ಪೊಗರು ಚಿತ್ರವನ್ನ ನೋಡಿ ಕಣ್ಣೀರಿಟ್ಟ ಮೇಘನಾ ರಾಜ್, ಅಷ್ಟಕ್ಕೂ ಆಗಿದ್ದೇನು ನೋಡಿ.

ಸದ್ಯ ಚಿತ್ರರಂಗದಲ್ಲಿ ಅತೀ ಹೆಚ್ಚು ಸುದ್ದಿಯಾಗುತ್ತಿರುವ ಒಂದೇ ಒಂದು ವಿಷಯ ಏನು ಅಂದರೆ ಅದೂ ಪೊಗರು ಚಿತ್ರದ ವಿಷಯ ಎಂದು ಹೇಳಿದರೆ ತಪ್ಪಾಗಲ್ಲ. ರಾಜ್ಯದಲ್ಲಿ ಮಾತ್ರವಲ್ಲದೆ ಬೇರೆ ರಾಜ್ಯದಲ್ಲಿ ಕೂಡ ಭರ್ಜರಿ ಪ್ರದರ್ಶನವನ್ನ ಕಾಣುತ್ತಿರುವ ದ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಭಾರಿ ಟ್ರೆಂಡಿಂಗ್ ಸೃಷ್ಟಿ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಚಿತ್ರ ಬಿಡುಗಡೆಯಾದ ದಿನದಿಂದ ಭಾರಿ ಸುದ್ದಿಯಲ್ಲಿ ಇರುವ ಪೊಗರು ಚಿತ್ರಕ್ಕೆ ಸಿನಿ ಪ್ರಿಯರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಪೊಗರು ಚಿತ್ರದ ಯಶಸ್ಸು ದ್ರುವ ಸರ್ಜಾ ಕುಟುಂಬದಲ್ಲಿ ಸಂತಸವನ್ನ ತಂದಿದೆ ಎಂದು ಹೇಳಬಹುದು.

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ಪೊಗರು ಚಿತ್ರ ಕೋಟಿ ಕೋಟಿ ಗಳಿಕೆ ಮಾಡುತ್ತಿದ್ದು ಸದ್ಯದಲ್ಲೇ 100 ಕೋಟಿ ಗಳಿಸಿದರು ಆಶ್ಚರ್ಯ ಪಡಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ ಪೊಗರು ಚಿತ್ರವನ್ನ ನೋಡಿ ಮೇಘನಾ ರಾಜ್ ಅವರು ಕಣ್ಣೀರು ಹಾಕಿದ್ದು ಸದ್ಯ ಈ ಸುದ್ದಿ ರಾಜ್ಯದಲ್ಲಿ ಹರಿದಾಡುತ್ತಿದೆ ಎಂದು ಹೇಳಬಹುದು. ಹಾಗಾದರೆ ಪೊಗರು ಚಿತ್ರವನ್ನ ನೋಡಿ ಮೇಘನಾ ರಾಜ್ ಅವರು ಕಣ್ಣೀರು ಹಾಕಿದ್ದು ಯಾಕೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಪೊಗರು ಚಿತ್ರದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಬಹಳ ದಿನಗಳ ನಂತರ ಕನ್ನಡ ಚೀನಿ ರಸಿಕರು ಪೊಗರು ಚಿತ್ರವನ್ನ ಗುಂಪು ಗುಂಪಾಗಿ ಚಿತ್ರ ಮಂದಿರಕ್ಕೆ ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಬಹುದು.

Meghana and pogaru

ಇನ್ನು ಮೇಘನಾ ರಾಜ್ ಅವರು ಅದೆಷ್ಟೋ ದಿನಗಳ ಬಳಿಕ ಚಿತ್ರ ಮಂದಿರಕ್ಕೆ ಹೋಗಿ ಪೊಗರು ಚಿತ್ರವನ್ನ ನೋಡಿ ಭಾವುಕರಾಗಿದ್ದಾರೆ. ಹೌದು ಚಿತ್ರ ಬಿಡುಗಡೆಯಾದ ಮೊದಲ ದಿನವೇ ದ್ರುವ ಸರ್ಜಾ ಕುಟುಂಬದವರು ಚಿತ್ರ ಮಂದಿರಕ್ಕೆ ಹೋಗಿ ಚಿತ್ರವನ್ನ ವೀಕ್ಷಣೆ ಮಾಡಿದ್ದಾರೆ. ಸರ್ಜಾ ಕುಟುಂಬ ಚಿತ್ರವನ್ನ ವೀಕ್ಷಣೆ ಮಾಡಿದ ಕೆಲವು ದಿನಗಳ ಬಳಿಕ ಮೇಘನಾ ರಾಜ್ ಅವರು ಚಿತ್ರವನ್ನ ವೀಕ್ಷಣೆ ಮಾಡಿದ್ದಾರೆ. ಹೌದು ಮೇಘನಾ ರಾಜ್ ಅವರು ಪೊಗರು ಚಿತ್ರವನ್ನ ತಮ್ಮ ಮಗುವಿನ ಸಮೇತವಾಗಿ ಚಿತ್ರ ಮಂದಿರಕ್ಕೆ ಹೋಗಿ ವೀಕ್ಷಣೆ ಮಾಡಿದ್ದಾರೆ.

ಇನ್ನು ಚಿತ್ರವನ್ನ ನೋಡಿ ಚಿತ್ರ ಮಂದಿರದಿಂದ ಹೊರಗೆ ಬರುವ ಸಮಯದಲ್ಲಿ ಮೇಘನಾ ರಾಜ್ ಅವರು ಕಣ್ಣೀರು ಹಾಕಿದ್ದಾರೆ. ದ್ರುವ ಸರ್ಜಾ ಅವರ ಎಲ್ಲ ಚಿತ್ರವನ್ನ ಮೊದಲು ಚಿರು ಸರ್ಜಾ ಅವರು ಬಂದು ನೋಡುತ್ತಿದ್ದರು ಮತ್ತು ಅಷ್ಟೇ ಅಲ್ಲದೆ ಸರ್ಜಾ ಕುಟುಂಬದ ಸಮೇತ ಮೇಘನಾ ರಾಜ ಅವರ ಜೊತೆ ಕುಳಿತುಕೊಂಡು ಚಿರು ಚಿತ್ರವನ್ನ ವೀಕ್ಷಣೆ ಮಾಡುತ್ತಿದ್ದರು, ಆದರೆ ಈ ಭಾರಿ ದ್ರುವ ಸರ್ಜಾ ಅವರ ಸಿನಿಮಾವನ್ನ ಮೇಘನಾ ರಾಜ್ ಅವರು ಒಬ್ಬರೇ ಕುಳಿತುಕೊಂಡು ಚಿತ್ರ ಮಂದಿರದಲ್ಲಿ ವೀಕ್ಷಣೆ ಮಾಡಿದ್ದಾರೆ.

Join Nadunudi News WhatsApp Group

Meghana and pogaru

ಚಿತ್ರ ಮಂದಿರದಲ್ಲಿ ಮೇಘನಾ ರಾಜ್ ಅವರಿಗೆ ಚಿರು ಅವರ ನೆನಪಾದ ಕಾರಣ ಚಿತ್ರ ಮಂದಿರದಿಂದ ಹೊರಗೆ ಬರುವ ಭಾವುಕರಾಗಿದ್ದಾರೆ. ಇನ್ನು ಚಿತ್ರ ಮಂದಿರದಿಂದ ಹೊರಗೆ ಬಂದ ಮೇಘನಾ ಅವರು ಯಾರ ಜೊತೆ ಕೂಡ ಮಾತನಾಡದೆ ಮನೆಗೆ ಹೋದರು. ಈ ವಿಷಯ ತಿಳಿದ ದ್ರುವಅವರು ಕೂಡ ಭಾವುಕರಾಗಿದ್ದಾರೆ, ಸದ್ಯ ಪೊಗರು ಚಿತ್ರ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು ಹಲವು ದಾಖಲೆಯನ್ನ ಸೃಷ್ಟಿ ಮಾಡಲಿದೆ ಎಂದು ಹೇಳಿದರೆ ತಪ್ಪಾಗಲ್ಲ.

 

Join Nadunudi News WhatsApp Group