Monthly Pension: ರೈತರಿಗಾಗಿ ರಾಜ್ಯ ಸರ್ಕಾರದ ಇನ್ನೊಂದು ಯೋಜನೆ, ಮಾಸಿಕ 3000 ರೂ. ಪಿಂಚಣಿ.

ರಾಜ್ಯದ ರೈತರಿಗೆ ಇನ್ನೊಂದು ಗೂಸ್ ನ್ಯೂಸ್, ಪ್ರತಿ ತಿಂಗಳು ಸಿಗಲಿದೆ 3000 ರೂ

Monthly Pension For Farmer’s: ಈಗಾಗಲೇ ಸಾಕಷ್ಟು ಯೋಜನೆಗಳು ರೈತರಿಗಾಗಿ ಪರಿಚಯವಾಗಿದೆ. ರೈತರ ಏಳಿಗೆಅಗ್ಗಿ ಸರ್ಕಾರ ಸಾಕಷ್ಟು ಯೋಜನೆಯನ್ನು ಜಾರಿಗೆ ತರುತ್ತಿದೆ. ಇನ್ನು ಸರ್ಕಾರೀ ನೌಕರರು ನಿವೃತ್ತಿಯ ನಂತರ ಪಿಂಚಣಿಯ ಹಣವನ್ನು ಪಡೆಯುತ್ತಾರೆ. ಸರ್ಕಾರೀ ನೌಕರರನ್ನು ಹೊರತುಪಡಿಸಿ ಸಾಮಾನ್ಯರು ಪಿಂಚಣಿ ಪಡೆಯಲು ಹೂಡಿಕೆ ಮಾಡಬೇಕಾಗುತ್ತದೆ. ಪಿಂಚಣಿ ಯೋಜನೆಗಳನ್ನು ಸರ್ಕಾರ ಸಾಕಷ್ಟು ಪರಿಚಯಿಸಿದೆ. ಸದ್ಯ ಈ ರಾಜ್ಯ ಸರ್ಕಾರ 60 ವರ್ಷ ಮೇಲ್ಪಟ್ಟ ರೈತರಿಗೆ ಮಾಸಿಕ ಪಿಂಚಣಿ ನೀಡಲು ಮುಂದಾಗಿದೆ.

Monthly Pension For Farmers
Image Credit: The Indian Express

ರೈತರಿಗಾಗಿ ರಾಜ್ಯ ಸರ್ಕಾರದ ಇನ್ನೊಂದು ಯೋಜನೆ, ಮಾಸಿಕ 3000 ರೂ. ಪಿಂಚಣಿ
ಸದ್ಯ ಉತ್ತರ ಪ್ರದೇಶ ಸರ್ಕಾರ ರೈತರಿಗಾಗಿ ಗುಡ್ ನ್ಯೂಸ್ ನೀಡಿದೆ. ರಾಜ್ಯ ಸರ್ಕಾರದಿಂದ 60 ವರ್ಷ ಮೇಲ್ಪಟ್ಟ ರೈತರಿಗೆ ಮಾಸಿಕ 3000 ರೂ. ಪಿಂಚಣಿ ನೀಡುವುದಾಗಿ ಘೋಷಣೆ ಮಾಡಲಾಗಿದೆ. UP ಬಜೆಟ್‌ ನಲ್ಲಿ ರಾಜ್ಯ ಸರ್ಕಾರ ಈ ಯೋಜನೆಯನ್ನು ಘೋಷಿಸಿದೆ. 60 ವರ್ಷ ಮೇಲ್ಪಟ್ಟ ರೈತರು ಈ ಹಣವನ್ನು ಪಿಂಚಣಿಯಾಗಿ ಪಡೆಯುತ್ತಾರೆ. ಇದರಿಂದ ರೈತರು ಕೃಷಿಯ ಜತೆಗೆ ತಮ್ಮ ಜೀವನವನ್ನು ಆರ್ಥಿಕ ತೊಂದರೆ ಇಲ್ಲದೆ ಕಳೆಯಬಹುದಾಗಿದೆ. ಸದ್ಯ ಈ ಯೋಜನೆ ಉತ್ತರ ಪ್ರದೇಶದಲ್ಲಿ ಜಾರಿಗೆ ಬಂದಿದ್ದು ನಮ್ಮ ಸರ್ಕಾರ ಕೂಡ ಈ ಯೋಜನೆಯನ್ನ ಜಾರಿಗೆ ತರುವ ಸಾಧ್ಯತೆ ಇದೆ ಎಂದು ಹೇಳಬಹುದು.

ಈ ಯೋಜನೆಗಾಗಿ 200 ಕೋಟಿ ಮೀಸಲಿಟ್ಟ ಸರ್ಕಾರ
ದೇಶದ ಬೆನ್ನೆಲುಬಾಗಿರುವ ರೈತರು ಆರ್ಥಿಕ ಸಮಸ್ಯೆ ಎದುರಿಸಬಾರದು ಎನ್ನುವುದು ಸರ್ಕಾರ ಗುರಿಯಾಗಿದೆ. ಈ ಹಿನ್ನಲೆ ರೈತರಿಗಾಗಿ ವಿವಿಧ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಅರ್ಹ ರೈತರು ಕೂಡ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. 60 ವರ್ಷ ಮೇಲ್ಪಟ್ಟ ಉತ್ತರ ಪ್ರದೇಶ ರಾಜ್ಯದ ರೈತರು ಮಾಸಿಕ ಪಿಂಚಣಿಯನ್ನು ಪಡೆಯಬಹುದು.

Monthly Pension For Farmers 2024
Image Credit: Coverfox

ಕೃಷಿ ಕ್ಷೇತ್ರದ ಬೆಳವಣಿಗೆಗಾಗಿ ರಾಜ್ಯ ಸರ್ಕಾರ ಈ ಯೋಜನೆಗಳನ್ನು ಪ್ರಾರಂಭಿಸಲು ಯೋಜಿಸಿದೆ. ‘ರಾಜ್ಯ ಕೃಷಿ ಅಭಿವೃದ್ಧಿ ಯೋಜನೆ’ಗೆ 200 ಕೋಟಿ ರೂ. ಮೀಸಲಿಡಲಾಗಿದ್ದು, ಎರಡನೇ ವಿಶ್ವಬ್ಯಾಂಕ್ ಬೆಂಬಲಿತ ‘ಯುಪಿ ಸರ್ಕಾರದ ಯೋಜನೆ’ಗೆ 200 ಕೋಟಿ ಮೀಸಲಿಡಲಾಗಿದೆ. ಈ ಎರಡು ಯೋಜನೆಗಳನ್ನು ರೈತರ ಹಿತಕ್ಕಾಗಿ ಜಾರಿಗೆ ತರಲಾಗಿದೆ.

Join Nadunudi News WhatsApp Group

Join Nadunudi News WhatsApp Group