Moto G13: ಅತೀ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆ ಆಗಿದೆ Moto G13, ಆಫರ್ ಕೆಲವು ದಿನ ಮಾತ್ರ.

ಈಗ ಅತೀ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದು ಮೋಟೋ G13 ಸ್ಮಾರ್ಟ್ಫೋನ್.

Moto G13 Smartphone: ಮೆಟೋ ಸಂಸ್ಥೆ ತನ್ನ ಮೆಟೋ ಜಿ 13 (Moto G13) ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದೆ. ಈ ಫೋನ್ ಬಜೆಟ್ ಬೆಲೆಯ ಫೋನ್ ಆಗಿದ್ದು ಅತಿ ಕಡಿಮೆ ಬೆಲೆಯಲ್ಲಿ ಮಾರಾಟ ಆಗುತ್ತಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಪ್ರಸಿದ್ಧ ಮೆಟೊರೊಲಾ ಕಂಪನಿ ಬಜೆಟ್ ಬೆಳೆಗೆ ಆಕರ್ಷಕ ಸ್ಮಾರ್ಟ್ ಫೋನ್ ಗಳನ್ನೂ ಪರಿಚಯಿಸುತ್ತಲೇ ಇರುತ್ತದೆ.

ಇತ್ತೀಚಿಗಷ್ಟೇ ಮೆಟೊರೊಲಾ ಮೆಟೋ ಜಿ ಪವರ್ 5 ಜಿ ಅನ್ನು ಬಿಡುಗಡೆ ಮಾಡಿ ಸದ್ದು ಮಾಡಿತ್ತು. ಇದು 5ಜಿ ಫೋನಾಗಿದ್ದರೂ ಕೈಗೆಟಕುವ ಬೆಲೆಗೆ ಲಭ್ಯವಿದೆ.

Moto G13 Smartphone
Image Source: The Indian Express

ಮೋಟೋ G13 ಸ್ಮಾರ್ಟ್ ಫೋನ್ ನ ಬೆಲೆ
ಮೋಟೋ G13 ಸ್ಮಾರ್ಟ್ ಫೋನ್ 4 gb RAM+ 64GB ಸ್ಟೋರೇಜ್ ವೆರಿಯಂಟ್ ಆಯ್ಕೆ ಮೇಲೆ ಶೇಕಡಾ 28 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ ಕಾರ್ಟ್ ನಲ್ಲಿ ಈ ಸ್ಮಾರ್ಟ್ ಫೋನ್ ಕೇವಲ 9,999 ರೂಪಾಯಿಗೆ ಮಾರಾಟ ಕಾಣುತ್ತಿದೆ. ಜೊತೆಗೆ ಕೆಲವು ಬ್ಯಾಂಕ್ ಗಳಿಂದ ಡಿಸ್ಕೌಂಟ್ ದೊರೆಯುತ್ತಿದೆ. ಎಕ್ಸ್ಚೇಂಜ್ ಆರ್ ಕೂಡ ಘೋಷಣೆ ಮಾಡಲಾಗಿದೆ.

Moto G13 Smartphone
Image Source: 91Mobiles

ಮೋಟೋ G13 ಸ್ಮಾರ್ಟ್ ಫೋನ್ ನ ವೈಶಿಷ್ಟ್ಯತೆ
ಈ ಸ್ಮಾರ್ಟ್ ಫೋನ್ 6.5 ಇಂಚಿನ ಐಪಿಎಸ್ ಎಲ್ ಸಿಡಿ ಹೆಚ್ ಡಿ+ ರೆಸಲ್ಯೂಷನ್ ಡಿಸ್ ಪ್ಲೇ ಹೊಂದಿದ್ದು 576hz ಟಚ್ ಸ್ಯಾಪ್ಲಿಂಗ್ ರೇಟ್ ಅನ್ನು ಪಡೆದುಕೊಂಡಿದೆ. 90Hz ರಿಫ್ರೆಶ್ ರೆಟ್ ಇರುವ ಪಾಂಡಾ ಗ್ಲಾಸ್ ರಕ್ಷಣೆಯನ್ನು ನೀಡಲಾಗಿದೆ.

ಮೀಡಿಯಾ ಟೆಕ್ ಹೀಲಿಯೋ g85 C ಪ್ರೊಸೆಸರ್ ನಲ್ಲಿ ಕಾರ್ಯ ನಿರ್ವಹಿಸಲಿದ್ದು ಆಂಡ್ರಾಯ್ಡ್ 13 ಓಎಸ್ ನಲ್ಲಿ ರನ್ ಆಗುತ್ತದೆ. ಸ್ಟೋರೇಜ್ ಅನ್ನು ವಿಸ್ತರಣೆ ಮಾಡಿಕೊಳ್ಳಲು ಎಸ್ ಡಿ ಕಾರ್ಡ್ ಸ್ಲಾಟ್ ಇದೆ. ಮೊಟೊ G13 ಸ್ಮಾರ್ಟ್‌ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದೆ.

Join Nadunudi News WhatsApp Group

ಇದರಲ್ಲಿ 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾ ಪಿಕ್ಸೆಲ್ ಸೆಕೆಂಡರಿ ಸೆನ್ಸರ್‌ ಹಾಗೂ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಸೆನ್ಸರ್‌ ಅನ್ನು ಪಡೆದಿದೆ. ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್​ನಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಕಲರ್ ಚೇಂಜಿಂಗ್ ಸೇರಿದಂತೆ ಕೆಲ ಬೇಸಿಕ್ ಆಯ್ಕೆಗಳನ್ನು ಕ್ಯಾಮೆರಾದಲ್ಲಿ ನೀಡಲಾಗಿದೆ.

Moto G13 Smartphone
Image Source: Motorola

Join Nadunudi News WhatsApp Group