Modi Fasting: ರಾಮ ಮಂದಿರದ ಸಲುವಾಗಿ ನರೇಂದ್ರ ಮೋದಿ ಏನು ವೃತ ಮಾಡುತ್ತಿದ್ದಾರೆ ಗೊತ್ತಾ…? ನಿಜಕ್ಕೂ ಗ್ರೇಟ್

ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ನರೇಂದ್ರ ಮೋದಿ ಅವರು ಕಠಿಣ ವ್ರತ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.

Modi Fasting For Ram Mandir: ಜನವರಿ 22 ರಂದು ರಾಮ ಮಂದಿರ ಉದ್ಘಾಟನೆ (Ram Mandir Inauguration) ಆಗಲಿದೆ. ಈ ಶುಭ ದಿನಕ್ಕಾಗಿ ಇಡೀ ದೇಶದ ಜನತೆ ಕಾಯುತ್ತಿದ್ದಾರೆ. ರಾಮ ಮಂದಿರ ಉದ್ಘಾಟನೆಗೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ.

ದೇಶದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಯೋಧ್ಯ ರಾಮ ಮಂದಿರವನ್ನು ಉದ್ಘಾಟನೆ ಮಾಡಲಿದ್ದಾರೆ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಜನವರಿ 22 ರ ಸೋಮವಾರದಂದು ಬಹಳ ಅದ್ದೂರಿಯಾಗಿ ನೆರವೇರಲಿದೆ. ಇನ್ನು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ನರೇಂದ್ರ ಮೋದಿ ಅವರು ಕಠಿಣ ವ್ರತ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.

PM Narendra Modi To Observe Fast For 11-Days Ahead Of Pran Pratistha Of Ayodhya Ram Temple
Image Credit: Gujaratijagran

ರಾಮನ ಪ್ರಾಣ ಪ್ರತಿಷ್ಠಾಪನೆಗಾಗಿ ಮೋದಿ ಕಠಿಣ ವ್ರತ
ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಟ್ಟುನಿಟ್ಟಿನ ಉಪವಾಸ ಕೈಗೊಂಡಿದ್ದಾರೆ. ಉಪವಾಸದ ಅಂಗವಾಗಿ ಮೋದಿ ಅವರು ಎಳನೀರು ಮಾತ್ರ ಸೇವಿಸುತ್ತಿದ್ದಾರೆ. ಹಾಗೆಯೇ ನೆಲದ ಮೇಲೆ ಕೇವಲ ಹೊದಿಕೆ ಹಾಕಿಕೊಂಡು ಮಲಗುತ್ತಿದ್ದಾರೆ.

ಈ ವಿಶೇಷ 11 ದಿನಗಳ ಉಪವಾಸವು ಧ್ಯಾನ ಮತ್ತು ವಿಶೇಷ ಸಾತ್ವಿಕ ಆಹಾರದೊಂದಿಗೆ ಮನಸ್ಸು ಮತ್ತು ದೇಹದ ಶುದ್ಧೀಕರಣವನ್ನು ಒಳಗೊಂಡಿರುತ್ತದೆ. ಈ ನಿಯಮಗಳ ಪ್ರಕಾರ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಇತರ ಹಲವಾರು ವಸ್ತುಗಳ ಸೇವನೆಯನ್ನು ನಿಷೇಧಿಸಲಾಗಿದೆ. ಮೋದಿಯವರು ಈ ನಿಯಮಗಳು ಮತ್ತು ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಜನವರಿ 22 ರಂದು ಪ್ರಾಣ ಪ್ರತಿಷ್ಠೆಗೆ ಪ್ರಧಾನಿ ಮೋದಿ ಪೂಜೆ ನೆರವೇರಿಸಲಿದ್ದಾರೆ.

Modi Fasting Ram Mandir
Image Credit: Original Source

ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದ ಪುರೋಹಿತರ ತಂಡ ಪ್ರಾಣಪ್ರತಿಷ್ಠೆಯ ಮುಖ್ಯ ವಿಧಿಯನ್ನು ನೆರವರೆಯಿಸಲಿದೆ ಎನ್ನುವ ಬಗ್ಗೆ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಜನವರಿ 22 ರಂದು ನೆರವೇರಲಿರುವ ರಾಮ ಮಂದಿರ ಉದ್ಘಾಟನೆಗಾಗಿ ಪ್ರಮುಖ ರಾಜಕೀಯ ಮುಖಂಡರನ್ನು, ಸಿನಿಮಾ ತಾರೆಗಳನ್ನು, ಕ್ರಿಕೆಟ್ ಆಟಗಾರರನ್ನು ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಲಾಗಿದೆ. ಇನ್ನು ರಾಮ ಮಂದಿರ ಉದ್ಘಾಟನೆಗಾಗಿ ಮೋದಿ ಅವರು ಉಪವಾಸ ಮಾಡುತ್ತಿರುವುದು ವಿಶೇಷವಾಗಿದೆ. ಮೋದಿ ಅವರು ಮತ್ತೊಮ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Join Nadunudi News WhatsApp Group

Join Nadunudi News WhatsApp Group