ಖ್ಯಾತ ನಟಿ ಮೀನಾ ಅವರ ಗಂಡ ಅಕಾಲಿಕ ನಿಧನ, ಅಷ್ಟಕ್ಕೂ ಅವರಿಗೆ ಏನಾಗಿತ್ತು ಗೊತ್ತಾ, ವೈದ್ಯರು ಹೇಳಿದ್ದೇನು ನೋಡಿ.

ಖ್ಯಾತ ನಟಿ ಮೀನಾ ಕನ್ನಡ, ಹಿಂದಿ, ತಮಿಳು, ಮಲಯಾಳಂ, ತೆಲುಗು ಸೇರಿದಂತೆ ಹಲವು ಭಾಷೆಯಲ್ಲಿ ನಟನೆಯನ್ನ ಮಾಡಿ ಅದೆಷ್ಟೋ ಜನರ ಮನಸ್ಸನ್ನ ಗೆದ್ದ ನಟಿ ಎಂದು ಹೇಳಬಹುದು. ಹೌದು ಕನ್ನಡದಲ್ಲಿ ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ನಟಿ ಮೀನಾ ಅವರು ಒಂದು ಕಾಲದಲ್ಲಿ ಕನ್ನಡದ ಟಾಪ್ ನಟಿ ಅನ್ನುವ ಹೆಗ್ಗಳಿಕೆಯನ್ನ ಗಳಿಸಿಕೊಂಡಿದ್ದರು ಎಂದು ಹೇಳಬಹುದು. ಇನ್ನು ಇದರ ನಡುವೆ ಹಿಂದಿ ಮತ್ತು ಕೆಲವು ಭಾಷೆಯಲ್ಲಿ ನಟಿಸಿದ ನಟಿ ಮೀನಾ ಅವರು ಮೂಲತಃ ಮಲಯಾಳಂ ನಟಿ ಎಂದು ಹೇಳಬಹುದು. ಚಿತ್ರರಂಗ ಮಾತ್ರವಲ್ಲದೆ ರಾಜಕೀಯದಲ್ಲಿ ಕೂಡ ಹೆಸರು ಮಾಡಿದ್ದ ನಟಿ ಮೀನಾ ಅವರಿಗೆ ದೇಶದಲ್ಲಿ ಅಪಾರವಾದ ಅಭಿಮಾನಿಗಳು ಇದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಸದ್ಯ ಪೋಷಕ ಪಾತ್ರದಲ್ಲಿ ಮಿಂಚುತ್ತಿದ್ದ ನಟಿ ಮೀನಾ ಅವರ ಜೀವನದಲ್ಲಿ ಬಿರುಗಾಳಿ ಬಂದಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಖ್ಯಾತ ನಟಿ ಮೀನಾ ಅವರ ಗಂಡ ವಿದ್ಯಾಸಾಗರ್ ಅವರು ಅಕಾಲಿಕವಾಗಿ ನಿಧನರಾಗಿದ್ದು ಮೀನಾ ಅವರ ಆಕ್ರಂದನ ಮುಗಿಲುಮುಟ್ಟಿದೆ ಎಂದು ಹೇಳಬಹುದು. ಹಾಗಾದರೆ ಮೀನಾ ಅವರ ಗಂಡನಿಗೆ ಏನಾಗಿತ್ತು ಮತ್ತು ಅವರ ಸಾವಿಗೆ ಅಸಲಿ ಕಾರಣ ಏನು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ನಟಿ ಮೀನಾ ಅವರ ಗಂಡ ವಿದ್ಯಾಸಾಗರ್ ಅವರು ಇಂದು ಖಾಸಗಿ ಆಸ್ಪತ್ರೆಯಲ್ಲಿ ತೀವ್ರವಾದ ಅನಾರೋಗ್ಯದ ಸಮಸ್ಯೆಯಿಂದ ನಿಧನರಾಗಿದ್ದಾರೆ ಎಂದು ಮಾಹಿತಿಗಳಿಂದ ತಿಳಿದುಬಂದಿದೆ.

Meen husband no more

ಹೌದು ಮೀನಾ ಅವರ ಗಂಡ ವಿದ್ಯಾಸಾಗರ್ ಅವರಿಗೆ ಕರೋನ ಸೋಂಕು ಕಾಣಿಸಿಕೊಂಡಿದ್ದು ಅವರ ಆರೋಗ್ಯದಲ್ಲಿ ತಿವಾರವಾದ ಏರುಪೇರು ಉಂಟಾಗಿದ್ದು ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವಿದ್ಯಾಸಾಗರ್ ಮಾತ್ರವಲ್ಲದೆ ಮನೆಯಲ್ಲಿನ ಹೆಚ್ಚಿನ ಜನರಿಗೆ ಕರೋನ ಸೋಂಕು ಕಾಣಿಸಿಕೊಂಡಿತ್ತು, ಆದರೆ ಎಲ್ಲರು ಚೇತರಿಸಿಕೊಂಡಿದ್ದರು, ಆದರೆ ವಿದ್ಯಾಸಾಗರ್ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿರಲಿಲ್ಲ. ಕರೋನ ಸೋಂಕಿನ ಕಾರಣ ಅವರ ಶ್ವಾಸಕೋಶ ತೀವ್ರವಾದ ಹಾನಿಗೆ ಉಂಟಾಗಿದ್ದು ಅವರ ಶ್ವಾಸಕೋಶವನ್ನ ಬದಲಾವಣೆ ಮಾಡಬೇಕು ಎಂದು ವೈದ್ಯರು ಹೇಳಿದ್ದರಂತೆ.

ಇನ್ನು ಅಷ್ಟೇ ಅಲ್ಲದೆ ಅವರ ಲಿವರ್ ಕೂಡ ಸರಿಯಾಗಿ ಕೆಲಸ ಮಾಡದ ಕಾರಣ ಅದನ್ನ ಕೂಡ ಬದಲಾಯಿಸಬೇಕಾಗಿತ್ತು, ಆದರೆ ಕಸಿ ಮಾಡಲು ದಾನಿಗಳು ಸಿಗದ ಕಾರಣ ಹಾಗೆ ಇರಬೇಕಾಯಿತು. ಸದ್ಯ ದಂಪತಿಗಳಿಗೆ ಒಬ್ಬ ಮಗಳು ಇದ್ದು ಮಗಳು ಅಪ್ಪನನ್ನ ಕಳೆದುಕೊಂಡು ಅನಾಥಳಾಗಿದ್ದಾಳೆ ಎಂದು ಹೇಳಬಹುದು. ಸದ್ಯ ಕರೋನ ಅನ್ನುವುದು ನಟಿ ಮೀನಾ ಅವರ ಬದುಕಿನಲ್ಲಿ ಆಡಬಾರದ ಆಟವನ್ನ ಆಡಿದೆ ಎಂದು ಹೇಳಬಹುದು. ಈ ನೋವನ್ನ ತಡೆದುಕೊಳ್ಳುವ ಶಕ್ತಿ ಆ ದೇವರು ನಟಿ ಮೀನಾ ಅವರಿಗೆ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Join Nadunudi News WhatsApp Group

Meen husband no more

Join Nadunudi News WhatsApp Group