Meri Life: ಯುವಕ ಮತ್ತು ಯುವತಿಯರಿಗಾಗಿ ಕೇಂದ್ರದಿಂದ “ಮೇರಿ ಲೈಫ್” ಆಪ್ ಬಿಡುಗಡೆ, ಈ ಆಪ್ ನಲ್ಲಿ ಏನಿದೆ.

ಪರಿಸರ ರಕ್ಷಣೆಗಾಗಿ ಯುವಕ ಯುವತಿಯರನ್ನು ಉತ್ತೇಜಿಸುವ ಕಾರಣ ಸರ್ಕಾರ ಮೇರಿ ಲೈಫ್ ಅಪ್ಲಿಕೇಶನ್ ಅನ್ನು ಜಾರಿಗೊಳಿಸಿದೆ.

Meri Life Application: ಕೇಂದ್ರದ ಮೋದಿ ಸರ್ಕಾರವು ಜನಸಾಮಾನ್ಯರಿಗೆ ಸಾಕಷ್ಟು ರೀತಿಯ ಸೌಲಭ್ಯಗಳನ್ನು ಒದಗಿಸಿದೆ. ಇದೀಗ ಸರ್ಕಾರವು ಹೊಸ ಅಪ್ಲಿಕೇಶನ್ (Application) ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಅಪ್ಲಿಕೇಶನ್ ವಿಶೇಷವಾಗಿ ಯುವಕ ಮತ್ತು ಯುವತಿಯರಿಗಾಗಿ ಬಿಡುಗಡೆಯಾಗಿದೆ. 

Meri Life Application
Image Credit: jagran

ಯುವಕ ಮತ್ತು ಯುವತಿಯರಿಗಾಗಿ ಕೇಂದ್ರದಿಂದ “ಮೇರಿ ಲೈಫ್” ಆಪ್ ಬಿಡುಗಡೆ
ಪರಿಸರ ರಕ್ಷಣೆಗಾಗಿ ಯುವಕ ಯುವತಿಯರನ್ನು ಉತ್ತೇಜಿಸುವ ಕಾರಣ ಸರ್ಕಾರ ಮೇರಿ ಲೈಫ್ ಅಪ್ಲಿಕೇಶನ್ (Meri Life Application) ಅನ್ನು ಜಾರಿಗೊಳಿಸಿದೆ. ಯುವಕ ಯುವತಿಯರನ್ನು ಸಬಲೀಕರಣಗೊಳಿಸಲು ಮತ್ತು ಹವಾಮಾನ ಬದಲಾವಣೆಯನ್ನು ನಿಭಾಯಿಸುವಲ್ಲಿ ಯುವಕ ಯುವತಿಯರನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರವು ಮೇರಿ ಲೈಫ್ ಅಪ್ಲಿಕೇಶನ್ ಅನ್ನು ಜಾರಿಗೊಳಿಸಿದೆ.

ಈ ಅಪ್ಲಿಕೇಶನ್ ಪ್ರಧಾನ ಮಂತ್ರಿ ಅವರ ಮಿಷನ್ ಲೈಫ್ ನಿಂದ ಪ್ರೇರೇರಿತವಾಗಿದೆ. ವ್ಯರ್ಥ ಸೇವನೆಯ ಬದಲಿಗೆ ಜಾಗರೂಕತೆಯ ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಪರಿಸರ ಸಂರಕ್ಷಣೆಯ ಹೊಣೆಯನ್ನು ಈ ಅಪ್ಲಿಕೇಶನ್ ಹೊತ್ತಿದೆ. ಕೇಂದ್ರದ ಪರಿಸರ ಸಚಿವ ಭೂಪೇಂದ್ರ ಯಾದವ್ ಈ ಅಪ್ಲಿಕೇಶನ್ ಬಗ್ಗೆ ಮಾತನಾಡಿದ್ದಾರೆ.

"Mary Life" app launched by the center for youth and young women
Image Credit: vistaranews

ಈ ಅಪ್ಲಿಕೇಶನ್ ಲೈಫ್ ಗಾಗಿ ರಾಷ್ಟ್ರವ್ಯಾಪಿ ಚಳುವಳಿಯನ್ನು ಉತ್ತೇಜಿಸುತ್ತದೆ, ಪರಿಸರವನ್ನು ಉಳಿಸುವಲ್ಲಿ ನಾಗರೀಕ ಶಕ್ತಿಯನ್ನು ಪ್ರದರ್ಶಿಸುತ್ತದೆ. ಕೇಂದ್ರ ಪರಿಸರ ಸಚಿವಾಲಯವು ರಾಷ್ಟ್ರೀಯ ಮಠದಲ್ಲಿ ಮಿಷನ್ ಲೈಫ್ ಅನ್ನು ಕಾರ್ಯಗತಗೊಳಿಸಲು ಸಮನ್ವಯ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ. ಮೇರಿ ಲೈಫ್ ಪೋರ್ಟ್ ನ ಅಧಿಕೃತ ವೆಬ್ ಸೈಟ್ https://merilife.org/ ಭೇಟಿ ನೀಡುವ ಮೂಲಕ ವರದಿಗಳ ಮಾಹಿತಿಯನ್ನು ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group