Nandini: ನಂದಿನಿ ಹಾಲು ಬಳಸುವವರಿಗೆ ಬೇಸರದ ಸುದ್ದಿ, ಇನ್ನುಮುಂದೆ ಕೊಡಬೇಕು 5 ರೂ ಅಧಿಕ ಹಣ.

ರಾಜ್ಯದ ಜನರಿಗೆ ಬಿಗ್ ಶಾಕ್, ನಂದಿನಿ ಹಾಲು ಮತ್ತು ಮೊಸರಿನ ಬೆಲೆಯಲ್ಲಿ ಏರಿಕೆ.

Nandini Milk Price Hike: ದೇಶದಲ್ಲಿ ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆ ಹೆಚ್ಚಾಗುತ್ತಲೆ ಇದೆ. ಇದರಿಂದ ಜನ ಸಾಮಾನ್ಯರಿಗೆ ದಿನ ನಿತ್ಯದ ವಸ್ತುಗಳನ್ನು ಖರೀದಿಸಲು ದುಬಾರಿ ಎನಿಸುತ್ತಿದೆ. ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ ಜನರಿಗೆ ಬಹಳ ನಷ್ಟವಾಗುತ್ತಿದೆ. ಇದೀಗ ಹಾಲಿನ ಬೆಲೆಯಲ್ಲಿ ಹೆಚ್ಚಳವಾಗಲಿದೆ ಎಂಬ ಸುದ್ದಿ ಹೊರ ಬಿದ್ದಿದೆ.

ಹಾಲಿನ ದರದಲ್ಲಿ ಇನ್ನುಮುಂದೆ ಹೆಚ್ಚಳವಾಗಲಿದೆ
ರಾಜ್ಯದ ಜನರು ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ವಿದ್ಯುತ್ ದರ ಹೆಚ್ಚಳದ ನಂತರ ಈಗ ನಂದಿನಿ ಹಾಲು ಮೊಸರಿನ ದರ ಕೂಡ ಹೆಚ್ಚಳ ಮಾಡಲಾಗಿದ್ದು ಮತ್ತೊಂದು ಬಿಗ್ ಶಾಕ್ ನೀಡಲಾಗುತ್ತಿದೆ.

Nandini milk and curd price increase
Image Credit: Mangalorecity

ಕೆ ಎಂಎಫ್ ನ ನೂತನ ಅಧ್ಯಕ್ಷರಾಗಿ ಭೀಮಾ ನಾಯ್ಕ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ನಂದಿನಿ ಉತ್ಪನ್ನಗಳ ದರ ಹೆಚ್ಚಳ ಮಾಡುವ ಬಗ್ಗೆ ವಿವಿಧ ಹಾಲು ಒಕ್ಕೂಟಗಳು ಮನವಿ ಮಾಡಿದೆ ಎಂದಿದ್ದಾರೆ.

ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹಾಲಿನ ದರ ಹೆಚ್ಚಳಕ್ಕೆ ಮನವಿ ಬಂದಿದೆ. ಬೆಲೆ ಏರಿಕೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಹಾಲಿನ ಬೆಲೆಯಲ್ಲಿ 5 ರೂಪಾಯಿ ಹೆಚ್ಚಳ
ಹಾಲಿನ ದರ ಹೆಚ್ಚಳಕ್ಕೆ ಒಕ್ಕೂಟಗಳ ಮನವಿ ಹಿನ್ನಲೆಯಲ್ಲಿ ನಂದಿನಿ ಹಾಲು, ಮೊಸರಿನ ದರ ಪ್ರತಿ ಲೀಟರ್ ಗೆ ರೂಪಾಯಿ 5 ಹೆಚ್ಚಳ ಮಾಡಲು ಚಿಂತನೆ ನಡೆಸಲಾಗಿದೆ.

Join Nadunudi News WhatsApp Group

Nandini milk and curd price increase
Image Credit: News9live

ಸಿಎಂ ಜೊತೆಗೆ ಚರ್ಚಿಸಿದ ನಂತರ ಈ ಬಗ್ಗೆ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಈಗಾಗಲೇ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯ ಶಾಕ್ ನಲ್ಲಿರುವಂತ ಗ್ರಾಹಕರಿಗೆ ಶೀಘ್ರವೇ ನಂದಿನಿ ಹಾಲು, ಮೊಸರಿನ ಬೆಲೆ ಏರಿಕೆಯ ಹೊರೆ ಕೂಡ ಎದುರಾಗಲಿದೆ. ಯಾವಾಗ ಹೆಚ್ಚಳ ಮಾಡಲಾಗುತ್ತದೆ ಅನ್ನುವುದನ್ನು ಕಾದು ನೋಡಬೇಕಿದೆ.

Join Nadunudi News WhatsApp Group