Medicine Facility: ಇನ್ಮುಂದೆ ಸರ್ಕಾರೀ ಆಸ್ಪತ್ರೆಗಳಲ್ಲಿ ಸಿಗಲಿದೆ ಈ ಎಲ್ಲಾ ಔಷಧಿ, ರಾಜ್ಯದ ಜನೆತೆಗೆ ಇನ್ನೊಂದು ಗುಡ್ ನ್ಯೂಸ್

ಇನ್ಮುಂದೆ ಸರ್ಕಾರೀ ಆಸ್ಪತ್ರೆಯಲ್ಲಿ ಸಿಗಲಿದೆ ಈ ಔಷಧಿಗಳು

All Medicines Will Be Available In Government Hospitals:  ಸದ್ಯ ರಾಜ್ಯ ಸರ್ಕಾರ ಜನತೆಗಾಗಿ ವಿವಿಧ ಕಲ್ಯಾಣ ಯೋಜನೆಯನ್ನು ಪರಿಚಯಿಸಿದೆ. ಜನರ ಆರೋಗ್ಯದ ರಕ್ಷಣೆಗಾಗಿ ಆರೋಗ್ಯ ಯೋಜನೆಗಳನ್ನು ಕೊಡ ಪರಿಚಯಿಸಿದೆ ಎನ್ನಬಹುದು. ರಾಜ್ಯದ ಜನತೆಗೆ ಸರ್ಕಾರ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಸದ್ಯ ರಾಜ್ಯ ಸರ್ಕಾರ ಜನತೆಗಾಗಿ ವಿಶೇಷ ಸೌಲಭ್ಯವನ್ನು ಕಲ್ಪಿಸಿಕೊಡಲು ಮುಂದಾಗಿದೆ.

All Medicines Will Be Available In Government Hospitals
Image Credit: Onmanorama

ರಾಜ್ಯದ ಜನೆತೆಗೆ ಇನ್ನೊಂದು ಗುಡ್ ನ್ಯೂಸ್
ಇನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಯಾವುದೇ ವೆಚ್ಚವಿಲ್ಲದೆ ಚಿಕಿತ್ಸೆಯನ್ನು ನೀಡಲು ಸರ್ಕಾರ ಸಾಕಷ್ಟು ಯೋಜನೆಯನ್ನ ಜಾರಿಗೆ ತಂದಿದೆ ಮತ್ತು ಅದೇ ರೀತಿಯಲ್ಲಿ ಸರ್ಕಾರೀ ಆಸ್ಪತ್ರೆಗಳಲ್ಲಿ ಬಡವರಿಗೆ ಸರ್ಕಾರೀ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಆದರೆ ಕೆಲವೊಂದು ಆಸ್ಪತ್ರೆಯಲ್ಲಿ ಕೆಲ ಔಷಧಗಳು ಲಭ್ಯವಾಗುವುದಿಲ್ಲ.ಹೀಗಾಗಿ ಹೊರಗಡೆ ಹಣವನ್ನು ನೀಡಿ ಔಷಧವನ್ನು ಕೊಂಡುಕೊಳ್ಳಬೇಕಾಗುತ್ತದೆ. ಆದರೆ ಹಣ ಇಲ್ಲದೆ ಇರುವವರು ಔಷಧಗಳನ್ನು ಖರೀದಿಸಲು ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಇಂತವರಿಗೆ ಸಹಾಯ ಮಾಡಲು ರಾಜ್ಯ ಸರ್ಕಾರ ಇದೀಗ ಹೊಸ ಸೌಲಭ್ಯವನ್ನು ನೀಡಲು ಮುಂದಾಗಿದೆ. ಸರ್ಕಾರೀ ಆಸ್ಪತ್ರೆಗಳಲ್ಲಿ ಔಷಧಗಳು ಲಭ್ಯವಾಗುವಂತೆ ಮಾಡಲು ಸರ್ಕಾರ ನಿರ್ಧರಿಸಿದೆ.

Medicine Facilities In Karnataka
Image Credit: Thejakartapost

ಇನ್ಮುಂದೆ ಸರ್ಕಾರೀ ಆಸ್ಪತ್ರೆಗಳಲ್ಲಿ ಸಿಗಲಿದೆ ಈ ಎಲ್ಲಾ ಔಷಧಿ
ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ Medicines ಲಭ್ಯವಾಗುವಂತೆ ಕ್ರಮಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಮತ್ತೊಂದು ಶುಭ ಸುದ್ದಿ ನೀಡಿದೆ. ಈ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ.

ರಾಜ್ಯದ ಪ್ರಾಥಮಿಕ ಹಾಗೂ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧಗಳ ಕೊರತೆಯಿದ್ದರೆ ರಾಷ್ಟ್ರೀಯ ಉಚಿತ ಔಷಧ ಸೇವಾ ಕಾರ್ಯಕ್ರಮದ ಅನುದಾನದಲಿ, ಎಬಿಎಆರ್ ಕೆ ಅನುದಾನ, ಎಆರ್ ಎಸ್ ಅನುದಾನ ಹಾಗೂ ಇತರ ಅನುದಾನಗಳಲ್ಲಿ ಖರೀದಿಸಿ ಫಲಾನುಭವಿಗಳಿಗೆ ನೀಡುವಂತೆ ಸೂಚನೆ ನೀಡಲಾಗಿದೆ. ರಾಜ್ಯದ ಎಲ್ಲ ಸರ್ಕಾರೀ ಆಸ್ಪತ್ರೆಗಲ್ಲಿ ಇನ್ನುಮುಂದೆ ಎಲ್ಲ ಔಷಧಿಗಳು ಲಭ್ಯವಾಗುವಂತೆ ಸೂಚನೆ ನೀಡಲಾಗಿದ್ದು, ಶೀಘ್ರವೇ ಎಲ್ಲಾ ಔಷಧಿಗಳು ಸಿಗಲಿವೆ ಎಂದು ಸಚಿವ Dinesh Gundu Rao ಅವರು ತಿಳಿಸಿದ್ದಾರೆ.

Join Nadunudi News WhatsApp Group

Join Nadunudi News WhatsApp Group