Medicine Price: ಜನಸಾಮಾನ್ಯರಿಗೆ ಮೋದಿ ಸರ್ಕಾರದಿಂದ ಗುಡ್ ನ್ಯೂಸ್, ಈ ಮಾತ್ರೆಗಳ ಬೆಲೆಯಲ್ಲಿ ಅರ್ಧದಷ್ಟು ಇಳಿಕೆ

ಹೃದಯರೋಗ, ಜ್ವರ ಸೇರಿದಂತೆ ಸುಮಾರು 100 ರೋಗಗಳ ಔಷಧಿ ಬೆಲೆ ಇಳಿಕೆ

Medicine Price Down: ದೇಶದಲ್ಲಿ ಈಗಾಗಲೇ ಹಣದುಬ್ಬರತೆಯ ಪರಿಸ್ಥಿತಿ ಎದುರಾಗಿದೆ. ಜನಸಾಮಾನ್ಯರು ಯಾವುದೇ ವಸ್ತುವನ್ನು ಖರೀದಿಸಬೇಕೆಂದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯನ್ನು ನೀಡಿ ಖರೀದಿಸುವ ಅನಿವಾರ್ಯತೆ ಎದುರಾಗಿದೆ. ದಿನ ಬಳಕೆಯ ವಸ್ತುಗಳ ಬೆಲೆ ಕೂಡ ಗಗನಕ್ಕೇರಿದೆ ಎನ್ನಬಹುದು. ಇನ್ನು ಜನಸಾಮಾನ್ಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಳಸುವ Medicine ನ ಬೆಲೆ ಕೂಡ ಇತ್ತೀಚಿಗೆ ಹೆಚ್ಚಾಗುತ್ತಿದೆ. ಸದ್ಯ ಮೋದಿ ಸರ್ಕಾರ ಔಷಧಗಳ ವಿಚಾರವಾಗಿ ಬಹುದೊಡ್ಡ ಘೋಷಣೆಯನ್ನು ಹೊರಡಿಸಿದೆ.

Medicine Price Down
Image Credit: Times Now News

ಜನಸಮಾನ್ಯರಿಗೆ ಮೋದಿ ಸರ್ಕಾರದಿಂದ ಗುಡ್ ನ್ಯೂಸ್
ಇನ್ನು ಹಾಲು, ತರಕಾರಿ, ಸೇರಿದಂತೆ ಇನ್ನಿತರ ವಸ್ತುಗಳ ಬೆಲೆ ಹೆಚ್ಚಾದರೆ ಅವುಗಳನ್ನು ಬಳಸುವುದು ಕಡಿಮೆ ಮಾಡಬಹುದು. ಆದರೆ ಔಷದಗಳ ಬೆಲೆ ಎಷ್ಟೇ ಹೆಚ್ಚಾದರೂ ಕೂಡ ಅದನ್ನು ಖರೀದಿಸದೆ ಬೇರೆ ಮಾರ್ಗವಿಲ್ಲ. ಆರೋಗ್ಯದಲ್ಲಿ ಯಾವುದೇ ತೊಂದರೆ ಆಗಬಾರದು ಎಂದಾದರೆ ಅಗತ್ಯವಿರುವವರು ಔಷಧಗಳನ್ನು ಸೇವಿಸುವುದು ಅಗತ್ಯವಾಗಿತ್ತದೆ. ಆದರೆ ಇತ್ತೀಚಿಗೆ ಜನರು ಔಷದಗಳ ಬೆಲೆಯನ್ನು ಕೇಳಿ ಕಂಗಾಲಾಗಿದ್ದಾರೆ. ಸದ್ಯ ಕೇಂದ್ರ ಮೋದಿ ಸರ್ಕಾರ ಜನಮಸಾಮಾನ್ಯರಿಗೆ ಔಷಧಗಳ ವಿಚಾರವಾಗಿ ಸಿಹಿ ಸುದ್ದಿ ನೀಡಿದೆ.

ಹೃದಯರೋಗ, ಜ್ವರ ಸೇರಿದಂತೆ ಸುಮಾರು 100 ರೋಗಗಳ ಔಷಧಿ ಬೆಲೆ ಇಳಿಕೆ
ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮೋದಿ ಸರ್ಕಾರ ಔಷಧಗಳ ಬೆಲೆಯನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಮಧುಮೇಹ, ಜ್ವರ, ಹೃದಯರೋಗ, ಕೀಲುನೋವು ಮೈಕಿ ನೋವು ಸೇರಿದಂತೆ ಇನ್ನಿತರ ಸೋಂಕುಗಳ ರೋಗದ ಔಷಧಗಳ ಬೆಲೆಯಲ್ಲಿ ಇಳಿಕೆ ಮಾಡಲು ಮೋದಿ ಸರ್ಕಾರ ನಿರ್ಧರಿಸಿದೆ.

Medicine Price Down In India
Image Credit: Thejakartapost

ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (NPPA) 69 ಸೂತ್ರೀಕರಣಗಳಿಗೆ ಬೆಲೆಯನ್ನು ನಿಗದಿಪಡಿಸಿದೆ. ಇತ್ತೀಚಿನ ಅಧಿಸೂಚನೆಯಲ್ಲಿ NPPA , ಮಧುಮೇಹ, ಜ್ವರ, ಹೃದಯರೋಗ, ಕೀಲುನೋವು ಮೈಕಿ ನೋವು ಸೇರಿದಂತೆ ಇನ್ನಿತರ ಸೋಂಕುಗಳ ರೋಗದ ಔಷಧಗಳ ಬೆಲೆಯಲ್ಲಿ ಇಳಿಕೆಯನ್ನು ಘೋಷಿಸಿದೆ. ಇದರ ಭಾಗವಾಗಿ ನಾಲ್ಕು ವಿಶೇಷ ವೈಶಿಷ್ಟ್ಯಗಳ ಉತ್ಪನ್ನಗಳಿಗೆ ಅನುಮೋದನೆ ನೀಡಲಾಗಿದೆ. NPPA 69 ಸೂತ್ರೀಕರಣಗಳಿಗೆ ಚಿಲ್ಲರೆ ಬೆಲೆಯನ್ನು ನಿಗದಿಪಡಿಸಿದೆ ಮತ್ತು 31 ಸೂತ್ರೀಕರಣಗಳಿಗೆ ಮಿತಿಯನ್ನು ನಿಗದಿಪಡಿಸಿದೆ.

Join Nadunudi News WhatsApp Group

Join Nadunudi News WhatsApp Group