Money Transfer: ಬೇರೆಯವರ ಖಾತೆಗೆ ತಪ್ಪಾಗಿ ಹಣ ಹಾಕಿದರೆ ಚಿಂತೆ ಬೇಡ, ಈ ರೀತಿ ವಾಪಾಸ್ ಪಡೆದುಕೊಳ್ಳಿ.

ಈ ವಿಧಾನದ ಮೂಲಕ ತಪ್ಪಾದ ಖಾತೆಗೆ ಹಣ ವರ್ಗಾವಣೆ ಮಾಡಿದರೆ ಮರಳಿ ಪಡೆಯಬಹುದು.

Money Transfer: ಕೆಲವು ಬಾರಿ ಜನರು UPI ಪೇಮೆಂಟ್ ಮಾಡುವಾಗ ಹಣವನ್ನು ಬೇರೆಯವರ ಖಾತೆಗೆ ವರ್ಗಾವಣೆ ಮಾಡಿರುವುದುಂಟು. ಆದರೆ ಇನ್ನೊಬ್ಬರ ಖಾತೆಗೆ ಹಣ ವರ್ಗಾವಣೆ ಆದರೆ ಅದನ್ನು ತಿರುಗಿ ಪಡೆಯಲು ಆಗುವುದಿಲ್ಲ ಎಂಬುದು ಜನರ ನಂಬಿಕೆಯಾಗಿದೆ.

ಇದು ಸುಳ್ಳು ಅನ್ನುವುದು ಇದೀಗ ಎಸ್ ಬಿ ಐ ಸ್ಪಷ್ಟಪಡಿಸಿದೆ. ಒಮ್ಮೆ ಹಣ ಮಿಸ್ ಆಗಿ ಇನ್ನೊಬ್ಬರ ಖಾತೆಗೆ ವರ್ಗಾವಣೆ ಆದರೆ ಅದನ್ನು ತಿರುಗಿ ಪಡೆಯಬಹುದಾಗಿ. ಇದರ ಬಗ್ಗೆ ಎಸ್ ಬಿ ಐ ಮಾಹಿತಿ ನೀಡಿದೆ. ಇದನ್ನು ತಿಳಿಯೋಣ.

If money is transferred to a wrong account, the money can be refunded by filing a complaint
Image Credit: businessleague

ನಿಮ್ಮ ಹಣ ಬೇರೆಯವರ ಖಾತೆಗೆ ವರ್ಗಾವಣೆ ಆದರೆ ಏನು ಮಾಡಬೇಕು
* ನೀವು ಒಂದು ವೇಳೆ ಬೇರೆ ಬ್ಯಾಂಕ್ ಖಾತೆಗೆ ತಪ್ಪಾಗಿ ಹಣ ಕಳುಹಿಸಿದ್ದರೆ ಆಗ ನಿಮ್ಮ ಖಾತೆ ಇರುವ ಶಾಖ ಕಚೇರಿಯನ್ನು ಸಂಪರ್ಕಿಸಬೇಕು. ಬಳಿಕ ನೀವು ಹಣ ಕಳುಹಿಸಿದವರ ಖಾತೆಯ ಬ್ಯಾಂಕ್ ಅನ್ನು ಅದು ಸಂಪರ್ಕಿಸಿ ಸಮಸ್ಯೆಯನ್ನು ಬಗೆಹರಿಸುತ್ತದೆ.

* ಬ್ಯಾಂಕ್ ಶಾಖೆಯಿಂದ ನಿಮ್ಮ ಹಣವನ್ನು ಮರಳಿ ಕೊಡಿಸಲು ಆಗಲಿಲ್ಲವೆಂದರೆ ನೀವು ಎಸ್ ಬಿ ಐ ನ ಸಿಆರ್ ಸಿ ಎಫ್ ಪೋರ್ಟಲ್ ನಲ್ಲಿ ದೂರು ಸಲ್ಲಿಸಬಹುದು.

Through this method money transfer to wrong account can be recovered.
Image Credit: crcf.sbi.co

crcf.sbi.co.in/ccf ಇಲ್ಲಿ ಕಸ್ಟಮರ್ ರಿಕ್ವೆಸ್ಟ್ ಕಂಪ್ಲೇಂಟ್ ಅಡಿಯಲ್ಲಿ ಇರುವ ರೈಸ್ ರಿಕ್ವೆಸ್ಟ್ ಕಂಪ್ಲೇಂಟ್ ಟೈಪ್ಸ್ ನ ಆಯ್ಕೆಗಳಲ್ಲಿ ರೈಸ್ ಕಂಪ್ಲೇಂಟ್ ಅನ್ನು ಆಯ್ಕೆ ಮಾಡಿ. ಕೆಳಗೆ ಪರ್ಸನಲ್ ಸೆಗ್ ಮೆಂಟ್ ಇಂಡಿವಿಜುವಲ್ ಕಸ್ಟಮ್ ಎಂದಿರುವ ಮೊದಲ ಆಯ್ಕೆ ಆರಿಸಿ.

Join Nadunudi News WhatsApp Group

ನಿಮ್ಮ ಖಾತೆ ಸಂಖ್ಯೆ ನಮೂದಿಸಿ ಕ್ಯಾಪ್ಚಾ ಕೋಡ್ ಹಾಕಿ, ಸೆಂಡ್ ಓಟಿಪಿ ಒತ್ತಿರಿ. ಬ್ಯಾಂಕ್ ಖಾತೆಗೆ ಜೋಡಣೆಯಾದ ನಿಮ್ಮ ಮೊಬೈಲ್ ನಂಬರ್​ ಗೆ ಒಟಿಪಿ ಬರುತ್ತದೆ. ಅದರಿಂದ ಲಾಗಿನ್ ಆಗಿ. ಈ ಮೂಲಕ ನೀವು ದೂರು ಕೊಡಬಹುದು.

Join Nadunudi News WhatsApp Group