Mobile Hacking : ಮೊಬೈಲ್ ನಲ್ಲಿ ಈ ಚಿಹ್ನೆ ಕಂಡುಬಂದರೆ ನಿಮ್ಮ ಮೊಬೈಲ್ ಹ್ಯಾಕ್ ಆಗಿದೆ ಎಂದು ಅರ್ಥ, ಪರಿಶೀಲಿಸಿಕೊಳ್ಳಿ

ನಿಮ್ಮ ಮೊಬೈಲ್ ಹ್ಯಾಕ್ ಆಗಿದ್ದರೆ ಈ ಚಿಹ್ನೆ ಬರುತ್ತದೆ

Mobile Hacking Simbol: ಮೊಬೈಲ್ ಬಳಕೆ ಮಾಡುವವರು ಬಹಳ ವಿಚಾರಗಳನ್ನು ಯಾವತ್ತಿಗೂ ಗಮನಿಸುತ್ತಿರಬೇಕು ಇಲ್ಲ ಅಂತಾದರೆ ನಿಮಗೆ ತಿಳಿಯದೆ ನಿಮ್ಮ ಮೊಬೈಲ್ ಹ್ಯಾಕ್ (Mobile Hack) ಆಗುತ್ತದೆ. ಕೆಲವರು ಮೊಬೈಲ್ ನಲ್ಲಿ ತಮ್ಮ ಬಳಕೆಗೆ ಬಾರದ, ಉಪಯೋಗವಿಲ್ಲದ ಅಪ್ಲಿಕೇಶನ್ ಗಳನ್ನೆಲ್ಲಾ ಡೌನ್ಲೋಡ್ ಮಾಡಿಕೊಂಡಿರುತ್ತಾರೆ.

ಕೆಲವು ಅಪ್ಲಿಕೇಶನ್ ಗಳನ್ನ ನಾವು ಉಪಯುಕ್ತ ಇಲ್ಲದೆ ಇದ್ದರೂ ಕೂಡ ಡೌನ್ಲೋಡ್ ಮಾಡಿಕೊಳ್ಳುತ್ತೇವೆ, ಅಂತಹ ಸಂದರ್ಭದಲ್ಲಿ ನಿಮ್ಮ ಮೊಬೈಲ್ ಹ್ಯಾಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಆದಷ್ಟು ನಿಮ್ಮ ಫೋನ್ ನ ಸೆಟ್ಟಿಂಗ್ ಅನ್ನು ಬದಲಾಯಿಸುವುದು ಉತ್ತಮ ಇಲ್ಲದಿದ್ದರೆ ಹ್ಯಾಕರ್‌ ಗಳು ನಿಮ್ಮ ಫೋನ್‌ ಹ್ಯಾಕ್‌ ಮಾಡುವ ಸಾಧ್ಯತೆ ಇದೆ.

Mobile Hacking
Image Credit: Business Today

ಹ್ಯಾಕರ್ಸ್ ನಿಂದ ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿಡಿಸಿ

ಇಂದಿನ ಕಾಲದಲ್ಲಿ ಹ್ಯಾಕರ್ಸ್ ಗಳು ಯಾವ ಸೂಚನೆಯನ್ನು ಇಡದೇ ಫೋನ್ ನಿಂದಲೇ ನಮಗೆ ವಂಚಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಈಗ ಬೇರೆ ವಿಧಾನಗಳ ಮೂಲಕ ಹ್ಯಾಕ್ ಮಾಡುತ್ತಿದ್ದು, ಅಂಥವರನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ. ಆದ್ದುದರಿಂದ ನಾವು ಆದಷ್ಟು ಜಾಗ್ರತೆ ಆಗಿರುವುದು ಬಹಳ ಮುಖ್ಯ ಆಗಿದೆ.

ಫೋನ್ ಹ್ಯಾಕ್ ಆಗಿರುವ ಕುರಿತು ತಿಳಿದುಕೊಳ್ಳುವ ವಿಧಾನ

Join Nadunudi News WhatsApp Group

ಮೊದಲನೆದಾಗಿ ನಮ್ಮ ಫೋನ್ ಹೆಚ್ಚು ಡೇಟಾವನ್ನು ಖರ್ಚು ಮಾಡುತ್ತಿದ್ದರೆ ಅದು ಮೊಬೈಲ್ ಹ್ಯಾಕಿಂಗ್ ನ ಭಾಗವಾಗಿರುತ್ತದೆ. ಅಮೇರಿಕನ್ ಕಂಪ್ಯೂಟರ್ ಭದ್ರತಾ ಕಂಪನಿ ನಾರ್ಟನ್ ಪ್ರಕಾರ, “ಹೆಚ್ಚಿನ ಡೇಟಾ ಬಳಕೆಗೆ ಅನೇಕ ಕಾರಣಗಳಿವೆ, ಉದಾಹರಣೆಗೆ ಅತಿಯಾದ ಅಪ್ಲಿಕೇಶನ್ ಬಳಕೆ. ಆದರೆ ನೀವು ಮೊದಲಿನಂತೆ ನಿಮ್ಮ ಫೋನ್ ಅನ್ನು ಬಳಸುತ್ತಿದ್ದು ಡಾಟಾ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಆಗುತ್ತಿದ್ದರೆ ನೀವು ತನಿಖೆ ಮಾಡಬೇಕಾಗುತ್ತದೆ. ನಿಮ್ಮ ಫೋನ್ ನಲ್ಲಿ ನೀವು ಸ್ಥಾಪಿಸದ ಕೆಲವು ಅಪ್ಲಿಕೇಶನ್ ಗಳು ಇರಬಹುದು ಅಥವಾ ನಿಮಗೆ ನೆನಪಿಲ್ಲದ ಫೋನ್ ಕರೆ ಇರಬಹುದು. ಅವುಗಳನ್ನ ಗಮನಿಸುವುದು ಉತ್ತಮ.

Mobile Hacking Latest News
Image Credit: basic-tutorials

ಫೋನ್ ಅನ್ನು ಸುರಕ್ಷಿತವಾಗಿಡುವ ವಿಧಾನ

ಫೋನ್ ಅನ್ನು ಸುರಕ್ಷಿತವಾಗಿಡುವಾಗ ಗಮನದಲ್ಲಿ ಇಟ್ಟುಕೊಳ್ಳಬೇಕಾದ ವಿಚಾರ ಏನೆಂದರೆ ಅಪ್ಲಿಕೇಶನ್ ಗಳನ್ನೂ ಡೌನ್ಲೋಡ್ ಮಾಡುವಾಗ ಜಾಗ್ರತರಾಗಿರುವುದು. ಸಾಮಾನ್ಯವಾಗಿ ನೀವು ಗೂಗಲ್ ಅಥವಾ ಆಪಲ್ ಸ್ಟೋರ್ ನಿಂದ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕು. ನಾರ್ಟನ್ ಪ್ರಕಾರ, “ನಿಮಗೆ ಗೊತ್ತಿಲ್ಲದ ಯಾರಿಂದಲಾದರೂ ನೀವು ಇಮೇಲ್ ಅಥವಾ ಸಂದೇಶವನ್ನು ಪಡೆದರೆ, ಆ ಸಂದೇಶದಲ್ಲಿನ ಯಾವುದೇ ಲಿಂಕ್ ಗಳನ್ನೂ ಕ್ಲಿಕ್ ಮಾಡಬಾರದು. ”ಕಂಪ್ಯೂಟರ್ ಸೆಕ್ಯುರಿಟಿ ಕಂಪನಿ ಮೆಕ್ ಕ್ಯಾಫೆ ಪ್ರಕಾರ, “ಬ್ಲೂಟೂತ್ ಮತ್ತು ವೈ-ಫೈ ಸಹಾಯದಿಂದ ಹ್ಯಾಕರ್ ಗಳು ನಿಮ್ಮ ಫೋನ್ ಅನ್ನು ಹ್ಯಾಕ್ ಮಾಡುವುದು ಸುಲಭ. ಆದ್ದರಿಂದ ಅಗತ್ಯವಿಲ್ಲದಿದ್ದಾಗ ಅವುಗಳನ್ನು ಮುಚ್ಚಿಡಿ.”

ಫೋನ್ ಹ್ಯಾಕ್ ಆದರೆ ಹೀಗೆ ಮಾಡಿ

ಫೋನ್ ಹ್ಯಾಕ್ ಆದ ಪರಿಸ್ಥಿತಿಯಲ್ಲಿ ನಾರ್ಟನ್ ಪ್ರಕಾರ, ನಿಮ್ಮ ಫೋನ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಫೋನ್ನಲ್ಲಿ ಸಂಖ್ಯೆಗಳನ್ನು ಉಳಿಸಿದ ಜನರಿಗೆ ಮೊದಲು ಹೇಳಿ ಮತ್ತು ನಿಮ್ಮ ಸಂಖ್ಯೆಯಿಂದ ಕಳುಹಿಸಲಾದ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ. ಇದರ ನಂತರ ಹ್ಯಾಕರ್ ಗೆ ಸಹಾಯ ಮಾಡಿದೆ ಎಂದು ನೀವು ಬಳಸದ ಯಾವುದೇ ಅಪ್ಲಿಕೇಶನ್ ಅನ್ನು ತೆಗೆದುಹಾಕಿ.

ಫೋನ್ ನಲ್ಲಿ ಆಂಟಿ-ವೈರಸ್ ಸಾಫ್ಟ್ವೇರ್ ಅನ್ನು ಸೇರಿಸುವುದು ಸಹ ಸೂಕ್ತವಾಗಿದೆ ಇದರಿಂದ ಅದು ಸಮಯಕ್ಕೆ ವೈರಸ್ ಅನ್ನು ಗುರುತಿಸಬಹುದು ಮತ್ತು ಅದರ ಬಗ್ಗೆ ನಿಮಗೆ ತಿಳಿಸಬಹುದು. ಫೋನ್ ಅನ್ನು ಮರುಹೊಂದಿಸುವುದು ಸಹ ಒಂದು ಪರಿಹಾರವಾಗಿದೆ ಆದರೆ ಡೇಟಾವನ್ನು ಕಳೆದುಕೊಳ್ಳುವ ಅಪಾಯವೂ ಇದೆ. ಮತ್ತು ಅಂತಿಮವಾಗಿ, ನೀವು ಎಲ್ಲಾ ಪಾಸ್ ವರ್ಡ್ ಗಳನ್ನು ಬದಲಾಯಿಸುವುದು ಮುಖ್ಯ.

Join Nadunudi News WhatsApp Group