Chiranjeevi Watch: ನಟ ಚೀರಂಜೀವಿ ಧರಿಸಿದ ವಾಚ್ ಬೆಲೆ ಎಷ್ಟು ಗೊತ್ತಾ..? ದುಬಾರಿ ನಟನ ದುಬಾರಿ ವಾಚ್.
ಬೇಬಿ ಚಿತ್ರದ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ನಟ ಚೀರಂಜೀವಿ ಧರಿಸಿದ ವಾಚ್ ಬೆಲೆ ಎಷ್ಟು.
Megastar Chiranjeevi Expensive Watch: ತೆಲುಗು ಚಿತ್ರರಂಗದ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ (Chiranjeevi ) ಇದೀಗ ಸುದ್ದಿಯಾಗಿದ್ದಾರೆ. ನಟ ಚಿರಂಜೀವಿ ಅವರು ಟಾಲಿವುಡ್ ಚಿತ್ರರಂಗದಲ್ಲಿ ಹೆಚ್ಚಿನ ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ.
ಈ ಹಿಂದೆ ನಟ ಚಿರಂಜೀವಿ ಅವರು ತಮ್ಮ ಲಕ್ಸುರಿ ಕಾರ್ ಖರೀದಿಯ ವೇಳೆ ಸುದ್ದಿಯಾಗಿದ್ದರು. ಇದೀಗ ಮೇಘಾಸ್ಟಾರ್ ಮತ್ತೊಮ್ಮೆ ತಮ್ಮ ಐಷಾರಾಮಿ ಲೈಫ್ ಸ್ಟೈಲ್ ವಿಚಾರವಾಗಿ ಸುದ್ದಿಯಾಗಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ
ಸಾಮಾನ್ಯವಾಗಿ ಸೆಲೆಬ್ರೆಟಿಗಳು ದುಬಾರಿ ಬಟ್ಟೆ, ವಾಚ್, ಸ್ಯಾಂಡಲ್, ಕಾರ್, ಬೈಕ್ ಹೀಗೆ ಇನ್ನಿತರ ದುಬಾರಿ ವಸ್ತುಗಳನ್ನು ಬಳಸುತ್ತಾರೆ. ಸೆಲೆಬ್ರಟಿಗಳು ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಇನ್ನು ಮೆಗಾಸ್ಟಾರ್ ಚಿರಂಜೀವಿ ಅವರು ಕೂಡ ಆಗ ಸೋಶಿಯಲ್ ಮೀಡಿಯಾದಲ್ಲಿ ದುಬಾರಿ ವಸ್ತುಗಳ ಜೊತೆಗೆ ಬಹಳ ಚರ್ಚೆಗೆ ಕಾರಣರಾಗುತ್ತಾರೆ. ಸೆಲೆಬ್ರೆಟಿಗಳು ಧರಿಸುವ ಬ್ರಾಂಡೆಡ್ ವಸ್ತುಗಳ ಬೆಲೆ ಸಾಮಾನ್ಯ ಜನರನ್ನು ಅಚ್ಚರಿಪಡಿಸುತ್ತದೆ.
ಬೇಬಿ ಮೂವಿ ಸಕ್ಸಸ್ ಮೀಟ್
ತೆಲುಗು ಚಿತ್ರರಂಗದಲ್ಲಿ ಬೇಬಿ ಸಿನಿಮಾ ಬಾರಿ ಸದ್ದು ಮಾಡುತ್ತಿದೆ. ಆನಂದ್ ದೇವರಕೊಂಡ, ವೈಷ್ಣವಿ ಅಭಿನಯದ ಬೇಬಿ ಮೂವಿ ಬಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸಿದೆ. ಇನ್ನು ಹೈದರಾಬಾದ್ ನಲಿ ಬೇಬಿ ಚಿತ್ರದ ಸಕ್ಸಸ್ ಮೀಟ್ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಮೆಗಾಸ್ಟಾರ್ ಚಿರಂಜೀವಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಅವರು ಬಾರಿ ಹೈಲೈಟ್ ಆಗಿದ್ದಾರೆ.
ಸಕ್ಸಸ್ ಮೀಟ್ ಪ್ರೋಗ್ರಾಮ್ ಗೆ ಆಗಮಿಸಿದ ಚಿರಂಜೀವಿ ಅವರು ದುಬಾರಿ ಬೆಲೆಯ ವಾಚ್ ಧರಿಸಿದ್ದರು. ಮೆಗಾಸ್ಟಾರ್ ಧರಿಸಿದ ದುಬಾರಿ ವಾಚ್ ಬಾರಿ ವೈರಲ್ ಆಗುತ್ತಿದೆ. ವಿಶಿಷ್ಟ ವಿನ್ಯಾಸದ ಈ ವಾಚ್ ನ ಬೆಲೆ ಎಷ್ಟಿರಬಹುದು ಎಂದು ನೋಡುಗರು ಕುತೂಹಲರಾಗಿದ್ದಾರೆ.
ನಟ ಚೀರಂಜೀವಿ ಧರಿಸಿದ ವಾಚ್ ಬೆಲೆ ಎಷ್ಟು ಗೊತ್ತಾ
ಇನ್ನು ಚಿರಂಜೀವಿ ಅವರು ರೋಲೆಕ್ಸ್ ಕಾಸ್ಮೋಗ್ರಾಫ್ ಡೆಟೋನಾ ವಾಚ್ ಅನ್ನು ಧರಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಈ ರೋಲೆಕ್ಸ್ ಕಾಸ್ಮೋಗ್ರಾಫ್ ಡೆಟೋನಾ ವಾಚ್ 2,30,000 ಡಾಲರ್ ಆಗಿದ್ದು ಭಾರತೀಯ ರೂ. ಗಳಲ್ಲಿ 1.90 ಕೋಟಿ ಮೌಲ್ಯದ್ದಾಗಿದೆ. ಚಿರಂಜೀವಿ ಧರಿಸಿದ ವಾಚ್ ನ ಬೆಲೆಯಲ್ಲಿ ಎರಡು ಐಷಾರಾಮಿ ಕಾರ್ ಅನ್ನು ಖರೀದಿಸಬಹುದಾಗಿತ್ತು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.