Annamalai: ಸೋತರು ಅಣ್ಣಾಮಲೈಗೆ ಸಚಿವ ಸ್ಥಾನ ಕೊಟ್ಟಿದ್ದು ಯಾಕೆ…? ಮೋದಿ ಪಕ್ಕಾ ಪ್ಲ್ಯಾನ್.

ಸೋತರು ಅಣ್ಣಾಮಲೈಗೆ ಸಚಿವ ಸ್ಥಾನ ಕೊಟ್ಟಿದ್ದು ಯಾಕೆ...?

Ministership To Annamalai: ಸದ್ಯ ದೇಶದಲ್ಲಿ BJP ಸರ್ಕಾರ ರಚನೆಗೊಂಡಿದೆ. ಸತತ ಮೂರನೇ ಬಾರಿಗೆ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೋದಿ ಪ್ರಮಾಣವಚನದ ನಂತರ ಸಚಿವರ ಆಯ್ಕೆ ಕೂಡ ನಡೆಯಲಿದೆ. ಈ ಮದ್ಯೆ ಹೊಸ ಸುದ್ದಿ ಬೆಳಕಿಗೆ ಬಂದಿದೆ.

ಹೌದು,ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರಿಗೂ ಸಚಿವರ ಆಯ್ಕೆಯ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿದ್ದು, ಮೂಲಗಳ ಪ್ರಕಾರ ಅಣ್ಣಾಮಲೈ ಅವರು ಕೇಂದ್ರ ಸಚಿವರಾಗಿಯೂ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸೋತರು ಅಣ್ಣಾಮಲೈಗೆ ಸಚಿವ ಸ್ಥಾನ ಕೊಟ್ಟಿದ್ದು ಯಾಕೆ…? ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ.

Ministership To Annamalai
Image Credit: India Today

ಸೋತರು ಅಣ್ಣಾಮಲೈಗೆ ಸಚಿವ ಸ್ಥಾನ ಕೊಟ್ಟಿದ್ದು ಯಾಕೆ…?
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಣ್ಣಾಮಲೈ ಡಿಎಂಕೆ ಅಭ್ಯರ್ಥಿ ವಿರುದ್ಧ ಕೇವಲ 17 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಇದರಿಂದಾಗಿ ರಾಜ್ಯಾಧ್ಯಕ್ಷರಾದ ಬಳಿಕ ತಮಿಳುನಾಡಿನಲ್ಲಿ ಪ್ರಬಲ ಪಕ್ಷವನ್ನು ಸಂಘಟಿಸಿದ ಅಣ್ಣಾಮಲೈ ಕೇವಲ 17 ಸಾವಿರ ಮತಗಳ ಅಂತರದಿಂದ ಸೋತರು. ತಮಿಳುನಾಡಿನಂತಹ ರಾಜ್ಯದಲ್ಲಿ ಅಣ್ಣಾಮಲೈ ಗೆಲುವು ಸೋಲಲ್ಲ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ. ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಕೆ.ಅಣ್ಣಾಮಲೈ ಅವರು ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಿರುವ ಕಾರಣಕ್ಕೆ ಈ ಬಾರಿ ನರೇಂದ್ರ ಮೋದಿ ಸಂಪುಟದಲ್ಲಿ ಅವರಿಗೆ ಸಚಿವ ಸ್ಥಾನ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಮೋದಿ ಪಕ್ಕಾ ಪ್ಲ್ಯಾನ್
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅಣ್ಣಾಮಲೈ ಸೋತರೂ ಅವರಿಗೆ ಕೇಂದ್ರ ಸಚಿವ ಸ್ಥಾನ ಏಕೆ ನೀಡಬೇಕು…? ಎನ್ನುವುದು ಸದ್ಯದ ಚರ್ಚೆಯಾಗಿದೆ. ಮೊದಮೊದಲು ಬೀದಿಗಿಳಿದು ಪಕ್ಷ ಸಂಘಟನೆ ಮಾಡುವುದರಲ್ಲಿ ಎರಡು ಮಾತಿಲ್ಲ. ತಳಮಟ್ಟದಲ್ಲಿ ಅವರ ಶ್ರಮಕ್ಕೆ ಈ ಪ್ರತಿಫಲ ಸಿಗುತ್ತಿದೆ ಎನ್ನಲಾಗುತ್ತಿದ್ದು, ಬಿಜೆಪಿಯ ಲೆಕ್ಕಾಚಾರ ಬೇರೆಯೇ ಇದೆ. ಭವಿಷ್ಯದ ದೃಷ್ಟಿಯಿಂದ ಅಣ್ಣಾಮಲೈ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡುವ ಉದ್ದೇಶವಿದ್ದು, ಇದರ ಹಿಂದೆ ತಮಿಳುನಾಡಿಗೆ ಕೇಂದ್ರದಿಂದ ಅನುದಾನ ತಂದು ಆ ಮೂಲಕ ಪಕ್ಷ ಸಂಘಟನೆ ಮಾಡಿ, ತಮಿಳುನಾಡಿನಿಂದ ಕೇಂದ್ರ ಸಚಿವರಾದರೆ ಅದೇ ರಾಜ್ಯದಲ್ಲಿ ಕೆಲಸ ಮಾಡುವುದು, ರಾಜ್ಯದ ಜನತೆಗೆ ಮನವರಿಕೆ ಮಾಡಿಕೊಡಲು ಮತ್ತು ಭವಿಷ್ಯದಲ್ಲಿ ಬಿಜೆಪಿಯನ್ನು ಪ್ರಬಲವಾಗಿ ಸಂಘಟಿಸಲು ಇದು ಒಂದು ಕಾರಣವಾಗಿದೆ.

Annamalai Latest News
Image Credit: Oneindia

Join Nadunudi News WhatsApp Group

Join Nadunudi News WhatsApp Group