Minorites Loan: ಅಲ್ಪಸಂಖ್ಯಾತರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್, ಬಿಸಿನೆಸ್ ಮಾಡಲು ಸರ್ಕಾರ ಹಣ ಕೊಡಲಿದೆ.

ಅಲ್ಪಸಂಖ್ಯಾತರಿಗೆ ಬ್ಯುಸಿನೆಸ್ ಮಾಡಲು ಸುಲಭ ಸಾಲ ಯೋಜನೆ ನೀಡಲಿದೆ ಅಲ್ಪ ಸಂಖ್ಯಾತ ಅಭಿವೃದಿ ನಿಗಮ.

Minority Development Corporation: ಇದೀಗ ಉದ್ಯಮ ಅಥವಾ ಬ್ಯುಸಿನೆಸ್ ಮಾಡುವವರಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮವು ಬ್ಯುಸಿನೆಸ್ ಅಥವಾ ಉದ್ಯಮ ಮಾಡುವಂತ ಆಸಕ್ತ ಅಲ್ಪಸಂಖ್ಯಾತರಿಗೆ ನೇರ ಸಾಲ ಸೌಲಭ್ಯವನ್ನು ನೀಡುತ್ತಿದೆ.

ಅಲ್ಪ ಸಂಖ್ಯಾತ ಅಭಿವೃದಿ ನಿಗಮದಿಂದ ನೇರ ಸಾಲ ಪಡೆಯಲು ಏನೆಲ್ಲ ಅರ್ಹತೆ ಇರಬೇಕು, ಯಾವೆಲ್ಲ ದಾಖಲೆಗಳು ಇರಬೇಕು ಅನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.

Minority Development Corporation
Image Source: India Today

ಅಲ್ಪ ಸಂಖ್ಯಾತ ಅಭಿವೃದಿ ನಿಗಮದಿಂದ ಸಾಲ ಪಡೆಯಲು ಇರಬೇಕಾದ ಅರ್ಹತೆಗಳು
* ಅಲ್ಪ ಸಂಖ್ಯಾತ ಅಭಿವೃದಿ ನಿಗಮದಿಂದ ಸಾಲ ಪಡೆಯಲು ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು.

* ಅರ್ಜಿದಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷದವರಾಗಿರಬೇಕು.

* ಅರ್ಜಿದಾರ ಕೆಎಂಡಿಸಿ ಡಿಫಲ್ತಾರ್ ಆಗಿರಬಾರದು. ನಿಗಮದಿಂದ ಆಸ್ತಿಯ ಅಡಮಾನದ ಮೇಲೆ ಮಾತ್ರ ಸಾಲ ನೀಡಲಾಗುತ್ತದೆ.

Join Nadunudi News WhatsApp Group

* ಆಸ್ತಿಯ ಮೌಲ್ಯ ಸಾಲದ ಮೊತ್ತಕ್ಕಿಂತ ಕಡಿಮೆ ಇರಬಾರದು. ವ್ಯಾಪಾರ ಅಥವಾ ಉದ್ಯಮ ಸಾಲವನ್ನು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ನೀಡಲಾಗುತ್ತದೆ.

Minority Development Corporation
Image Source: Times Of India

* ಅರ್ಜಿದಾರರ ಕುಟುಂಬದ ಆದಾಯ 8 ಲಕ್ಷ ರೂಪಾಯಿಗಿಂತ ಕಡಿಮೆ ಇದ್ದರೆ ನಂತರ ಶೇ.4 ರ ಬಡ್ಡಿ ದರದಲ್ಲಿ 20 ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುತ್ತದೆ.

* ಅರ್ಜಿದಾರರ ಕುಟುಂಬದ ಆದಾಯ 8 ಲಕ್ಷ ರೂ.ಗಳಿಂದ 15 ಲಕ್ಷ ರೂ.ಆಗಿದ್ದರೆ, ಶೇ.6ರ ಬಡ್ಡಿ ದರದಲ್ಲಿ 20 ಲಕ್ಷ ರೂಪಾಯಿ ವರೆಗೆ ಸಾಲ ನೀಡಲಾಗುತ್ತದೆ.

ಅಲ್ಪ ಸಂಖ್ಯಾತ ಅಭಿವೃದಿ ನಿಗಮದಿಂದ ಸಾಲ ಪಡೆಯಲು ಬೇಕಾಗುವ ದಾಖಲೆಗಳು
* ಸಮಿತಿಯ ಅನುಮೋದನೆ ಆದೇಶ

* ಅರ್ಜಿದಾರರಿಂದ ಅಫಿಡವಿಡ್

* ಫಲಾನುಭವಿ ಮತ್ತು ಖಾತರಿದಾರರಿಂದ ಜಂಟಿ ಅಫಿಡವಿಟ್

* ಡಿಮ್ಯಾಂಡ್ ಪ್ರಾಮಿಸರಿ ನೋಟ್

* ಹೈಪೋಥೆಕೇಶನ್ ಮತ್ತು ಅಡಮಾನ ಪತ್ರ

* ಮರುಪಾವತಿಯ ಪತ್ರ

* ಖಾತರಿ ಪತ್ರ

* ಸಾಲ ಒಪ್ಪಂದ

* ಪರಿಗಣನೆ ರಶೀದಿ

* ಸಾಲಗಾರರಿಂದ ಸ್ವೀಕೃತಿ ಸಾಲ

* ಕ್ಯಾರಂಟರ್‌ ನಿಂದ ಸ್ವೀಕೃತಿ ಸಾಲ

* ಸಮಾನ ಅಡಮಾನ ಪತ್ರಗಳ ಠೇವಣಿಯ ಮೆಮೊರೆಂಡಮ್

Join Nadunudi News WhatsApp Group