MG Hector: 7 ಸೀಟರ್ ಕಾರ್ ಖರೀದಿ ಮಾಡಲು ಇದು ಉತ್ತಮ ಸಮಯ, MG ಹೆಕ್ಟಾರ್ ಕಾರಿನ ಬೆಲೆಯಲ್ಲಿ ಭರ್ಜರಿ ಇಳಿಕೆ.

MG Hector ಕಾರ್ ಖರೀದಿಗೆ ಬಂಪರ್ ಆಫರ್.

MG Hector Plus Car Price Down: ದೇಶಿಯ ಮಾರುಕಟ್ಟೆಯಲ್ಲಿ ವಿವಿದ ಪ್ರತಿಷ್ಠಿತ Car ತಯಾರಕ ಕಂಪನಿಗಳು ತನ್ನ ಹೊಸ ಹೊಸಾ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತಿದೆ. ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕಾರ್ ಖರೀದಿಸಲು ಆಯ್ಕೆಗೆ ಯಾವುದೇ ಕೊರತೆ ಇಲ್ಲ ಎನ್ನಬಹುದು.

ಇತ್ತೀಚೆಗಂತೂ ಕಂಪನಿಗಳು ಪೆಟ್ರೋಲ್, Diesel ಚಾಲಿತ ವಾಹನಗಳಿಗಿಂತ ಹೆಚ್ಚಾಗಿ Electric ಹಾಗೂ CNG ಚಾಲಿತ ವಾಹನಗಳನ್ನು ಹೆಚ್ಚಾಗಿ ಪರಿಚಯಿಸುತ್ತಿದೆ. ಒಂದೆಡೆ ಕಚ್ಚಾ ತೈಲದ ಬೆಲೆಯ ಏರಿಕೆ ಇಂಧನ ಚಾಲಿತ ವಾಹನಗ ಬೇಡಿಕೆಯನ್ನು ಕಡಿಮೆಗೊಳಿಸಿದೆ ಎನ್ನಬಹುದು.

ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಾಗಿ Electric ಮಾದರಿಗಳೇ ಹೆಚ್ಚಿನ ಸೇಲ್ ಕಾಣುತ್ತಿದ್ದು, ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳೇ ರಸ್ತೆಗಳಲ್ಲಿ ರಾರಾಜಿಸಲಿದೆ ಎಂದರೆ ತಪ್ಪಾಗಲಾರದು. ಇನ್ನು Electric ಮಾದರಿಯ ಬೇಡಿಕೆಯು ಇಂಧನ ಚಾಲಿತ ವಾಹನಗಳ ಮಾರಾಟಕ್ಕೆ ಪರಿಣಾಮ ಬಿರುತ್ತಿದ್ದಂತೆ ವಿವಿಧ ಕಂಪನಿಗಳು ತನ್ನ ಇಂಧನ ಚಾಲಿತ ವಾಹನಗಳ ಬೆಲೆಯ ಇಳಿಕೆಗೆ ನಿರ್ಧರಿಸಿದೆ.

MG Hector Plus Car price
Image Credit: Autocarindia

MG Hector ಕಾರ್ ಖರೀದಿಗೆ ಬಂಪರ್ ಆಫರ್
ಇನ್ನು Electric ಮಾದರಿಯು ಇಂಧನದ ಖರ್ಚನ್ನು ಉಳಿಸುತ್ತದೆ ಆದರೆ Electric ಮಾದರಿಯ ಖರೀದಿ ದುಬಾರಿ ಎನ್ನಬಹುದು. ಹೀಗಾಗಿ ಕೆಲ ಗ್ರಾಹಕರು ಇಂಧನ ಚಾಲಿತ ವಾಹನದ ಬಗ್ಗೆ ಕೂಡ ಗಮನ ಹರಿಸುತ್ತಿದ್ದಾರೆ. ಇದೀಗ MG Hector ಕಂಪನಿ ಗ್ರಾಹಕರಿಗೆ ತನ್ನ Petrol ಚಾಲಿತ ವಾಹನ ಖರೀದಿ ಉತ್ತಮ ಅವಕಾಶವನ್ನು ಮಾಡಿಕೊಟ್ಟಿದೆ. ತನ್ನ ನೂತನ Hector Plus ಪೆಟ್ರೋಲ್ ಮಾದರಿಯ ಬೆಲೆಯನ್ನುಕಡಿಮೆಗೊಳಿಸುವ ಮೂಲಕ ಗ್ರಾಹಕರಿಗೆ ಕಾರ್ ಖರೀದಿಗೆ ಉತ್ತಮ ಅವಕಾಶವನ್ನು ನೀಡಿದೆ.

MG ಹೆಕ್ಟಾರ್ ಕಾರಿನ ಬೆಲೆಯಲ್ಲಿ ಭರ್ಜರಿ ಇಳಿಕೆ
ದೇಶದ ಅತಿ ದೊಡ್ಡ ಆಟೋ ಕಂಪನಿಗಳಲ್ಲಿ ಒಂದಾದ MG ಹೆಕ್ಟರ್ ಅನೇಕ ವಾಹನಗಳ ಬೆಲೆಯನ್ನು ಕಡಿಮೆ ಮಾಡಿದೆ. ಸಾಮಾನ್ಯವಾಗಿ MG ಹೆಕ್ಟರ್ ವಾಹನಗಳ ಬೆಲೆ 14.73 ಲಕ್ಷದಿಂದ 21.93 ಲಕ್ಷದ ವರೆಗೆ ಇರುತ್ತದೆ. ಸದ್ಯ ಕಂಪನಿ ಬೇಸ್ ಸ್ಟೈಲ್ ವೇರಿಯಂಟ್ ನಲ್ಲಿ ಅತಿ ಕಡಿಮೆ ಬೆಲೆಯನ್ನು 27,000 ರೂ.ಗಳಷ್ಟು ಕಡಿಮೆಗೊಳಿಸುವುದಾಗಿ ಘೋಷಿಸಲಾಗಿದೆ.

Join Nadunudi News WhatsApp Group

MG Hector Plus Car Price Down
Image Credit: Rushlane

ಇದರಲ್ಲಿ ಸ್ಮಾರ್ಟ್ ಪ್ರೊ ಟ್ರಿಮ್‌ನ ಡೀಸೆಲ್ ಮ್ಯಾನುವಲ್ ರೂಪಾಂತರದಲ್ಲಿ 1.29 ಲಕ್ಷ ರೂಪಾಯಿಗಳ ಅತ್ಯಧಿಕ ಬೆಲೆ ಕಡಿತ ಮಾಡಲಾಗಿದೆ. ಕಂಪನಿಯು ಹೆಕ್ಟರ್ ಪ್ಲಸ್‌ನ ಬೇಸ್ ಸೆವೆನ್ ಸೀಟ್-ಸ್ಮಾರ್ಟ್ ಪೆಟ್ರೋಲ್ ರೂಪಾಂತರಕ್ಕೆ ಕನಿಷ್ಠ 50,000 ರೂ.ಗಳ ಇಳಿಕೆಯನ್ನು ಘೋಷಿಸಿದೆ.

ಇನ್ನು ಮಾರುಕಟ್ಟೆಯಲ್ಲಿ ಹೆಕ್ಟರ್ ಪ್ಲಸ್‌ನ ಬೇಸ್ ಸೆವೆನ್ ವೇರಿಯೆಂಟ್ ನ ಬೆಲೆ ಸುಮಾರು 17.50 ಲಕ್ಷದಿಂದ 19.76 ಲಕ್ಷದಲ್ಲಿ ಸಿಗಲಿದೆ. ಈ ಮಾರುಕಟ್ಟೆಯ ಬೆಲೆಯಲ್ಲಿ ಸರಿಸುಮಾರು 50000 ರೂ. ಗಳ ಇಳಿಕೆಯನ್ನು ಕಾಣಬಹುದಾಗಿದೆ.

Join Nadunudi News WhatsApp Group