Money Transfer: ತಪ್ಪಾದ ವ್ಯಕ್ತಿಗೆ ಹಣ ವರ್ಗಾವಣೆ ಮಾಡಿದರೆ ಈ ವಿಧಾನದ ಮೂಲಕ ಹಣ ವಾಪಾಸ್ ಪಡೆಯಿರಿ.

ತಪ್ಪಾದ ಖಾತೆಗೆ ಹಣ ಜಮಾ ಮಾಡಿದರೆ ಈ ವಿಧಾನದ ಮೂಲಕ ಹಣವನ್ನ ಮರಳಿ ವಾಪಾಸ್ ಪಡೆಯಬಹುದು.

Money Transfer Wrong Account: ಇತ್ತೀಚಿನ ದಿನಗಳಲ್ಲಿ ಯುಪಿಐ ವಹಿವಾಟುಗಳು (UPI Payment) ಹೆಚ್ಚಾಗಿವೆ. ಹಣಕಾಸಿನ ವ್ಯವಹಾರಗಳನ್ನು ಮಾಡಲು ಜನಸಾಮಾನ್ಯರು ಯುಪಿಐ ವಹಿವಾಟುಗಳನ್ನು ಬಳಸುತ್ತಾರೆ. ನೀವು ಹಣವನ್ನು ಕಳುಹಿಸುವಾಗ ತಪ್ಪಾಗಿ ಬೇರೆಯವರಿಗೆ ಕಳುಹಿಸುವ ಸಂಭವನೀಯತೆ ಹೆಚ್ಚಾಗಿದೆ.

ನೀವು ಹಣವನ್ನು ನಿಮ್ಮ ಖಾತೆಯಿಂದ ಇನ್ನೊಬ್ಬರ ಖಾತೆಗೆ ಕಳುಹಿಸುವಾಗ ಕೆಲವೊಮ್ಮೆ ತಪ್ಪಾಗುತ್ತದೆ. ನೀವು ಹಾಕಬೇಕಿದ್ದ ಹಣ ಬೇರೆಯವರ ಖಾತೆಗೆ ತಲುಪುತ್ತದೆ.

Money Transfer Wrong Account
Image Source: Zee News

ತಪ್ಪಾದ ಅಕೌಂಟ್ ನಂಬರ್ (Account Number) ಅಥವಾ ತಪ್ಪಾಗಿ ಐಎಫ್ ಎಸ್ ಸಿ ಕೋಡ್ (IFSC Code) ಗಳನ್ನೂ ನಮೂದಿಸುದರಿಂದ ನಿಮ್ಮ ಹಣ ಬೇರೆಯವರ ಖಾತೆಗೆ ವರ್ಗಾವಣೆ ಆಗುತ್ತದೆ. ತಪ್ಪಾಗಿ ಹಣ ಬೇರೆಯವರಿಗೆ ತಲುಪಿದರೆ ಅದನ್ನು ಹಿಂತಿರುಗಿಸಿಕೊಳ್ಳಲು ಮಾರ್ಗವಿದೆ. ಈ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Money Transfer Wrong Account
Image SourceP: Zee News

ನಿಮ್ಮ ಹಣವನ್ನು ಹಿಂಪಡೆಯುವ ವಿಧಾನ
*ನೀವು ಮೊದಲನೆಯದಾಗಿ ಬ್ಯಾಂಕ್ ಗೆ ವರದಿ ಮಾಡಬೇಕು ಅಥವಾ ಕಸ್ಟಮರ್ ಕೇರ್ ಗೆ ಮಾಹಿತಿ ತಿಳಿಸಬೇಕು.

*ಬ್ಯಾಂಕ್ ನಿಮಗೆ ಇಮೇಲ್ ನ ಮೂಲಕ ತಪ್ಪಾದ ವಹಿವಾಟಿನ ಎಲ್ಲಾ ಮಾಹಿತಿಯನ್ನು ಕೇಳುತ್ತದೆ.

Join Nadunudi News WhatsApp Group

*ವಹಿವಾಟಿನ ದಿನಾಂಕ, ಸಮಯ, ನಿಮ್ಮ ಖಾತೆ ಸಂಖ್ಯೆ ಮತ್ತು ತಪ್ಪಾಗಿ ಹಣವನ್ನು ವರ್ಗಾಯಿಸಲಾದ ಖಾತೆಯ ಸಂಖ್ಯೆಯ ವಿವರಗಳನ್ನು ಬ್ಯಾಂಕ್ ಗೆ ನೀಡಬೇಕು.

*ಹಣವನ್ನು ವರ್ಗಾಯಿಸುವ ಸಮಯದಲ್ಲಿ ನೀವು ತಪ್ಪಾದ ಬ್ಯಾಂಕ್ ಖಾತೆ ಅಥವಾ ತಪ್ಪಾದ ಐಎಫ್ಎಸ್ ಸಿ ಕೋಡ್ ಅನ್ನು ನಮೂದಿಸಿದರೆ ಹಣವು ನಿಮ್ಮ ಖಾತೆಗೆ ಸ್ವಯಂ ಚಾಲಿತವಾಗಿ ಬರುತ್ತದೆ.

*ಇನ್ನು ನೀವು ತಪ್ಪಾಗಿ ಯಾರಿಗೆ ಹಣವನ್ನು ಕಳುಹಿಸುತ್ತೀರಿ ಅವರು ಹಣವನ್ನು ಹಿಂದಿರುಗಿಸಲು ನಿರಾಕರಿಸಿದರೆ, ಅವರ ವಿರುದ್ಧ ನೀವು ಕಾನೂನಿನ ಪ್ರಕಾರ ದೂರು ನೀಡಬಹುದು.

Money Transfer Wrong Account
Image Source: India Today

Join Nadunudi News WhatsApp Group