Indian Railway: ರೈಲಿನಲ್ಲಿ ಮೊಬೈಲ್ ಚಾರ್ಜ್ ಮಾಡುವವರಿಗೆ ಹೊಸ ರೂಲ್ಸ್ ನಿಯಮ, ಕೇಂದ್ರದ ಆದೇಶ.

ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ಮೊಬೈಲ್ ಫೋನ್ ಅಥವಾ ಲ್ಯಾಪ್ ಟಾಪ್ ಅನ್ನು ಚಾರ್ಜ್ ಮಾಡುವುದನ್ನು ನಿಷೇಧಿಸಲಾಗಿದೆ.

Indian Railway New Rule: ಭಾರತೀಯ ರೈಲ್ವೆ (Indian Railway) ತನ್ನ ಪ್ರಯಾಣಿಕರಿಗೆ ಇತ್ತೀಚಿಗೆ ಹಲವು ನಿಯಮಗಳನ್ನು ಜಾರಿಗೆ ತಂದಿದೆ. ದೇಶದಾದ್ಯಂತ ಪ್ರತಿ ನಿತ್ಯ ಸಾಕಷ್ಟು ಜನರು ಭಾರತೀಯ ರೈಲ್ವೆಯಲ್ಲಿ ಪ್ರಯಾಣ ಮಾಡುತ್ತಾರೆ.

ಭಾರತೀಯ ರೈಲ್ವೆ ಕೂಡ ತನ್ನ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮತ್ತು ಅವರ ಸುರಕ್ಷೆತೆಯ ದೃಷ್ಟಿಯಿಂದ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುವುದರ ಜೊತೆಗೆ ಕೆಲವು ನಿಯಮಗಳನ್ನು ಸಹ ಬದಲಿಸುತ್ತಿದೆ.

Indian Railway New Rule
Image Source: Mint

ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಹೊಸ ಸುದ್ದಿ
ರೈಲ್ವೆ ಪ್ರಯಾಣಿಕರಿಗೆ ಹೊಸದೊಂದು ಸುದ್ದಿ ಹೊರ ಬಿದ್ದಿದೆ. ರೈಲ್ವೆ ಯಲ್ಲಿ ಒಂದು ನಿಯಮ ಬದಲಾಗುತ್ತಿದೆ. ಇದೀಗ ಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಗೆ ಮೊಬೈಲ್ ಚಾರ್ಜಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ಜಾರಿಗೆ ತಂದಿದೆ.

ಇಂದಿನ ಕಾಲದ ಜನರು ಮೊಬೈಲ್ ಫೋನ್ ಗೆ ಹೆಚ್ಚು ಅವಲಂಭಿತರಾಗಿರುತ್ತಾರೆ. ಅನೇಕ ಕೆಲಸಲನ್ನು ಜನರು ತಮ್ಮ ಮೊಬೈಲ್ ಫೋನ್ ನ ಮುಖಾಂತರವೇ ನಡೆಸುತ್ತಿದ್ದಾರೆ. ಇದರಿಂದ ಅವರಿಗೆ ಮೊಬೈಲ್ ಚಾರ್ಜ್ ಅಗತ್ಯವಾಗಿ ಬೇಕಾಗುತ್ತದೆ. ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ಮೊಬೈಲ್ ಫೋನ್ ಅಥವಾ ಲ್ಯಾಪ್ ಟಾಪ್ ಅನ್ನು ಚಾರ್ಜ್ ಮಾಡುವುದನ್ನು ನಿಷೇಧಿಸಲಾಗಿದೆ.

Indian Railway New Rule
Image Source: Mint

ರೈಲ್ವೆ ಪ್ರಯಾಣಿಕರಿಗೆ ಮೊಬೈಲ್ ಫೋನ್ ಅನ್ನು ರೈಲಿನಲ್ಲಿ ರಾತ್ರಿ ಚಾರ್ಜ್ ಮಾಡಲು ನಿಷೇಧ
ಸಾಮಾನ್ಯವಾಗಿ ಜನರು ತಮ್ಮ ಫೋನ್ ಅನ್ನು ಚಾರ್ಜಿಂಗ್ ನಲ್ಲಿ ಇರಿಸಿ ಅದನ್ನು ಆಫ್ ಮಾಡಲು ಮರೆತು ಬಿಡುತ್ತಾರೆ. ಈ ರೀತಿಯಾಗಿ ರಾತ್ರಿಯಿಡಿ ಫೋನ್ ಅಥವಾ ಲ್ಯಾಪ್ ಟಾಪ್ ಅನ್ನು ಚಾರ್ಜ್ ನಲ್ಲಿ ಇಟ್ಟು ಮಲಗಿದರೆ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂತಹ ಕೆಟ್ಟ ಘಟನೆ ತಪ್ಪಿಸಲು ರೈಲ್ವೆ ಪ್ರಯಾಣಿಕರು ರಾತ್ರಿ ಇಡೀ ತಮ್ಮ ಫೋನ್ ಗಳನ್ನೂ ಚಾರ್ಜ್ ಮಾಡುವುದನ್ನು ನಿಷೇಧಿಸಿದೆ.

Join Nadunudi News WhatsApp Group

Indian Railway New Rule
Image Source: India Today

Join Nadunudi News WhatsApp Group