Aadhar-Mobile Linking: ಒಂದು ಮೊಬೈಲ್ ನಂಬರ್ ಅನ್ನು ಎಷ್ಟು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಬಹುದು..? ಕಾನೂನು ನಿಯಮ

ಒಂದು ಮೊಬೈಲ್ ನಂಬರ್ ಅನ್ನು ಎಷ್ಟು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಬಹುದು..?

Mobile Number Link with Aadhar Card: ದೇಶದ ಎಲ್ಲಾ ಜನರಿಗೂ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ Aadhar Card ಕುರಿತಾಗಿ ಸಾಕಷ್ಟು ಅಪ್ಡೇಟ್ ಗಳು ಹೊರಬರುತ್ತಿವೆ. ಆಧಾರ್ ಕಾರ್ಡ್ ಇಲ್ಲದೆ ಯಾವುದೇ ರೀತಿಯ ಕೆಲಸಗಳು ಕೂಡ ಪೂರ್ಣಗೊಳ್ಳುವುದಿಲ್ಲ.

ಇನ್ನು UIDAI ಇತ್ತೀಚಿಗೆ ಆಧಾರ್ ತಿದ್ದುಪಡಿಯನ್ನು ಕಡ್ಡಾಯಗೊಳಿಸಿದೆ. ಉಚಿತ ಆಧಾರ್ ಕಾರ್ಡ್ ತಿದ್ದುಪಡಿಗೆ ಜೂನ್ 14 ಕೊನೆಯ ದಿನಾಂಕವಾಗಿದೆ. ಸಧ್ಯ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡುವ ಬಗ್ಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.

Mobile Number Link with Aadhar Card
Image Credit: Digit

ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಕಡ್ಡಾಯ
ಸದ್ಯ ದೇಶದಲ್ಲಿ ಚಿಕ್ಕ ಮಕ್ಕಳಿಗೂ ಬಾಲ್ ಆಧಾರ್ ಕಾರ್ಡ್ ಅನ್ನು ಮಾಡಿಸಲಾಗುತ್ತದೆ. ವಯಸ್ಕರಿಗೆ ಮೊಬೈಲ್ ಫೋನ್ ಇರುತ್ತದೆ ಆದರೆ ಚಿಕ್ಕ ಮಕ್ಕಳಿಗೆ ಮೊಬೈಲ್ ಫೋನ್ ಇಲ್ಲದಿದ್ದಾಗ ಅವರ ಆಧಾರ್ ಕಾರ್ಡ್ ಗೆ ಪೋಷಕರ ಮೊಬೈಲ್ ಸಂಖ್ಯೆಯನ್ನು ನೀಡಲಾಗುತ್ತದೆ. ಹಾಗೆ ಮನೆಯಲ್ಲಿ ಮೊಬೈಲ್ ಬಳಸದ ವಯೋವೃದ್ಧರಿದ್ದರೆ ಅವರಿಗೂ ಕೂಡ ಅದೇ ಮೊಬೈಲ್ ಸಂಖ್ಯೆಯನ್ನ ನೀಡಬೇಕಾಗುತ್ತದೆ. ಇದೀಗ ನೀವು ಒಂದು ಸಿಮ್ ನಂಬರ್‌ ನಲ್ಲಿ ಎಷ್ಟು ಆಧಾರ್ ಕಾರ್ಡ್‌ ಗಳನ್ನು ಲಿಂಕ್ ಮಾಡಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಒಂದು ಮೊಬೈಲ್ ನಂಬರ್ ಅನ್ನು ಎಷ್ಟು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಬಹುದು..?
ಸದ್ಯ ದೇಶದಲ್ಲಿ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇನ್ನು ನೀವು ಒಂದು ಮೊಬೈಲ್ ಸಂಖ್ಯೆಯನ್ನ ಎರಡು ಅಥವಾ ಮೂರೂ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಬಹುದು. ಆದರೆ ಅದಕ್ಕಿಂತ ಹೆಚ್ಚು ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡಿದರೆ ಅನಗತ್ಯ ಸಮಸ್ಯೆಯನ್ನ ಎದುರಿಸಬೇಕಾಗುತ್ತದೆ.

Aadhar-Mobile Linking
Image Credit: 10TV

Join Nadunudi News WhatsApp Group

Join Nadunudi News WhatsApp Group