ಅಂದು ಅಪ್ಪು ಜೊತೆ ನಟಿಸಲು ಅವಕಾಶ ಬಂದಾಗ ಮೇಘನಾ ರಾಜ್ ತಿರಸ್ಕರಿಸಿದ್ದು ಯಾಕೆ ಗೊತ್ತಾ, ಯಾಕೆ ನೋಡಿ.

ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದ ಮತ್ತು ದೇಶದ ಚಿತ್ರರಂಗ ಕಂಡ ಖ್ಯಾತ ನಟರಲ್ಲಿ ಒಬ್ಬರು. ನಟ ಪುನೀತ್ ರಾಜಕುಮಾರ್ ಇಂದು ನಮ್ಮಜೊತೆ ಇಲ್ಲದೆ ಇರಬಹುದು, ಆದರೆ ಅವರ ನೆನಪು ಮತ್ತು ಅವರ ಮುಖ ನಾವು ಸಾಯುವ ತನಕ ನಮ್ಮಜೊತೆನೆ ಇರುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಪುನೀತ್ ರಾಜಕುಮಾರ್ ನಮ್ಮನ್ನ ಅಗಲಿ ಎಂಟು ತಿಂಗಳು ಕಳೆಯುತ್ತಾ ಬಂದಿದೆ, ಆದರೆ ಅವರ ನೆನಪುಗಳು ನಮ್ಮನ್ನ ಬಿಡದೆ ಕಾಡುತ್ತಿದೆ. ಇನ್ನು ಅದೇ ರೀತಿಯಲ್ಲಿ ಕನ್ನಡ ಮತ್ತು ಮಲಯಾಳಂ ಚಿತ್ರರಂಗದ ಕಂಡ ಖ್ಯಾತ ನಟಿಯರಲ್ಲಿ ನಟಿ ಮೇಘನಾ ರಾಜ ಕೂಡ ಒಬ್ಬರು.

ಚಿರಂಜೀವಿ ಸರ್ಜಾ ಅವರನ್ನ ಮದುವೆಯಾದ ನಂತರ ನಟಿ ಮೇಘನಾ ರಾಜ್ ಅವರು ಚಿತ್ರರಂಗದಿಂದ ದೂರ ಸರಿದರು, ಆದರೆ ಎರಡು ವರ್ಷದ ಹಿಂದೆ ಚಿರುವನ್ನ ಕಳೆದುಕೊಂಡ ಮೇಘನಾ ಈಗ ಮತ್ತೆ ನಟಿಸಲು ನಿರ್ಧಾರವನ್ನ ಮಾಡಿದ್ದಾರೆ. ಇನ್ನು ನಟಿ ಮೇಘನಾ ರಾಜ್ ಅವರಿಗೆ ಖ್ಯಾತ ನಟ ಪುನೀತ್ ರಾಜಕುಮಾರ್ ಅವರ ಜೊತೆ ನಟನೆಯನ್ನ ಮಾಡಲು ಅವಕಾಶ ಬಂದಿತ್ತು, ಆದರೆ ಅದನ್ನ ಮೇಘನಾ ರಾಜ್ ತಿರಸ್ಕರಿಸಿದ್ದರು. ಹಾಗಾದರೆ ಅಪ್ಪು ಜೊತೆ ನಟಿಸಲು ಮೇಘನಾ ರಾಜ್ ತಿರಸ್ಕರಿಸಿದ್ದು ಯಾಕೆ ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

Meghana raj and punit rajakumar

ಅಪ್ಪು ಜೊತೆ ನಟಿಸಲು ಅದೆಷ್ಟೋ ನಟಿಯರು ಕಾದು ಕುಳಿತಿರುತ್ತಿದ್ದರು, ಆದರೆ ಮೇಘನಾ ರಾಜ್ ಅವರಿಗೆ ಅಪ್ಪು ಜೊತೆ ನಟಿಸಲು ಅವಕಾಶ ಬಂದಾಗ ಅದನ್ನ ಸ್ವತಃ ತಾನೇ ತಿರಸ್ಕರಿಸಿದ್ದೆ ಎಂದು ಮೇಘನಾ ರಾಜ್ ತಂದೆ ಸುಂದರ್ ರಾಜ್ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಹೌದು ಅಪ್ಪು ಜೊತೆ ನಟನೆಯನ್ನ ಮಾಡಲು ಮೇಘನಾ ರಾಜ್ ಅವರಿಗೆ ಅವಕಾಶ ಬಂದ ಸಮಯದಲ್ಲಿ ಮೇಘನಾ ರಾಜ್ 9 ನೇ ತರಗತಿಯಲ್ಲಿ ಓದುತ್ತಿದ್ದರು.

ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ನಟನೆಯನ್ನ ಮಾಡಲು ಹೋದರೆ ಅವಳ ವಿದ್ಯಾಭ್ಯಾಸಕ್ಕೆ ಸಮಸ್ಯೆ ಆಗುತ್ತದೆ ಅನ್ನುವ ಕಾರಣಕ್ಕೆ ಅಂದು ಮೇಘನಾ ತಂದೆ ಸುಂದರ್ ರಾಜ್ ಅವರು ಅಪ್ಪು ಜೊತೆ ನಟಿಸಲು ಅವಕಾಶ ಬಂದರು ಕೂಡ ಅದನ್ನ ತಿರಸ್ಕಾರ ಮಾಡಿದ್ದರು. ತನ್ನ ವಿದ್ಯಾಭ್ಯಾಸದ ನಂತರ ಮೇಘನಾ ರಾಜ್ ಅವರು ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡು ಬಹಳ ಒಳ್ಳೆಯ ಹೆಸರನ್ನ ಮಾಡಿದರು, ಆದರೆ ಅವರಿಗೆ ಕೊನೆಗೂ ಪುನೀತ್ ರಾಜಕುಮಾರ್ ಅವರ ಜೊತೆ ನಟನೆಯನ್ನ ಮಾಡಲು ಸಾದ್ಯವಾಗಲಿಲ್ಲ. ಇಂದು ಪುನೀತ್ ರಾಜಕುಮಾರ್ ನಮ್ಮಜೊತೆ ಇಲ್ಲ, ಸಿಕ್ಕ ಅವಕಾಶ ಕೂಡ ನಾವು ಮಿಸ್ ಮಾಡಿಕೊಂಡೆವು ಎದು ಸುಂದರ್ ರಾಜ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಏನೇ ಆಗಲಿ ಅಪ್ಪು ಕಳೆದುಕೊಂಡ ನಾವು ಅನಾಥರು ಎಂದು ಹೇಳಬಹುದು.

Join Nadunudi News WhatsApp Group

Meghana raj and punit rajakumar

Join Nadunudi News WhatsApp Group