Mobile Recharge: ರಾಂಗ್ ನಂಬರ್ ಗೆ ರಿಚಾರ್ಜ್ ಮಾಡಿದರೆ ಈಗ ನೋ ಟೆನ್ಶನ್, ಈ ರೀತಿ ವಾಪಾಸ್ ಪಡೆದುಕೊಳ್ಳಿ.

ನೀವು ತಪ್ಪಾದ ನಂಬರ್ ಗೆ ರಿಚಾರ್ಜ್ ಮಾಡಿದ್ದರೆ ತಕ್ಷಣವೇ ಈ ಕೆಲಸ ಮಾಡಿ, ರಿಚಾರ್ಜ್ ವಾಪಾಸ್ ಪಡೆದುಕೊಳ್ಳಿ.

Mobile Recharge: ಜನರು ಮೊದಲು ತಮ್ಮ ಮೊಬೈಲ್ ಗೆ ರಿಚಾರ್ಜ್ ಮಾಡಿಕೊಳ್ಳಬೇಕಾದರೆ ದೂರದ ಮೊಬೈಲ್ ಅಂಗಡಿಗೆ ಹೋಗಬೇಕಿತ್ತು. ಈಗ ಹಲವು ಅಪ್ಲಿಕೇಶನ್ ಗಳಿಂದ ಮನೆಯಲ್ಲಿಯೇ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ. ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದೆ. ಇದೀಗ ಆನ್ ಲೈನ್ ನಲ್ಲಿಯೇ ಎಲ್ಲ ಕೆಲಸವನ್ನು ಮಾಡಬಹುದಾಗಿದೆ.

ರಿಚಾರ್ಜ್ ಮಾಡಿಕೊಳ್ಳಲು ಕೆಲವು ಅಪ್ಲಿಕೇಶನ್ ಗಳು ಇವೆ. ಫೋನ್ ಪೆ, ಗೂಗಲ್ ಪೆ, ಪೇಟಿಯಮ್ ಇಂತಹ ಅಪ್ಲಿಕೇಶನ್ ಗಳ ಮೂಲಕ ರಿಚಾರ್ಜ್ ಮಾಡಿಸಿಕೊಳ್ಳಬಹುದು.

ಆದರೆ ಹಲವು ಬಾರಿ ಕೆಲವರು ತಪ್ಪು ಸಂಖ್ಯೆಗೆ ರಿಚಾರ್ಜ್ ಮಾಡುತ್ತಾರೆ. ಇದು ಸಣ್ಣ ಮೊತ್ತದ ರಿಚಾರ್ಜ್ ಆಗಿದ್ದರೇ ಜನರು ಅದನ್ನು ನಿರ್ಲಕ್ಷಿಸುತ್ತಾರೆ. ಅದೇ ದೊಡ್ಡ ಮೊತ್ತ ರೋಂಗ್ ನಂಬರ್ ಗೆ ರಿಚಾರ್ಜ್ ಮಾಡಿದ್ದರೆ ಟೆನ್ಶನ್ ಆಗುತ್ತದೆ. ರೋಂಗ್ ನಂಬರ್ ಗೆ ರಿಚಾರ್ಜ್ ಮಾಡಿದರೆ ಈ ಹಣ ಹಿಂಪಡೆಯುವುದು ಹೇಗೆ ಎನ್ನುದು ಹೆಚ್ಚಿನ ಜನರಿಗೆ ತಿಳಿದಿಲ್ಲ.

Information about what to do in case of recharge to wrong number.
Image Credit: TV9hindi

ರೋಂಗ್ ನಂಬರ್ ಗೆ ರಿಚಾರ್ಜ್ ಮಾಡಿದರೆ ಏನು ಮಾಡಬೇಕು
ನೀವು ತಪ್ಪಾಗಿ ಅಥವಾ ಗಡಿಬಿಡಿಯಲ್ಲಿ ರೋಂಗ್ ನಂಬರ್ ಗೆ ರಿಚಾರ್ಜ್ ಮಾಡಿದರೆ ನೀವು ಸಿಮ್ ಕಾರ್ಡ್ ಬಳಸುತ್ತಿರುವ ಟೆಲಿಕಾಂ ಆಪರೇಟರ್ ನ ಕಸ್ಟಮರ್ ಕೇರ್ ಗೆ ತಕ್ಷಣ ಕರೆ ಮಾಡಿ ಮತ್ತು ಅವರಿಗೆ ಎಲ್ಲಾ ಮಾಹಿತಿಯನ್ನು ನೀಡಿ.

ಅಂದರೆ ನೀವು ಎಷ್ಟು ಮೊತ್ತ ರಿಚಾರ್ಜ್ ಮಾಡಿದ್ದೀರಿ, ಯಾವ ಕಂಪನಿಯ ನಂಬರ್ ಗೆ ರಿಚಾರ್ಜ್ ಮಾಡಲಾಗಿದೆ ಹಾಗು ಯಾವ ಅಪ್ ಅನ್ನು ರಿಚಾರ್ಜ್ ಮಾಡಲು ಬಳಸಿದ್ದೀರಿ, ಹೀಗೆ ಎಲ್ಲ ಮಾಹಿತಿಯನ್ನು ಟೆಲಿಕಾಂ ಆಪರೇಟರ್ ಗೆ ನೀಡಬೇಕಾಗುತ್ತದೆ.

Join Nadunudi News WhatsApp Group

Mobile Recharge latest news update
Image Credit: Paytm

ಇದಲ್ಲದೆ ನೀವು ತಪ್ಪಾಗಿ ರಿಚಾರ್ಜ್ ಮಾಡಿದ ಬಗ್ಗೆ ಸಂಪೂರ್ಣ ವಿವರಗಳನ್ನು ಇಮೇಲ್ ಮೂಲಕ ಸಂಬಂಧಪಟ್ಟ ಕಂಪನಿಗೆ ಕಳುಹಿಸಬಹುದು. ಈ ಮೂಲಕ ನಿಮ್ಮ ಹಣವನ್ನು ಮರಳಿ ಪಡೆಯಬಹುದು. ಭಾರತದಲ್ಲಿ ಹೆಚ್ಚಿನ ಜನರು ಜಿಯೋ ಏರ್ ಟೆಲ್ ಮತ್ತು ವೊಡಾಫೋನ್ ಐಡಿಯಾ ಸಿಮ್ ಕಾರ್ಡ್ ಗಳನ್ನೂ ಬಳಸುತ್ತಾರೆ. ನೀವು ಈ ಟೆಲಿಕಾಂ ಕಂಪನಿಯ ಇಮೇಲ್ ಐಡಿಯನ್ನು ಸುಲಭವಾಗಿ ಪಡೆಯಬಹುದು.

Join Nadunudi News WhatsApp Group