Meghana Raj Politics: ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಮೇಘನಾ ರಾಜ್.

ರಾಜಕೀಯ ಪ್ರವೇಶ ಮಾಡುವ ಸುದ್ದಿಯ ಬಗ್ಗೆ ನಟಿ ಮೇಘನಾ ರಾಜ್ ಸ್ಪಷ್ಟನೆಯನ್ನ ನೀಡಿದ್ದಾರೆ.

Meghana Raj About Political Entry: ಇತ್ತೀಚಿಗೆ ಸಿನಿಮಾ ಸ್ಟಾರ್ ನಟ ನಟಿಯರು ರಾಜಕೀಯ ಸೇರ್ಪಡೆ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ. ನಟ ಕಿಚ್ಚ ಸುದೀಪ್ (Kiccha Sudeep) ಅವರ ರಾಜಕೀಯ ವಿಚಾರ ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಅವರು ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಘೋಷಣೆ ಮಾಡಿದ್ದರು.

ಅದೇ ರೀತಿ ನಟಿ ಶುಭ ಪೂಂಜಾ (Shubha Poonja)ಅವರು ಸಹ ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟನೆ ನೀಡಿದ್ದರು. ಇದೀಗ ನಟಿ ಮೇಘನಾ ರಾಜ್ (Meghana Raj) ರಾಜ್ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ ಆಗುತ್ತಿದೆ.

Meghana Raj About Political Entry
Image Source: India Today

ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಮೇಘನಾ ರಾಜ್
ಕನ್ನಡದ ಖ್ಯಾತ ನಟಿ ಮೇಘನಾ ರಾಜ್ ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ. ನಟಿ ಮೇಘನಾ ರಾಜ್ ಅವರ ರಾಜಕೀಯ ಪ್ರವೇಶದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.

ನಟಿ ಮೇಘನಾ ರಾಜ್ ನಾನು ರಾಜಕೀಯದ ಬಗ್ಗೆ ಹೆಚ್ಚಾಗಿ ಯೋಚನೆ ಮಾಡಿಲ್ಲ. ಜನಸೇವೆ ಮಾಡುವುದಕ್ಕೆ ರಾಜಕೀಯ ಖಂಡಿತ ಒಂದು ಒಳ್ಳೆಯ ವೇಧಿಕೆ. ಈ ಕ್ಷೇತ್ರ ದೊಡ್ಡ ವೇಧಿಕೆ, ಆದರೆ ನಾನು ರಾಜಕೀಯಕ್ಕೆ ಬರುವ ಬಗ್ಗೆ ಯೋಚನೆ ಮಾಡಿಲ್ಲ ಎಂದು ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ರಾಜಕೀಯ ಎಂಟ್ರಿ ಬಗ್ಗೆ ಸದ್ಯಕ್ಕೆ ಯೋಚನೆ ಇಲ್ಲ ಎಂದು ನಟಿ ಸ್ಪಷ್ಟನೆ ನೀಡಿದ್ದಾರೆ.

Meghana Raj About Political Entry
Image Source: Vijaykarnataka

ಮಗನ ಆರೈಕೆಯಲ್ಲಿರುವ ನಟಿ ಮೇಘನಾ ರಾಜ್
ನಟಿ ಮೇಘನಾ ರಾಜ್ ಅವರು ಸದ್ಯ ತಮ್ಮ ಮಗ ರಾಯನ್ ಸರ್ಜಾ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಇದರ ನಡುವೆ ಸಿನಿಮಾದಲ್ಲಿಯೂ ಸಹ ನಟಿಸುತ್ತಿದ್ದಾರೆ. ನಟಿ ಮೇಘನಾ ರಾಜ್ ಅವರು ರಾಜಕೀಯ ಪ್ರವೇಶದ ಬಗ್ಗೆ ಯೋಚನೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Join Nadunudi News WhatsApp Group

Meghana Raj About Political Entry
Image Source: Vijaykarnataka

Join Nadunudi News WhatsApp Group