Moto G04: ಇನ್ಮುಂದೆ ಎಲ್ಲರ ಕೈಯಲ್ಲೂ ಬರಲಿದೆ ಮೋಟೋ ಮೊಬೈಲ್ಸ್, ಅಗ್ಗದ ಬೆಲೆಗೆ ಮೋಟೋ ಮೊಬೈಲ್ ಲಾಂಚ್

ಭಾರತದಲ್ಲಿ ಮೊಟೊರೊಲಾ ಕಂಪನಿಯ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ

Moto G04 Smartphone Launch: ದೇಶದಲ್ಲಿ ಸ್ಮಾರ್ಟ್ ಫೋನ್ ಖರೀದಿ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರ ಬೇಡಿಕೆಗೆ ಅನುಗುಣವಾಗಿ ಪ್ರತಿಷ್ಠಿತ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ಹೊಸ ಹೊಸ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡುತ್ತಿರುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಮೊಟೊರೊಲಾ (Motorola) ಸ್ಮಾರ್ಟ್ ಫೋನ್ ಗಳು ಬಹು ಬೇಡಿಕೆಯ ಫೋನ್ ಗಳಾಗಿದೆ. ಯಾಕೆಂದರೆ ಮೊಟೊರೊಲಾ ಕಂಪನಿಯ ಫೋನ್ ಗಳು ಬಜೆಟ್ ಪ್ರಿಯರಿಗೆ ಹೇಳಿಮಾಡಿಸಿದಂತಿರುತ್ತವೆ. ಕಡಿಮೆ ಬೆಲೆಯ ಫೋನ್ ಆಗಿದ್ದರು ಆಕರ್ಷಕ ಫೀಚರ್ಸ್ ಗಳನ್ನೂ ಮೊಟೊರೊಲಾ ಸ್ಮಾರ್ಟ್ ಫೋನ್ ಒಳಗೊಂಡಿರುತ್ತದೆ.

Moto G04 Smartphone Launch
Imgae Credit: Digit

ಭಾರತದಲ್ಲಿ ಮೊಟೊರೊಲಾ ಕಂಪನಿಯ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ
ಇದೀಗ ಮೊಟೊರೊಲಾ ಬಿಡುಗಡೆ ಮಾಡಲು ಸಿದ್ಧತೆ ನೆಡೆಸುತ್ತಿರುವ ಸ್ಮಾರ್ಟ್ ಫೋನ್ ಫೆಬ್ರವರಿ 15 ರಂದು ಅನಾವರಣಗೊಳ್ಳಲಿದೆ. ಆದರೆ ಈಗಾಗಲೇ ಆಯ್ದ ಜಾಗತಿಕ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ. ಮೋಟೊರೋಲದ ಈ ಹೊಸ ಸ್ಮಾರ್ಟ್ ಫೋನ್ ನ ಹೆಸರು Moto G04.

Moto G04 Smartphone Feature
ಮೋಟೊರೋಲದ ಈ ಹೊಸ ಸ್ಮಾರ್ಟ್ ಫೋನ್ 4GB+64GB ಹಾಗೂ 8GB+128GB ಸ್ಟೋರೇಜ್ ರೂಪಾಂತಗಳಲ್ಲಿ ಗ್ರಾಹಕರ ಕೈ ಸೇರಲಿದೆ. ಮೋಟೋ G04 90Hz ರಿಫ್ರೆಶ್ ದರದೊಂದಿಗೆ 6.6 ಇಂಚಿನ HD+ ಡಿಸ್ ಪ್ಲೇ ಅನ್ನು ಪಡೆದುಕೊಂಡಿದೆ. ಹಾಗೆ ಈ ಸ್ಮಾರ್ಟ್ ಫೋನ್ 16MP AI ಕ್ಯಾಮರಾ ವನ್ನು ಹೊಂದಿದೆ. ಇದರ ಜೊತೆಗೆ ಪೋರ್ಟ್ರೇಟ್ ಮೋಡ್ ಆಯ್ಕೆಯನ್ನು ಪಡೆದುಕೊಂಡಿದೆ. ಮೋಟೋ G04 ಸ್ಮಾರ್ಟ್ ಫೋನ್ ನ ಬ್ಯಾಟರಿ ಬಗ್ಗೆ ಮಾತಾಡುದಾದರೆ ಇದು 5000 mAh ಬ್ಯಾಟರಿ ಅನ್ನು ಒಳಗೊಂಡಿದೆ. 10W ಚಾರ್ಜಿನ್ಗ್ ತಂತ್ರಜ್ಞಾನವನ್ನು ಪಡೆದುಕೊಂಡಿದೆ. ಹಾಗೆ ಇನ್ನಿತರ ಅನೇಕ ಆಕರ್ಷಕ ಫೀಚರ್ ಗಳೊಂದಿಗೆ ಈ ಸ್ಮಾರ್ಟ್ ಫೋನ್ ಭಾರತದಲ್ಲಿ ಲಾಂಚ್ ಆಗಲಿದೆ.

Moto G04 Smartphone Price
Image Credit: Financialexpress

Moto G04 Smartphone Price
ಭಾರತದಲ್ಲಿ ಮೋಟೋ G04 ಸ್ಮಾರ್ಟ್ ಫೋನ್ ನ ಬೆಲೆ ಬಗ್ಗೆ ಮಾಹಿತಿ ನೀಡಿಲ್ಲ, ಆದರೆ ಈ ಸ್ಮಾರ್ಟ್ ಫೋನ್ ಅನ್ನು ಇತ್ತೀಚಿಗೆ ಯುರೋಪ್ ನಲ್ಲಿ EUR 119 ಗೆ ಬಿಡುಗಡೆ ಮಾಡಿತ್ತು. ಅಂದಾಜಿನ ಪ್ರಕಾರ ಭಾರತದಲ್ಲಿ ಈ ಸ್ಮಾರ್ಟ್ ಫೋನ್ ನ ಬೆಲೆ 10,751 ರೂಪಾಯಿ ಇರಬಹುದು. ದೇಶಿಯ ಮಾರುಕಟ್ಟೆಯಲ್ಲಿ ಇದು ಕೈಗೆಟಕುವ ಸ್ಮಾರ್ಟ್ ಫೋನ್ ಆಗಿ ಬಿಡುಗಡೆಯಾಗಲಿದೆ.

Join Nadunudi News WhatsApp Group

Join Nadunudi News WhatsApp Group