Moto G13: ಈ ಕಂಪನಿಯ ಸ್ಮಾರ್ಟ್ ಫೋನ್ ಮೇಲೆ ಭರ್ಜರಿ 5 ಸಾವಿರ ರೂ ಡಿಸ್ಕೌಂಟ್.

ಮೋಟೋ G13 ಸ್ಮಾರ್ಟ್ ಫೋನ್ ಮೇಲೆ ಭರ್ಜರಿ ರಿಯಾಯಿತಿ ಘೋಷಣೆ ಮಾಡಿದ ಫ್ಲಿಪ್ ಕಾರ್ಟ್.

Moto G13 Smartphone Price: ಇತ್ತೀಚಿಗೆ ಮೊಟೊರೊಲಾ(Motorola) ಕಂಪೆನಿಯಿಂದ ಹೊಸ ಹೊಸ ಸ್ಮಾರ್ಟ್ ಫೋನ್ ಗಳು(Smart Phone)  ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡುತ್ತಿವೆ. ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಉತ್ತಮ ಆಯ್ಕೆಯಂತೂ ಮಾರುಕಟ್ಟೆಯಲ್ಲಿ ಲಭ್ಯವಿದೆ ಎನ್ನಬಹುದು. ಇದೀಗ ಮೊಟೊರೊಲಾ ಕಂಪನಿಯ ಮೋಟೋ G13 ಸ್ಮಾರ್ಟ್ ಫೋನ್ ಅಗ್ಗದ ಬೆಲೆಯಲ್ಲಿ ಖರಿದಿದೆ ಲಭ್ಯವಿದೆ.

ಮೊಟೊರೊಲಾದ ಮೋಟೋ G13 ಸ್ಮಾರ್ಟ್ ಫೋನ್ ನ ಬೆಲೆ
ಮೊಟೊರೊಲಾದ ಮೋಟೋ G13 ಸ್ಮಾರ್ಟ್ ಫೋನ್ ಫ್ಲಿಪ್ ಕಾರ್ಟ್ ನಲ್ಲಿ ರಿಯಾಯಿತಿಯಲ್ಲಿ ಖರೀದಿಗೆ ಸಿಗುತ್ತಿದೆ. ಮೋಟೋ G13 ಫ್ಲಿಪ್ ಕಾರ್ಟ್ ನಲ್ಲಿ 28% ನಲ್ಲಿ ಸೇಲ್ ಕಾಣುತ್ತಿದೆ.

Moto G13 smartphone features
Image Credit: News18

ಪ್ರಸಿದ್ಧ ಇ-ಕಾಮರ್ಸ್ ತಾಣವಾದ ಫ್ಲಿಪ್ ಕಾರ್ಟ್ ನಲ್ಲಿ ಮೋಟೋ G13 ಸ್ಮಾರ್ಟ್ ಫೋನ್ ಕೇವಲ 9999 ರೂಪಾಯಿಗೆ ಮಾರಾಟ ಕಾಣುತ್ತಿದೆ. ಇದರ ಮೂಲ ಬೆಲೆ 13,999 ರೂಪಾಯಿ ಆಗಿದೆ. ಜೊತೆಗೆ ಕೆಲವು ಆಯ್ದ ಬ್ಯಾಂಕ್ ಗಳಿಂದ ಡಿಸ್ಕೌಂಟ್ ದೊರೆಯುತ್ತದೆ. ಎಕ್ಸ್ಚೇಂಜ್ ಆಫರ್ ಕೂಡ ಘೋಷಣೆ ಮಾಡಲಾಗಿದೆ.

ಮೋಟೋ G13 ಸ್ಮಾರ್ಟ್ ಫೋನ್ ನ ವಿಶೇಷತೆ
ಮೋಟೋ G13 ಸ್ಮಾರ್ಟ್ ಫೋನ್ 6.5 ಇಂಚಿನ ಐಪಿಎಸ್ ಎಲ್ ಸಿಡಿ ಹೆಚ್ ಡಿ + ರೆಸಲ್ಯೂಷನ್ ಡಿಸ್ ಪ್ಲೆ ಹೊಂದಿದ್ದು, 576 HZ ಟಚ್ ಸ್ಯಾಪ್ಲಿಂಗ್ ರೆಟ್ ಅನ್ನು ಪಡೆದುಕೊಂಡಿದೆ.

90 HZ ರಿಫ್ರೆಶ್ ರೆಟ್ ಇರುವ ಪಾಂಡಾ ಗ್ಲಾಸ್ ರಕ್ಷಣೆಯನ್ನು ನೀಡಲಾಗಿದೆ. ಮೀಡಿಯಾ ಟೆಕ್ ಹಿಲಿಯೊ G85 SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಆಂಡ್ರಾಯ್ಡ್‌ 13 ಓಎಸ್​ನಲ್ಲಿ ರನ್ ಆಗುತ್ತದೆ. ಸ್ಟೋರೇಜ್‌ ಅನ್ನು ವಿಸ್ತರಣೆ ಮಾಡಿಕೊಳ್ಳಲು ಎಸ್‌ಡಿ ಕಾರ್ಡ್‌ ಸ್ಲಾಟ್‌ ಇದೆ.

Join Nadunudi News WhatsApp Group

Moto G13 smartphone features
Image Credit: Notebookcheck

ಮೊಟೊ G13 ಸ್ಮಾರ್ಟ್‌ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದೆ. ಇದರಲ್ಲಿ 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾ ಪಿಕ್ಸೆಲ್ ಸೆಕೆಂಡರಿ ಸೆನ್ಸರ್‌ ಹಾಗೂ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಸೆನ್ಸರ್‌ ಅನ್ನು ಪಡೆದಿದೆ. ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್​ನಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಕಲರ್ ಚೇಂಜಿಂಗ್ ಸೇರಿದಂತೆ ಕೆಲ ಬೇಸಿಕ್ ಆಯ್ಕೆಗಳನ್ನು ಕ್ಯಾಮೆರಾದಲ್ಲಿ ನೀಡಲಾಗಿದೆ.

Join Nadunudi News WhatsApp Group