alpha AT, ಮತ್ತು Alpha AT ಡ್ಯುಯಲ್- ಟೋನ್ ಜಿಮ್ನಿಯ ಆಯ್ದ ರೂಪಾಂತರಗಳಲ್ಲಿ ರೂ.10,000 ಬೆಲೆ ಕಡಿತ ಕಾಣಬಹುದಾಗಿದೆ. ಮಾರುತಿ ಜಿಮ್ನಿಯ ಉಳಿದ ರೂಪಾಂತರಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆಫ್ ರೋಡ್ ವಿಭಾಗದಲ್ಲಿ ಈ ಜಿಮ್ನಿ ಮಾದರಿಯು ಬೆಸ್ಟ್ ಆಯ್ಕೆ ಎನ್ನಬಹುದು.

Maruti Jimny Price In India
Image Credit: Original Source

Maruti Suzuki Jimny ಮಾದರಿಯ ಎಂಜಿನ್ ಸಾಮರ್ಥ್ಯ
ಕಂಪನಿಯು ನೂತನ jimny ಮಾದರಿಯಲ್ಲಿ 1 .5 ಲೀಟರ್ ಕೆ- ಸೀರಿಯಸ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 6000 rmp ನಲ್ಲಿ 104 .08 PS 4000 rpm ನಲ್ಲಿ 134.2 Nm ಗರಿಷ್ಟ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಸೈಡ್ ಡೋರ್ ಕ್ಲಾಡಿಂಗ್, ಫ್ರಂಟ್ ಸ್ಕಿಡ್ ಪ್ಲೇಟ್, ಡೋರ್ ಸಿಲ್ ಗಾರ್ಡ್ ನ ವಿಶೇಷ ವಿನ್ಯಾಸ ಹೊಂದಿದೆ.

ಈ ಎಂಜಿನ್ ನೊಂದಿಗೆ 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದ್ದು, ಈ ಎಸ್‍ಯುವಿಯು 4WD (ಫೋರ್ ವೀಲ್ಸ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ. ಇನ್ನು ಈ ಮಾದ್ರಿಯು ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 16.94 ಕಿಲೋಮೀಟರ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸುಮಾರು 16.39 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

Join Nadunudi News WhatsApp Group