Milk Price: ಪ್ರತಿನಿತ್ಯ ಮನೆಗೆ ಹಾಲು ಹಾಕಲಿಸಿಕೊಳ್ಳುವವರಿಗೆ ಬೇಸರದ ಸುದ್ದಿ, ಹಾಲಿನ ದರ ಇಷ್ಟು ಹೆಚ್ಚಳ

ಪ್ರತಿನಿತ್ಯ ಮನೆಗೆ ಹಾಲು ಹಾಕಲಿಸಿಕೊಳ್ಳುವವರಿಗೆ ಬೇಸರದ ಸುದ್ದಿ

Milk Price Hike: ಪ್ರಸ್ತುತ ದೇಶದಲ್ಲಿ ಕಳೆದ ವರ್ಷದಿಂದ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನಸಾಮಾನ್ಯರು ಹಣದುಬ್ಬರತೆಯ ಪರಿಸ್ಥಿಯನ್ನು ಎದುರಿಸುತ್ತಲೇ ಇದ್ದಾರೆ. ವರ್ಷದ ಪ್ರತಿ ತಿಂಗಳಲ್ಲಿ ಒಂದಲ್ಲ ಒಂದು ವಸ್ತುವಿನ ಬೆಲೆ ಏರಿಕೆ ಆಗುತ್ತಲೇ ಇದೆ.

ದಿನ ಬಳಕೆಯ ವಸ್ತುಗಳ ಬೆಳೆಯಂತೂ ಆಗಾಗ ಹೆಚ್ಚಳವಾಗುತ್ತ ಇರುತ್ತದೆ. ಸದ್ಯ ಇಂದು ಪ್ರತಿನಿತ್ಯ ಬಳಸುವಂತಹ ಹಾಲಿನ ಬೆಲೆ ಏರಿಕೆಯಾಗಿದೆ. ಈ ಮೂಲಕ ಮೊದಲೇ ಹಣದುಬ್ಬರತೆಯ ಪರಿಸ್ಥಿತಿ ಎದುರಿಸುತ್ತಿರುವವರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಾಗಿದೆ ಎನ್ನಬಹುದು.

Milk Price Hike
Image Credit: Bbusiness Today

ಪ್ರತಿನಿತ್ಯ ಮನೆಗೆ ಹಾಲು ಹಾಕಲಿಸಿಕೊಳ್ಳುವವರಿಗೆ ಬೇಸರದ ಸುದ್ದಿ
ಇನ್ನು ‘ಅಮುಲ್’ ಬ್ರಾಂಡ್‌ ನಲ್ಲಿ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟವು ಸೋಮವಾರದಿಂದ ಜಾರಿಗೆ ಬರುವಂತೆ ಎಲ್ಲಾ ರೀತಿಯ ಹಾಲಿನ ಬೆಲೆಯನ್ನು ಲೀಟರ್‌ ಗೆ 2 ರೂಪಾಯಿಗಳಷ್ಟು ಹೆಚ್ಚಿಸಿದೆ. ಹಾಲಿನ ಒಟ್ಟಾರೆ ಕಾರ್ಯಾಚರಣೆ ಮತ್ತು ಉತ್ಪಾದನಾ ವೆಚ್ಚದ ಹೆಚ್ಚಳದ ದೃಷ್ಟಿಯಿಂದ ಸೋಮವಾರದಿಂದಲೇ ಹೊಸ ದರಗಳು ಜಾರಿಗೆ ಬರಲಿದೆ.

ಇದರೊಂದಿಗೆ ದೇಶಾದ್ಯಂತ ಎಲ್ಲ ಮಾರುಕಟ್ಟೆಗಳಲ್ಲಿ ಅಮುಲ್ ಹಾಲಿನ ಪ್ಯಾಕೆಟ್ ಬೆಲೆ ಲೀಟರ್ ಗೆ 2 ರೂ. ಏರಿದೆ. ಜೂನ್ 3 ರಿಂದ ಜಾರಿಗೆ ಬರುವಂತೆ ಎಲ್ಲಾ ರೀತಿಯ ಅಮುಲ್ ಹಾಲಿನ ದರವನ್ನು ಲೀಟರ್‌ಗೆ 2 ರೂ. ಏರಿಕೆ ಮಾಡಲಾಗಿದೆ. ರೈತರಿಗೆ ಹೆಚ್ಚಿದ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಈ ಹೆಚ್ಚಳ ಅಗತ್ಯವಾಗಿದೆ ಎಂದು GCMMF MD ಜಯನ್ ಮೆಹ್ತಾ ಹೇಳಿದರು.

Milk Price Hike News
Image Credit: npg

ಹಾಲಿನ ದರ ಇಷ್ಟು ಹೆಚ್ಚಳ
ಬೆಲೆ ಏರಿಕೆಯೊಂದಿಗೆ, ಅಮುಲ್‌ ನ 500 ಎಂಎಲ್ ಎಮ್ಮೆಯ ಹಾಲು, 500 ಎಂಎಲ್ ಅಮುಲ್ ಗೋಲ್ಡ್ ಹಾಲು ಮತ್ತು 500 ಎಂಎಲ್ ಅಮುಲ್ ಶಕ್ತಿ ಹಾಲಿನ ಬೆಲೆಗಳನ್ನು ಕ್ರಮವಾಗಿ ರೂ. 36 , ಮತ್ತು 30 ರೂ. ಮತ್ತು ರೂ. 33 ವರೆಗೆ ಪರಿಷ್ಕರಿಸಲಾಗಿದೆ.  ಪ್ರತಿ ಲೀಟರ್ ಹಾಲಿಗೆ 2 ರೂ. ಎಂಆರ್‌ಪಿಯಲ್ಲಿ ಶೇ.3-4ರಷ್ಟು ಹೆಚ್ಚಳವಾಗಿದೆಯಂತೆ. ಇದು ಸರಾಸರಿ ಆಹಾರ ಹಣದುಬ್ಬರಕ್ಕಿಂತ ಕಡಿಮೆಯಾಗಿದೆ.

Join Nadunudi News WhatsApp Group

ಫೆಬ್ರುವರಿ 2023 ರಿಂದ ಪ್ರಮುಖ ಮಾರುಕಟ್ಟೆಗಳಲ್ಲಿ ಅಮುಲ್ ಹಾಲಿನ ಬೆಲೆಯಲ್ಲಿ ಯಾವುದೇ ಹೆಚ್ಚಳವನ್ನು ಮಾಡಿಲ್ಲ ಎಂದು GCMMF ಹೇಳಿಕೆಯಲ್ಲಿ ತಿಳಿಸಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಗ್ರಾಹಕರು ಪಾವತಿಸುವ ಪ್ರತಿ ರೂಪಾಯಿಯ ಸುಮಾರು 80 ಪೈಸೆಗಳನ್ನು ಅಮುಲ್ ಹಾಲು ಉತ್ಪಾದಕರಿಗೆ ವರ್ಗಾಯಿಸುತ್ತದೆ. ಬೆಲೆ ಪರಿಷ್ಕರಣೆಯಿಂದ ನಮ್ಮ ಹಾಲು ಉತ್ಪಾದಕರಿಗೆ ಅನುಕೂಲವಾಗಲಿದೆ ಎಂದಿದ್ದಾರೆ ಮೆಹ್ತಾ.

Milk Price Hike New Update
Image Credit: Deccanherald

Join Nadunudi News WhatsApp Group