Megha Shetty: ಅನಿರುಧ್ ಬಗ್ಗೆ ಯಾರಿಗೂ ತಿಳಿಯದ ಹಲವು ವಿಷಯ ಹೇಳಿಕೊಂಡ ಮೇಘಾ ಶೆಟ್ಟಿ, ಭಾವುಕರಾದ ನಟಿ.

ಅನಿರುಧ್ ಜೊತೆ ನಟನೆ ಮಾಡುವ ಸಮಯದಲ್ಲಿ ತಮಗೆ ಆಗುತ್ತಿದ್ದ ಒಳ್ಳೆಯ ಅನುಭವಗಳನ್ನ ಹೇಳಿಕೊಂಡು ನಟಿ ಮೇಘಾ ಶೆಟ್ಟಿ ಭಾವುಕರಾಗಿದ್ದಾರೆ.

Megha Shetty About Anirudha Jatkar: ಕನ್ನಡಿಗರ ನೆಚ್ಚಿನ ಧಾರಾವಾಹಿಯಾದ ಜೊತೆಜೊತೆಯಲಿ (Jote Joteyali) ಇನ್ನೇನು ಕೆಲವ ದಿನಗಳಲ್ಲಿ ಅಂತ್ಯಕಾಣಲಿದೆ. ಧಾರಾವಾಹಿ ಪ್ರಿಯರು ತಮ್ಮ ನೆಚ್ಚಿನ ಧಾರಾವಾಹಿ ಮುಕ್ತಾಯಗೊಂಡಿರುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಜೊತೆ ಜೊತೆಯಲಿ ದಾರಾವಾಹಿಯಲ್ಲಿನ ಪ್ರತಿ ಪಾತ್ರದಾರಿಗಳು ಕೂಡ ಸಾಕಷ್ಟು ಖ್ಯಾತಿ ಪಡೆದಿದ್ದಾರೆ.

ಇದೀಗ ಜೊತೆ ಜೊತೆಯಲಿ ಧಾರಾವಾಹಿಯ ನಾಯಕಿ ಮೇಘ ಶೆಟ್ಟಿ (Megha Shetty) ಅವರು ಧಾರಾವಾಹಿ ಬಗ್ಗೆ ಒಂದಿಷ್ಟು ಮಾತನಾಡಿದ್ದಾರೆ. ಅನಿರುದ್ದ್ ಅವರ ಜೊತೆಗಿನ ನಟನೆಯ ಅನುಭವದ ಬಗ್ಗೆ ನಟಿ ಮಾತನಾಡಿದ್ದಾರೆ.

Actress Megha Shetty is emotional while talking about the good experiences she had while acting with Anirudh.
Image Credit: instagram

ಶೀಘ್ರದಲ್ಲಿ ಅಂತ್ಯವಾಗಲಿದೆ ಜೀ ವಾಹಿನಿಯ ಜೊತೆ ಜೊತೆಯಲಿ
ಇನ್ನು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿ ಹಾಗೂ ಹರೀಶ್ ರಾಜ್ (Harish Raj) ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸತತ ನಾಲ್ಕು ವರ್ಷಗಳ ಕಾಲ ಜೊತೆ ಜೊತೆಯಲಿ ಧಾರಾವಾಹಿ ಪ್ರಸಾರವಾಗಿ ವಿಕ್ಷರನ್ನು ಸೆಳೆದಿದೆ. ಇದೀಗ ಜೊತೆ ಜೊತೆಯಲಿ ಧಾರಾವಾಹಿ ಮುಕ್ತಾಯ ಹಂತಕ್ಕೆ ತಲುಪಿದೆ. ಈ ಕುರಿತು ಧಾರಾವಾಹಿ ಪ್ರಿಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Acting with Aniruddha was like acting with Vishnuvardhan, says actress Megha Shetty
Image Credit: Instagram

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಈ ಹಿಂದೆ ಅನಿರುದ್ದ್ (Anirudha) ಅವರು ಮುಖ್ಯ ಪಾತ್ರ ನಿರ್ವಹಿಸುತ್ತಿದ್ದರು. ಯಾವುದೊ ಕಾರಣದಿಂದಾಗಿ ಅನುರುದ್ದ್ ಹಾಗೂ ಧಾರಾವಾಹಿ ತಂಡದ ನಡುವೆ ವಿವಾದ ಉಂಟಾಗಿ ಅನಿರುದ್ದ್ ತಂಡದಿಂದ ಹೊರಗೆ ಬಂದಿದ್ದರು. ಇನ್ನು ಅನಿರುದ್ದ್ ಅವರ ಜೊತೆಗಿನ ನಟನೆಯ ಕ್ಷಣಗಳನ್ನು ನಟಿ ಮೇಘಾ ಶೆಟ್ಟಿ ನೆನಪಿಸಿಕೊಂಡಿದ್ದಾರೆ.

ಅನಿರುದ್ದ್ ಅವರ ಜೊತೆಗಿನ ನಟನೆಯ ಅನುಭವ ಹಂಚಿಕೊಂಡ ಮೇಘ ಶೆಟ್ಟಿ
ಅನಿರುದ್ದ್ ಅವರ ಜೊತೆ ನಟಿಸಿದ ಅನುಭವದ ಬಗ್ಗೆ ಮೇಘ ಶೆಟ್ಟಿ ಮಾತನಾಡಿದ್ದಾರೆ. “ಅನಿರುದ್ದ್ ಸರ್ ಜೊತೆ ನಟಿಸಿದ್ದು ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜೊತೆ ನಟಿಸಿದಂತೆ ಭಾಸವಾಯಿತು. ದಾದಾ ಪ್ರತಿರೂಪ ಅವರಲ್ಲಿದೆ. ಮೊದಲ ಪ್ರಯತ್ನದಲ್ಲೇ ಅವರೊಟ್ಟಿಗೆ ನಟಿಸಿದ್ದು ಬಹಳ ಖುಷಿಯಾಯಿತು.

Join Nadunudi News WhatsApp Group

Megha Shetty shared her experience of acting with Aniruddha in the serial jothe jotheyali
Image Credit: Instagram

ಬಹಳಷ್ಟು ವಿಚಾರಗಳನ್ನು ಹೇಳಿಕೊಟ್ಟರು. ನಾನು ಅವರಿಂದ ಬಹಳ ಕಲಿತಿದ್ದೇನೆ. ಒಬ್ಬರು ಮಾಡಿದ ಪಾತ್ರವನ್ನು ಮತ್ತೊಬ್ಬರು ಮುಂದುವರೆಸಿ ಗೆಲ್ಲೋದು ಬಹಳ ಕಷ್ಟ. ಹರೀಶ್ ರಾಜ್ ಸರ್ ಅದನ್ನು ಮಾಡಿ ತೋರಿಸಿದ್ದಾರೆ. ಅವರು ಕೂಡ ಒಳ್ಳೆಯ ವ್ಯಕ್ತಿ. ಅವರೊಟ್ಟಿಗೆ ಕೆಲಸ ಮಾಡಿದ್ದು ಕೂಡ ಒಳ್ಳೆಯ ಅನುಭವ” ಎಂದು ನಟಿ ಮೇಘನಾ ರಾಜ್ ಮಾತನಾಡಿದ್ದಾರೆ.

Join Nadunudi News WhatsApp Group