Gruha Lakshmi: ಇನ್ನು ಕೂಡ ಗೃಹಲಕ್ಷ್ಮಿ1 ರೂಪಾಯಿ ಸಿಗಲಿದೆ ಮಹಿಳೆಯರಿಗೆ ಗುಡ್ ನ್ಯೂಸ್, ಸರ್ಕಾರದ ಹೊಸ ಪ್ಲ್ಯಾನ್.

ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಸಿಗದ ಮಹಿಳೆಯರಿಗೆ ಸರ್ಕಾರದಿಂದ ಬಿಗ್ ಅಪ್ಡೇಟ್

Gruha Lakshmi Latest Update: ಮಹಿಳಾ ಸಬಲೀಕರಣಕ್ಕಾಗಿ ರಾಜ್ಯದಲ್ಲಿ ಅನುಷ್ಠಾನಗೊಂಡಿರುವ Gruha Lakshmi ಯೋಜನೆಯಲ್ಲಿ ಈಗಾಗಲೇ ಸರ್ಕಾರ ಸಾಕಷ್ಟು ಬದಲಾವಣೆ ಮಾಡಿದೆ. ಯೋಜನೆಯ ಲಾಭವನ್ನು ಸಂಪೂರ್ಣ ಅರ್ಹರ ತಲುಪಿಸುವ ಗುರಿಯನ್ನು ಹೊಂದಿರುವ ಸರ್ಕಾರ ಆಗಾಗ ಹೊಸ ಹೊಸ ಕ್ರಮ ಕೈಗೊಳ್ಳುತ್ತಿದೆ. ಇನ್ನು ಗೃಹ ಲಕ್ಷ್ಮಿ ಯೋಜನೆಯಡಿ ಇನ್ನೂಕೂಡ ಒಂದು ಕಂತಿನ ಹಣವನ್ನು ಪಡೆಯದ ಅದೆಷ್ಟೋ ಮಹಿಳೆಯರಿದ್ದಾರೆ. ಸದ್ಯ ಸರ್ಕಾರ ಇಂತವರಿಗಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ.

method of gruhalakshmi money credit
Image Credit: Original Source

ಇನ್ನು ಕೂಡ ಗೃಹಲಕ್ಷ್ಮಿ1 ರೂಪಾಯಿ ಸಿಗಲಿದೆ ಮಹಿಳೆಯರಿಗೆ ಗುಡ್ ನ್ಯೂಸ್
ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಯ ಹಣ 100 % ಅರ್ಹರ ಖಾತೆಗೆ ತಲುಪುತ್ತಿಲ್ಲ. ರಾಜ್ಯದಲ್ಲಿ 8.2 ಲಕ್ಷ ಗೃಹ ಲಕ್ಷ್ಮಿ ಅರ್ಹ ಫಲಾನುಭವಿಗಳ ಖಾತೆಗೆ ಇನ್ನು ಒಂದು ಕಂತಿನ ಹಣ ಕೂಡ ಜಮಾ ಆಗಿಲ್ಲ ಎನ್ನಬಹುದು. ಇದಕ್ಕೆಲ್ಲ ಪರಿಹಾರ ಸೂಚಿಸಲು ಸರ್ಕಾರ ಮುಂದಾಗಿದ್ದು ಹೊಸ ಪ್ಲಾನ್ ಹಾಕಿಕೊಂಡಿದೆ.

ಈ ಬಾರಿ ಯೋಜನೆಯ ಸಮಸ್ಯೆ ಪರಿಹರಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಆದಷ್ಟು ಬೇಗ ಗೃಹ ಲಕ್ಷ್ಮಿ ಯೋಜನೆಯ ಎಲ್ಲ ಲೋಪದೋಷಗಳನ್ನೂ ಪರಿಹರಿಸಿ ಫಲಾನುಭವಿಗಳ ಸಮಸ್ಯೆಗೆ ನೇರ ಪರಿಹಾರ ನೀಡಲು ಸರ್ಕಾರವೇ ಮುಂದೆ ಬಂದಿದೆ. ಇನ್ನು ಕೂಡ ಗೃಹಲಕ್ಷ್ಮಿ ಯೋಜನೆಯಡಿ1 ರೂಪಾಯಿ ಸಿಗದೇ ಇರುವ ಮಹಿಳೆಯರು ಇನ್ನುಮುಂದೆ ಚಿಂತಿಸುವ ಅಗತ್ಯವಿಲ್ಲ. ಆದಷ್ಟು ಬೇಗ ನಿಮ್ಮ ಸಮಸ್ಯೆ ಪರಿಹಾರವಾಗಲಿದೆ.

gruha lakshmi money credit rules and regulations
Image Credit: Original Source

ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಮಾಡಲು ಸರ್ಕಾರದ ಹೊಸ ಪ್ಲ್ಯಾನ್
•ಗೃಹ ಲಕ್ಷ್ಮಿ ಯೋಜನೆಯ ಹಣ ಯಾರ ಖಾತೆಗೆ ಜಮಾ ಆಗುತ್ತಿಲ್ಲವೋ ಅವರ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದರೆ ಅಂತವರಿಗೆ ಅಂಚೆ ಇಲಾಖೆಯಲ್ಲಿ ಖಾತೆ ತೆರೆಸಿ ಆ ಖಾತೆಗೆ ಹಣ ಜಮಾ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

•ಗೃಹಿಣಿಯ ಸಮಸ್ಯೆಯ ಪರಿಹಾರಕ್ಕೆ ಅಧಿಕಾರಿಗಳನ್ನು ನೇಮಿಸಿರುವುದರ ಜೊತೆಗೆ  ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರು ಗೃಹಿಣಿಯರ ಜೊತೆ ನಿಂತು ಅವರ ಸಮಸ್ಯೆ ನಿವಾರಿಸಿ ಹಣ ಜಮಾ ಮಾಡಿಕೊಡುವಂತೆ ಸರ್ಕಾರ ಸೂಚಿಸಿದೆ. ಆಯಾ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸಮಸ್ಯೆ ಇದ್ದವರ ಜೊತೆಗೆ ಹೋಗಿ ಸಮಸ್ಯೆ ಪರಿಹರಿಸಲಿದ್ದಾರೆ.

Join Nadunudi News WhatsApp Group

Join Nadunudi News WhatsApp Group