ಮಾರುಕಟ್ಟೆಗೆ ಬಂತು ಒಮ್ಮೆ ಚಾರ್ಜ್ ಮಾಡಿದರೆ 230 km ಚಲಿಸುವ ಅತೀ ಚಿಕ್ಕ ಕಾರ್, ಬೆಲೆ ಎಷ್ಟು ನೋಡಿ.

ಕಾರ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹೌದು ಜೀವನದಲ್ಲಿ ಒಮ್ಮೆಯಾದರೂ ತಮಗೆ ಇಷ್ಟವಾಗುವ ಕಾರ್ ಖರೀದಿ ಮಾಡಬೇಕು ಅನ್ನುವ ಬಯಕೆ ಎಲ್ಲರಿಗೂ ಇದ್ದೆ ಇರುತ್ತದೆ. ದೇಶದಲ್ಲಿ ಪ್ರಸ್ತುತ ದಿನಗಳಲ್ಲಿ ಏರಿಕೆಯಾದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಕಾರಣ ಕಾರು ಖರೀದಿ ಮಾಡಲು ಯಾರು ಕೂಡ ಆಸಕ್ತಿ ತೋರುತ್ತಿಲ್ಲ. ಇನ್ನು ಇದೆ ಸಮಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಬಹಳ ಜಾಸ್ತಿಯಾಗುತ್ತಿದೆ ಎಂದು ಹೇಳಬಹುದು. ಹೌದು ದೇಶದಲ್ಲಿ ವಿವಿಧ ವಿಶೇಷತೆ ಹೊಂದಿರುವ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆ ಆಗಿದ್ದು ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ಹೆಚ್ಚಿನ ಗಮನವನ್ನ ಕೊಟ್ಟಿದ್ದಾರೆ.

ಇದರ ನಡುವೆ ಕೆಲವು ಕಂಪನಿಗಳು ಕಡಿಮೆ ಬೆಲೆಯಲ್ಲಿ, ಕಡಿಮೆ ಚಾರ್ಜ್ ನಲ್ಲಿ ಹೆಚ್ಚು ಮೈಲೇಜ್ ಕೊಡುವ ಎಲೆಕ್ಟ್ರಿಕ್ ವನಗಳನ್ನ ಬಿಡುಗಡೆ ಮಾಡುತ್ತಿದ್ದು ಇದು ವಾಹನ ಪ್ರಿಯರ ಖುಷಿಗೆ ಕಾರಣವಾಗುತ್ತಿದೆ. ಇನ್ನು ಈಗ ದೇಶದಲ್ಲಿ ಒಂದೇ ಚಾರ್ಜ್ ನಲ್ಲಿ 230 ಕ್ಕೂ ಅಧಿಕ ಕಿಲೋ ಮೀಟರ್ ಚಲಿಸುವ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರ್ ಬಿಡುಗಡೆ ಆಗಿದ್ದು ಈ ಕಾರ್ ಜನರ ಆಕರ್ಷಣೆಗೆ ಕಾರಣವಾಗಿದೆ. ಹಾಗಾದರೆ ಈ ಕಾರ್ ಯಾವುದು ಮತ್ತು ಇದರ ಬೆಲೆ ಎಷ್ಟು ಮತ್ತು ಇದರ ವಿಶೇಷತೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Microlino car price

ಹೌದು Microlino ಅನ್ನುವ ಎಲೆಕ್ಟ್ರಿಕ್ ಕಾರ್ ಇತ್ತೀಚಿನ ದಿನಗಳಲ್ಲಿ ಜನರನ್ನ ಹೆಚ್ಚುಹೆಚ್ಚು ತನ್ನತ್ತ ಸೆಳೆಯುತ್ತಿದೆ. ಈ ಕಾರ್ ನೋಡುವುದಕ್ಕೆ ತುಂಬಾ ಮುದ್ದಾಗಿದ್ದು ನ್ಯಾನೋ ಕಾರ್ ಗಿಂತ ಈ ಕಾರ್ ಚಿಕ್ಕದು ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು Microlino ಕಾರ್ ಗೆ ಒಮ್ಮೆ ಚಾರ್ಜ್ ಮಾಡಿದರೆ ನಾವು ಯಾವುದೇ ಸಮಸ್ಯೆ ಇಲ್ಲದೆ 230 ಕ್ಕೂ ಅಧಿಕ ಕಿಲೋ ಮೀಟರ್ ಚಲಿಸಬಹುದು. Microlino ಇದು ಕಾರ್ ಮತ್ತು ಇದು ನಾಲ್ಕು ಚಕ್ರದ ವಾಹನ ಎಂದು ಕಂಪನಿ ಹೇಳಿಕೊಂಡಿದೆ. ಸದ್ಯ ಮಾರುಕಟ್ಟೆಗೆ ಬಂದ ಬೆನ್ನಲ್ಲೇ 30 ಸಾವಿರಕ್ಕೂ ಅಧಿಕ ಕಾರ್ ಬುಕ್ ಆಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇನ್ನು ಈ ವಾಹನ 530 ಕೆಜಿ ತೂಕವನ್ನ ಹೊಂದಿದ್ದು ಒಮ್ಮೆ ಚಾರ್ಜ್ ಮಾಡಿದರೆ 230 ಕಿಲೋ ಮೀಟರ್ ಯಾವುದೇ ಸಮಸ್ಯೆ ಇಲ್ಲದೆ ಚಲಿಸಬಹುದಾಗಿದೆ.

Microlino ಯುರೋಪ್‌ನ ಕ್ಲಾಸ್ L7e ವಾಹನವಾಗಿದ್ದು ಇದು ತಾಂತ್ರಿಕವಾಗಿ ನಾಲ್ಕು ಚಕ್ರಗಳ ಬೈಸಿಕಲ್ ಆಗಿದೆ, ಆದರೆ ಕಾಂಪ್ಯಾಕ್ಟ್ ಕಾರಿನಂತೆ ವಿನ್ಯಾಸಗೊಳಿಸಲಾಗಿದೆ. ಇದು ಯುನಿಬಾಡಿ ಚಾಸಿಸ್, ಸಣ್ಣ ಬ್ಯಾಟರಿ ಮತ್ತು ನಾಮಮಾತ್ರ ಇಂಗಾಲದ ಹೆಜ್ಜೆಗುರುತನ್ನು ಹೊಂದಿದೆ. ಅದರ 90% ಘಟಕಗಳನ್ನು ಯುರೋಪ್ನಲ್ಲಿ ತಯಾರಿಸಲಾಗುತ್ತದೆ. ಇನ್ನು ಯುರೋಪ್ ನಲ್ಲಿ ಈ ವಾಹನದ ಬೆಲೆ 10 ಲಕ್ಷ ರೂಪಾಯಿ ಆಗಿದ್ದು ಭಾರತದಲ್ಲಿ ಈ ಕಾರಿನ ಬೆಲೆ 12 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಈ ವಾಹನ ಜನರ ಮೆಚ್ಚುಗೆಗೆ ಕಾರಣವಾಗಿದ್ದು ಭಾರತದಲ್ಲಿ ಈ ವಾಹನ ತನ್ನದೇ ಸಾಮ್ರಾಜ್ಯವನ್ನ ಸೃಷ್ಟಿ ಮಾಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಸ್ನೇಹಿತರೆ ಕಾರಿನಂತೆ ಕಾಣುವ ಈ ವಾಹನದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Microlino car price

Join Nadunudi News WhatsApp Group