Menstrual Leave: ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಪಿರಿಯೆಡ್ಸ್ ರಜೆ, ಮಹಿಳೆಯರಿಗಾಗಿ ಇನ್ನೊಂದು ಯೋಜನೆ

ಸರ್ಕಾರೀ ನೌಕರ ಮಹಿಳೆಯರಿಗೆ ವಿಶೇಷ ಆರೋಗ್ಯ ರಜೆ

Menstrual Leave for Govt Women Employees: ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಸಾಕಷ್ಟು ಸೌಲಭ್ಯವನ್ನು ನೀಡುತ್ತಿದೆ. ಮಹಿಳೆಯರಿಗೆ ಆರ್ಥಿಕವಾಗಿ ಬೆಂಬಲ ನೀಡಲು ವಿಶೇಷ ಉಳಿತಾಯ ಯೋಜನೆಗಳು ಸೇರಿದಂತೆ ಮಹಿಳೆಯರಿಗಾಗಿ ಆರೋಗ್ಯ ಯೋಜನೆಯನ್ನು ಸರ್ಕಾರ ನೀಡುತ್ತಾ ಬಂದಿದೆ. ಸದ್ಯ ಕೇಂದ್ರದಿಂದ ಸರ್ಕಾರೀ ಮಹಿಳೆಯರಿಗೆ ವಿಶೇಷ ರಜೆಯನ್ನು ನೀಡಲು ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಇನ್ನುಮುಂದೆ ಸರ್ಕಾರೀ ನೌಕರ ಮಹಿಳೆಯರು ಈ ವಿಶೇಷ ಆರೋಗ್ಯ ರಜೆಯನ್ನು ಪಡೆದುಕೊಳ್ಳಬಹುದಾಗಿದೆ.

Menstrual Leave for Govt Women Employees
Image Credit: Business-Standard

ಮಹಿಳೆಯರಿಗಾಗಿ ಇನ್ನೊಂದು ಯೋಜನೆ
ಸದ್ಯ ಕೇಂದ್ರದಿಂದ ಮಹಿಳೆಯರಿಗಾಗಿ ಮತ್ತೊಂದು ಮಹತ್ವದ ಯೋಜನೆಗೆ ಜಾರಿಯ್ಗಳಿದೆ. ಈ ಬಾರಿ ಸರ್ಕಾರ ಸರ್ಕಾರೀ ಮಹಿಳಾ ಉದ್ಯೋಗಿಗಳಿಗೆ ಪಿರಿಯೆಡ್ಸ್ ರಜೆಯನ್ನು ನೀಡಲು ಮುಂದಾಗಿದೆ. ಎಲ್ಲ ಮಹಿಳೆಯರು ಸಾಮಾನ್ಯವಾಗಿ ಪಿರಿಯೆಡ್ಸ್ ಸಮಸ್ಯೆಯನ್ನು ಅನುಭವಿಸುತ್ತಾರೆ. ಪಿರಿಯೆಡ್ಸ್ ಸಮಯದಲ್ಲಿ ಮಹಿಳೆಯರು ದೈಹಕವಾಗಿ ಅಷ್ಟೊಂದು ಶಕ್ತಿಯನ್ನು ಹೊಂದಿರುವುದಿಲ್ಲ. ಕೆಲಸ ಮಾಡಲು ಅಶಕ್ತರಾಗಿರುತ್ತಾರೆ ಎನ್ನಬಹುದು. ಈ ಸಮಯದಲ್ಲಿ ಮಹಿಳೆಯರಿಗೆ ಕೆಲಸದ ಒತ್ತಡ ಬರಬಾರದು ಎನ್ನುವ ಕಾರಣಕ್ಕೆ ಸರ್ಕಾರ ಈ ವಿಶೇಷ ರಜೆಯನ್ನು ನೀಡಲು ಮುಂದಾಗಿದೆ.

ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಪಿರಿಯೆಡ್ಸ್ ರಜೆ
ಋತುಚಕ್ರದ ಸಮಯದಲ್ಲಿ ಮಹಿಳಾ ಉದ್ಯೋಗಿಗಳು ಪಿರಿಯೆಡ್ಸ್ ರಜೆಯನ್ನು ಪಡೆಯಬೇಕೆ..? ಎನ್ನುವ ಬಗ್ಗೆ ನಿನ್ನೆ ಸಂಸತ್ತಿನಲ್ಲಿ ಚರ್ಚಿಸಲಾಗಿದೆ. ಮಹಿಳಾ ನೌಕರರಿಗೆ ವಿಶೇಷ ಮುಟ್ಟಿನ ರಜೆ ಆರೋಗ್ಯ ಸಂಬಂಧಿತ ಸಮಸ್ಯೆಯಾಗಿದೆ ಎಂದು ಕಾರ್ಮಿಕ ಸಚಿವಾಲಯ ಮಾಹಿತಿ ನೀಡಿದೆ.

Menstrual Leave
Image Credit: The Indian Express

ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ತನ್ನ ಹಿಂದಿನ ವರದಿಯಲ್ಲಿ ಇದನ್ನು ಶಿಫಾರಸು ಮಾಡಿತ್ತು. ಸಮಿತಿಯು ‘ಮುಟ್ಟಿನ ರಜೆ’ ನೀತಿಯನ್ನು ರೂಪಿಸಲು ಕಾರ್ಮಿಕ ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು. ಈ ನೀತಿಯ ಪ್ರಕಾರ ಮುಟ್ಟಿನ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ರಜೆಯನ್ನು ಅನುಮತಿಸಲಾಗಿದೆ.

ಸಮಿತಿಯು ಮಹಿಳೆಯರಿಗೆ ಮಾಸಿಕ ಅಥವಾ ವಾರ್ಷಿಕ ಮುಟ್ಟಿನ ರಜೆ ಅಥವಾ ಅನಾರೋಗ್ಯ ರಜೆ (SL)/ ಅರ್ಧ ವೇತನದ ಮೇಲೆ ರಜೆ ನೀಡಬೇಕೆಂದು ಶಿಫಾರಸು ಮಾಡಿದೆ. ಆದರೆ ಈ ರಜೆಗೆ ಪ್ರತಿಯಾಗಿ ಯಾವುದೇ ವೈದ್ಯಕೀಯ ಪ್ರಮಾಣಪತ್ರ ಅಥವಾ ರಜೆ ತೆಗೆದುಕೊಳ್ಳಲು ಸಮರ್ಥನೆಯನ್ನು ಪಡೆಯಬಾರದು ಎಂದು ಸಮಿತಿಯು ಸೂಚಿಸಿದೆ.

Join Nadunudi News WhatsApp Group

Join Nadunudi News WhatsApp Group